For Quick Alerts
  ALLOW NOTIFICATIONS  
  For Daily Alerts

  ಹೊಸ ಮೈಲುಗಲ್ಲು ತಲುಪಿದ ಸಾಧನೆ ಮಾಡಿದ ನಟಿ ಶ್ರದ್ಧಾ ಕಪೂರ್

  |

  ಕಳೆದ ಕೆಲವು ವರ್ಷಗಳಿಂದ ತಮ್ಮ ಅದ್ಭುತ ಅಭಿನಯದ ಮೂಲಕ ಹೆಜ್ಜೆ ಗುರುತು ಮೂಡಿಸಿರುವ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತೊಂದು ಅಪರೂಪದ ಸಾಧನೆ ಮಾಡಿದ್ದಾರೆ. ನಟ ನಟಿಯರ ಅಚ್ಚುಮೆಚ್ಚಿನ ಸಾಮಾಜಿಕ ಜಾಲತಾಣದಲ್ಲಿ ಅವರು 50 ಮಿಲಿಯನ್ ಹಿಂಬಾಲಕರನ್ನು ಪಡೆದ ಹೊಸ ಮೈಲುಗಲ್ಲು ಮುಟ್ಟಿದ್ದಾರೆ.

  ಚಿತ್ರರಂಗದಲ್ಲಿನ ಕುಟುಂಬಗಳ ಕುಡಿಯ ನಡುವೆ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿರುವವರು ಶ್ರದ್ಧಾ ಕಫೂರ್. ವಿವಾದ, ಕಿತ್ತಾಟಗಳಿಂದ ಹೆಚ್ಚು ದೂರವೇ ಇರುವ ಅವರು ತಮ್ಮ ಸ್ವಭಾವ ಮತ್ತು ನಟನೆ ಎರಡೂ ಕಾರಣದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಪಕ್ಕದ್ಮನೆ ಹುಡುಗಿಯಂತೆ ಇರುವ ಶ್ರದ್ಧಾ, ತಾವು ಜನರ ಪ್ರೀತಿಯ ನಟಿ ಎಂಬುದನ್ನು ಇನ್‌ಸ್ಟಾಗ್ರಾಂ ಮೂಲಕವೂ ಸಾಬೀತುಪಡಿಸಿಕೊಂಡಿದ್ದಾರೆ. ಮುಂದೆ ಓದಿ...

  ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ ಮ್ಯಾಜಿಕ್: 50 ಮಿಲಿಯನ್ ಗಡಿ ದಾಟಿದ 3ನೇ ಸೆಲೆಬ್ರಿಟಿಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ ಮ್ಯಾಜಿಕ್: 50 ಮಿಲಿಯನ್ ಗಡಿ ದಾಟಿದ 3ನೇ ಸೆಲೆಬ್ರಿಟಿ

  ಶ್ರದ್ಧಾ ಮೂರನೇಯವರು

  ಶ್ರದ್ಧಾ ಮೂರನೇಯವರು

  ಬಾಲಿವುಡ್ ನಟ ನಟಿಯರೆಂದರೆ ದೇಶ ವಿದೇಶದಲ್ಲಿರುವ ಜನರೆಲ್ಲರೂ ಫಾಲೋ ಮಾಡುತ್ತಾರೆ. ಹೀಗಾಗಿ ಅವರು 50 ಮಿಲಿಯನ್ ಫಾಲೋವರ್‌ಗಳನ್ನು ಪಡೆದಿರುವುದರಲ್ಲಿ ವಿಶೇಷವೇನಿದೆ ಎಂಬ ಪ್ರಶ್ನೆ ಮೂಡಬಹುದು. ಆದರೆ, ಭಾರತೀಯ ಚಿತ್ರರಂಗದಲ್ಲಿ 50 ಮಿಲಿಯನ್ ಫಾಲೋವರ್‌ಗಳನ್ನು ಶ್ರದ್ಧಾ ಅವರಿಗಿಂತ ಮುಂಚೆ ಪಡೆದವರು ಇಬ್ಬರು ಮಾತ್ರ ಎನ್ನುವುದು ಗಮನಾರ್ಹ. 67 ಮಿಲಿಯನ್‌ಗೂ ಅಧಿಕ ಫಾಲೋವರ್‌ಗಳನ್ನು ಹೊಂದಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಭಾರತೀಯ.

