»   » 'ಕಿರಿಕ್ ಪಾರ್ಟಿ' ಹಿಂದಿ ರೀಮೇಕ್ ಗೆ ಸಿದ್ದಾರ್ಥ್ ಹೀರೋ ಕಣ್ರೀ.!

'ಕಿರಿಕ್ ಪಾರ್ಟಿ' ಹಿಂದಿ ರೀಮೇಕ್ ಗೆ ಸಿದ್ದಾರ್ಥ್ ಹೀರೋ ಕಣ್ರೀ.!

Posted By:
Subscribe to Filmibeat Kannada

2016 ರ ಡಿಸೆಂಬರ್ ನಲ್ಲಿ ತೆರೆಕಂಡ 'ಕಿರಿಕ್ ಪಾರ್ಟಿ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ತಾಗಿ ಸೌಂಡ್ ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಈ ಸಿನಿಮಾ ಹರೆಯದ ಹುಡುಗ-ಹುಡುಗಿಯರ ಮನಸ್ಸಿಗೆ ತುಂಬಾ ಆಪ್ತವಾಗಿತ್ತು.

ಸತತವಾಗಿ ಹೌಸ್ ಫುಲ್ ಪ್ರದರ್ಶನ ಕಂಡು 50 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಬಿಸಿನೆಸ್ ಮಾಡಿದ 'ಕಿರಿಕ್ ಪಾರ್ಟಿ' ಹಲವಾರು ದಾಖಲೆಗಳಿಗೆ ನಾಂದಿ ಕೂಡ ಹಾಡಿತ್ತು.

ಈಗಾಗಲೇ ತೆಲುಗಿನಲ್ಲಿ ರೀಮೇಕ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗ, 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಮುಂದೆ ಓದಿರಿ...

ಹಿಂದಿಗೆ ರೀಮೇಕ್ ಆಗಲಿದೆ 'ಕಿರಿಕ್ ಪಾರ್ಟಿ'

'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ರೈಟ್ಸ್ ವರ್ಷದ ಹಿಂದೆಯೇ ಸೇಲ್ ಆಗಿತ್ತು. ಈಗ 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ಅವತರಣಿಕೆಯಲ್ಲಿ ಕಾಣಿಸಿಕೊಳ್ಳಲು ನಟ ಸಿದ್ದಾರ್ಥ್ ಮಲ್ಹೋತ್ರ ಆಸಕ್ತಿ ತೋರಿದ್ದಾರಂತೆ.

ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ರೈಟ್ಸ್

ಹಿಂದಿಯಲ್ಲಿ 'ಕಿರಿಕ್' ಮಾಡ್ತಾರಾ ಸಿದ್ದಾರ್ಥ್.?

ನಿರ್ಮಾಪಕ ಅಜಯ್ ಕಪೂರ್ ಬಳಿ 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ಹಕ್ಕುಗಳಿವೆ. ಇನ್ನೂ 'ಕಿರಿಕ್ ಪಾರ್ಟಿ' ಸ್ಕ್ರಿಪ್ಟ್ ಓದಿ ಇಷ್ಟ ಪಟ್ಟಿರುವ ಸಿದ್ಧಾರ್ಥ್ ಮಲ್ಹೋತ್ರ, ಅಜಯ್ ಕಪೂರ್ ಜೊತೆಗೆ ಮಾತುಕತೆ ಕೂಡ ನಡೆಸಿದ್ದಾರಂತೆ.

ಸಹಿ ಒಂದು ಹಾಕಬೇಕಷ್ಟೇ.!

'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ವರ್ಷನ್ ನಲ್ಲಿ ಅಭಿನಯಿಸಲು ಸಿದ್ಧಾರ್ಥ್ ಅಂತೂ ರೆಡಿ ಆಗಿದ್ದಾರೆ. ಅಗ್ರೀಮೆಂಟ್ ಪೇಪರ್ ಗೆ ಸಹಿ ಹಾಕಿದರೆ, 'ಕಿರಿಕ್ ಪಾರ್ಟಿ' ಹಿಂದಿ ಅವತರಣಿಕೆಯ ಶೂಟಿಂಗ್ ಶುರು ಆಗಲಿದೆ.

'ಕಿರಿಕ್ ಪಾರ್ಟಿ' ಚಿತ್ರದ ಕುರಿತು

ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ಸಿನಿಮಾ 'ಕಿರಿಕ್ ಪಾರ್ಟಿ'. ರಿಶಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ ಈ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು.

English summary
According to the latest reports, Bollywood Actor Siddharth Malhotra to play a student in Hindi remake of Kannada Hit Film 'Kirik Party'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada