For Quick Alerts
  ALLOW NOTIFICATIONS  
  For Daily Alerts

  ಪತಿ ಪರ ನಿಂತ ಶಿಲ್ಪಾ: ಕುಂದ್ರಾ ನಿರ್ಮಿಸಿದ್ದು ಅಶ್ಲೀಲ ವಿಡಿಯೋಗಳಲ್ಲ ಎಂದ ನಟಿ

  |

  ಅಶ್ಲೀಲ (ಪೋರ್ನ್) ವಿಡಿಯೊ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪದಲ್ಲಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

  ನಿನ್ನೆಯಷ್ಟೆ ರಾಜ್ ಕುಂದ್ರಾ ಜೊತೆಗೆ ಅವರ ನಿವಾಸಕ್ಕೆ ಭೇಟಿ ನೀಡಿ ಮಹಜರು ಮಾಡಿದ ಪೊಲೀಸರು, ಶಿಲ್ಪಾ ಶೆಟ್ಟಿ ಹೇಳಿಕೆಯನ್ನು ಸಹ ದಾಖಲಿಸಿಕೊಂಡಿದ್ದಾರೆ.

  ಪೊಲೀಸರ ಬಳಿ ನಟಿ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಪರವಾಗಿ ಹೇಳಿಕೆ ನೀಡಿದ್ದಾರೆ ಎಂದು ಮುಂಬೈನ ಹಲವು ಮಾಧ್ಯಮಗಳು ವರದಿ ಮಾಡಿವೆ. ರಾಜ್ ಕುಂದ್ರಾ ನಿರ್ಮಿಸಿದ್ದು ಪೋರ್ನ್ ವಿಡಿಯೋ ಅಲ್ಲ ಬದಲಿಗೆ ಸಾಫ್ಟ್ ಪೋರ್ನ್ ಅಥವಾ ಎರೊಟಿಕಾ ಮಾದರಿಯ ವಿಡಿಯೋಗಳು. ಅವುಗಳ ನಿರ್ಮಾಣ ಹಾಗೂ ವೀಕ್ಷಣೆಗೆ ಅನುಮತಿ ಇವೆ ಎಂದಿದ್ದಾರೆ ಶಿಲ್ಪಾ ಶೆಟ್ಟಿ.

  ಉದ್ಯಮದ ಪಾಲುದಾರಳಲ್ಲ ಎಂದ ಶಿಲ್ಪಾ ಶೆಟ್ಟಿ

  ಉದ್ಯಮದ ಪಾಲುದಾರಳಲ್ಲ ಎಂದ ಶಿಲ್ಪಾ ಶೆಟ್ಟಿ

  ರಾಜ್ ಕುಂದ್ರಾ ಎರೊಟಿಕಾ ಮಾದರಿಯ ವಿಡಿಯೋ ನಿರ್ಮಾಣ ಮಾಡುತ್ತಿರುವ ವಿಷಯ ನನಗೆ ತಿಳಿದಿತ್ತು ಎಂದು ಸಹ ಶಿಲ್ಪಾ ಶೆಟ್ಟಿ ಹೇಳಿದ್ದಾರೆ. ಆದರೆ ಆ ಉದ್ಯಮಕ್ಕೆ ನಾನು ಪಾಲುದಾರಳಾಗಿರಲಿಲ್ಲ ಎಂದು ಸಹ ತಿಳಿಸಿದ್ದಾರೆ ಶಿಲ್ಪಾ ಶೆಟ್ಟಿ.