  ಪ್ರಿಯಾಂಕಾ ಚೋಪ್ರಾ ಮೊದಲು

  ಪ್ರಿಯಾಂಕಾ ಚೋಪ್ರಾ ಮೊದಲು

  ಹಾಲಿವುಡ್ ಚಿತ್ರಗಳಲ್ಲಿಯೂ ನಟಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಪಡೆದಿರುವ ಭಾರತೀಯ ಚಿತ್ರರಂಗದ ನಟಿ. ಪ್ರಸ್ತುತ ಅವರಿಗೆ 54.7 ಮಿಲಿಯನ್ ಫಾಲೋವರ್‌ಗಳಿದ್ದಾರೆ. ಎರಡನೆಯ ಸ್ಥಾನದಲ್ಲಿರುವ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ 50 ಮಿಲಿಯನ್ ದಾಟಿದ್ದರು. ಅವರಿಗೆ 50.3 ಮಿಲಿಯನ್ ಫಾಲೋವರ್‌ಗಳಿದ್ದಾರೆ.

  ಶ್ರದ್ಧಾ ಕಪೂರ್‌ಳನ್ನು ಕೆಲಸಕ್ಕೆ ಕಳಿಸುವುದಿಲ್ಲ ಎಂದ ಶಕ್ತಿ ಕಪೂರ್ಶ್ರದ್ಧಾ ಕಪೂರ್‌ಳನ್ನು ಕೆಲಸಕ್ಕೆ ಕಳಿಸುವುದಿಲ್ಲ ಎಂದ ಶಕ್ತಿ ಕಪೂರ್

  ಆಲಿಯಾ ಭಟ್ ಹಿಂದಿದ್ದಾರೆ

  ಆಲಿಯಾ ಭಟ್ ಹಿಂದಿದ್ದಾರೆ

  ಆದರೆ ಸಮಕಾಲೀನ ನಟಿಯರಿಗೆ ಹೋಲಿಸಿದರೆ ಶ್ರದ್ಧಾ ಅನೇಕರನ್ನು ಹಿಂದಿಕ್ಕಿದ್ದಾರೆ. ಶ್ರದ್ಧಾ ನಂತರದ ಸ್ಥಾನದಲ್ಲಿರುವ ಆಲಿಯಾ ಭಟ್ ಕೂಡ ಈ ಮೈಲುಗಲ್ಲಿನ ಸಮೀಪವಿದ್ದು, 47.8 ಮಿಲಿಯನ್ ಫಾಲೋವರ್‌ಗಳನ್ನು ಪಡೆದಿದ್ದಾರೆ. ಶ್ರದ್ಧಾ ಕಪೂರ್ ಟ್ವಿಟ್ಟರ್‌ನಲ್ಲಿಯೂ 13 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

  ಧನ್ಯವಾದ ಎಂದ ಶ್ರದ್ಧಾ

  ಧನ್ಯವಾದ ಎಂದ ಶ್ರದ್ಧಾ

  50 ಮಿಲಿಯನ್ ಗಡಿ ದಾಟಿದ ಸಂಭ್ರಮವನ್ನು ಶ್ರದ್ಧಾ ಹಂಚಿಕೊಳ್ಳದೆ ಇದ್ದರೂ ಅವರ ಅಭಿಮಾನಿಗಳು ವಿವಿಧ ಬಗೆಯ ಫೋಟೊ ಕೊಲಾಜ್‌ಗಳನ್ನು ಮಾಡಿ ಅವರಿಗೆ ಶುಭ ಹಾರೈಸಿದ್ದಾರೆ. ಇವುಗಳನ್ನು ಇನ್‌ಸ್ಟಾಗ್ರಾಂನ ಸ್ಟೋರೀಸ್‌ನಲ್ಲಿ ಶೇರ್ ಮಾಡಿಕೊಂಡಿರುವ ಶ್ರದ್ಧಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

  ಎಲ್ಲ ಸ್ಟಾರ್‌ಗಳನ್ನೂ ಮೀರಿಸಿದ ಸಮಂತಾ: ಖುಷಿ ಸುದ್ದಿ ಹಂಚಿಕೊಂಡ ನಟಿಎಲ್ಲ ಸ್ಟಾರ್‌ಗಳನ್ನೂ ಮೀರಿಸಿದ ಸಮಂತಾ: ಖುಷಿ ಸುದ್ದಿ ಹಂಚಿಕೊಂಡ ನಟಿ

  English summary
  Shraddha Kapoor has become the 3rd most-followed Bollywood actor on Instagram, crosses 50 million followers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X