  ಹಲವು ಒಟಿಟಿಗಳು, Appಗಳು ಸಾಫ್ಟ್ ಪೋರ್ನ್ ವಿಡಿಯೋ ಒದಗಿಸುತ್ತವೆ

  ಹಲವು ಒಟಿಟಿಗಳು, Appಗಳು ಸಾಫ್ಟ್ ಪೋರ್ನ್ ವಿಡಿಯೋ ಒದಗಿಸುತ್ತವೆ

  ಸಾಫ್ಟ್ ಪೋರ್ನ್ ಮಾದರಿಯ ವಿಡಿಯೋಗಳನ್ನು ಒದಗಿಸುವ ಹಲವಾರು ಆಪ್‌ಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆಲ್ಟ್ ಬಾಲಾಜಿ ಎಂಬ ಒಟಿಟಿ ಇದೇ ರೀತಿಯ ಕಂಟೆಂಟ್‌ಗಳಿಗೆ ಜನಪ್ರಿಯವಾಗಿದೆ. ಕಾನೂನಿನ ಪ್ರಕಾರವು ಈ ರೀತಿಯ ವಿಡಿಯೋಗಳ ನಿರ್ಮಾಣ ಹಾಗೂ ಮಾರಾಟ ತಪ್ಪಲ್ಲ. ಆದರೆ ಪೋರ್ನ್ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ.

  ವಂಚನೆ ಪ್ರಕರಣ ಸಹ ದಾಖಲಾಗಿದೆ

  ವಂಚನೆ ಪ್ರಕರಣ ಸಹ ದಾಖಲಾಗಿದೆ

  ರಾಜ್‌ ಕುಂದ್ರಾ ಮೇಲೆ ಕೇವಲ ಅಶ್ಲೀಲ ವಿಡಿಯೋ ನಿರ್ಮಾಣದ ಪ್ರಕರಣ ಮಾತ್ರವೇ ದಾಖಲಾಗಿಲ್ಲ ಅದರ ಜೊತೆಗೆ ವಂಚನೆ ಪ್ರಕರಣವೂ ದಾಖಲಾಗಿದೆ. ಆಡಿಷನ್ ಹೆಸರಲ್ಲಿ ನಟಿಯರ, ಮಾಡೆಲ್‌ಗಳ ಅಶ್ಲೀಲ ವಿಡಿಯೋಗಳನ್ನು ಮಾಡಿ ಅದನ್ನು ಅವರ ಅನುಮತಿಗೆ ವಿರುದ್ಧವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪವೂ ರಾಜ್ ಕುಂದ್ರಾ ಮೇಲೆ ಇದೆ. ಒಂದೊಮ್ಮೆ ರಾಜ್ ಕುಂದ್ರಾ ಪೋರ್ನ್ ವಿಡಿಯೋ ನಿರ್ಮಾಣ ಮಾಡಿಲ್ಲ, ಕೇವಲ ಸಾಫ್ಟ್ ಪೋರ್ನ್ ವಿಡಿಯೋ ನಿರ್ಮಾಣ ಮಾಡಿದ್ದಾರೆ ಎಂದಾದರೂ ವಂಚನೆ ಪ್ರಕರಣದಲ್ಲಿ ರಾಜ್ ಕುಂದ್ರಾ ಸಿಕ್ಕಿ ಬೀಳುವ ಸಾಧ್ಯತೆ ಇದೆ.

  ಹುಡುಗರನ್ನ ಹೊಗಳಿರೋ ಸಾಂಗ್ ನ ಇದುವರೆಗೂ ಯಾರು ಮಾಡಿಲ್ಲ
  ಜುಲೈ 19ರಂದು ರಾಜ್ ಕುಂದ್ರ ಬಂಧನವಾಗಿದೆ

  ಜುಲೈ 19ರಂದು ರಾಜ್ ಕುಂದ್ರ ಬಂಧನವಾಗಿದೆ

  ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ರಾಜ್ ಕುಂದ್ರಾ ಅವರನ್ನು ಜುಲೈ 27ರ ವರೆಗೆ ಪೊಲೀಸರ ವಶಕ್ಕೆ ನೀಡಿದೆ. ರಾಜ್ ಕುಂದ್ರಾ ಈ ಅಶ್ಲೀಲ ವಿಡಿಯೋ ಉದ್ಯಮದಿಂದ ದಿನಕ್ಕೆ 6 ರಿಂದ 8 ಲಕ್ಷ ಹಣ ಸಂಪಾದನೆ ಮಾಡುತ್ತಿದ್ದರು ಎನ್ನಲಾಗಿದೆ.

  English summary
  Actress Shilpa Shetty gave statement in favor of husband Raj Kundra in indecent video case. Raj Kundra arrested on July 19 by Mumbai Police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X