Don't Miss!
- News
ಲಕ್ನೋದಲ್ಲಿ ಭೀಕರ ಅಫಘಾತ: ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಟ್ರಕ್- ಆರು ಮಂದಿ ಸಾವು
- Sports
ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ; ಈ ಬ್ಯಾಟಿಂಗ್ ದಿಗ್ಗಜರ ನಡುವೆ ಪ್ಯಾಟ್ ಕಮ್ಮಿನ್ಸ್ ಆಯ್ಕೆ ಯಾರು?
- Finance
2 ಕೋಟಿಗೂ ಕಡಿಮೆ FD ಹಣಕ್ಕೆ ಹೆಚ್ಚು ಬಡ್ಡಿ ನೀಡುವ 5 ಬ್ಯಾಂಕ್ ಯಾವವು, ಅವುಗಳ ಬಡ್ಡಿ ದರ ಬಗ್ಗೆ ತಿಳಿಯಿರಿ
- Technology
ಐಟೆಲ್ನಿಂದ ಮತ್ತೊಂದು ಎಂಟ್ರಿ ಲೆವೆಲ್ ಫೋನ್ ಅನಾವರಣ! ಫೀಚರ್ಸ್ ಹೇಗಿದೆ?
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದೀಪಿಕಾ ಪಡುಕೋಣೆಯನ್ನೇ ಹೋಲುವ ಈ ಯುವತಿ ಯಾರು? ಎಲ್ಲಿಯವಳು?
ದೀಪಿಕಾ ಪಡುಕೋಣೆ ಬಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ಹಾಗೂ ಪ್ರತಿಭಾವಂತ ನಟಿ. ದಕ್ಷಿಣ ಭಾರತದಿಂದ ಪಯಣ ಬೆಳೆಸಿದ್ದರೂ, ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ತನ್ನದೇ ಹೆಸರು ಸಂಪಾದಿಸಿದ್ದಾರೆ. ದೀಪಿಕಾ ಸದ್ಯಕ್ಕೆ ಬಿಟೌನ್‌ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು.
ದೀಪಿಕಾ ಪಡುಕೋಣೆಯ ಸೈಲ್, ಲುಕ್, ಕಾಸ್ಟ್ಯೂಮ್ ಅನ್ನು ಅನುಕರಿಸುವ ಅದೆಷ್ಟೋ ಯುವತಿಯರಿದ್ದಾರೆ. ಅವರು ದೀಪಿಕಾ ಪಡುಕೋಣೆಯಂತೆಯೇ ಕಾಣುವುದಕ್ಕೆ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಥೇಟ್ ದೀಪಿಕಾ ಪಡುಕೋಣೆಯನ್ನೇ ಹೋಲುವಂತಹ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ.
ಶಾರುಖ್,
ಸಲ್ಮಾನ್
ಫ್ಲ್ಯಾಟ್
ಮಧ್ಯೆ
₹119
ಕೋಟಿ
ಬಂಗಲೆ
ಖರೀದಿಸಿದ
ದೀಪಿಕಾ-ರಣ್‌ವೀರ್:
ಹೈಲೈಟ್
ಏನು?
ಸೋಶಿಯಲ್ ಮೀಡಿಯಾನೇ ಹಾಗೆ. ಇಲ್ಲಿ ವಿಶ್ವದ ಮೂಲೆ ಮೂಲೆಯಲ್ಲಿ ಇರುವವರೊಂದಿಗೆ ಕನೆಕ್ಷನ್ ಸಿಕ್ಕು ಬಿಡುತ್ತೆ. ಕೆಲವೊಮ್ಮೆ ನೋಡಲು ಥೇಟ್ ಇನ್ನೊಬ್ಬರಂತೆ ಇದ್ದಾರಲ್ಲಾ ಎಂದೆನಿಸುತ್ತೆ. ಹಾಗೇ ಸುಪ್ರಸಿದ್ಧ ನಟಿ-ನಟಿಯರಂತೆ ಕಾಣುವ ಮತ್ತೊಬ್ಬರು ಸಿಕ್ಕಿಬಿಡುತ್ತಾರೆ. ಈಗ ದೀಪಿಕಾಳನ್ನು ಹೋಲುವ ಮತ್ತೊಂದು ಫೇಸ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ದೀಪಿಕಾ
ಹೃದಯ
ಬಡಿತದಲ್ಲಿ
ಏರು-ಪೇರು:
ಪ್ರಭಾಸ್
ತೆಗೆದುಕೊಂಡ
ನಿರ್ಧಾರವೇನು?

ದೀಪಿಕಾ ಪಡುಕೋಣೆ ಹೋಲುವ ಈಕೆ ಎಲ್ಲಿಯವಳು?
ಕಳೆದ ಕೆಲವು ದಿನಗಳಿಂದ ದೀಪಿಕಾ ಪಡುಕೋಣೆಯನ್ನೇ ಹೋಲುವ ಯುವತಿಯೊಬ್ಬಳ ಪೋಟೊ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಯುವತಿ ಹಲ್‌ಚಲ್ ಎಬ್ಬಿಸಿದ್ದಾಳೆ. ಅಂದ್ಹಾಗೆ ಕೊಲ್ಕತ್ತಾ ಮೂಲದ ಈಕೆಯ ಹೆಸರು ರಿಜುತಾ ಘೋಷ್ ಡೆಬ್. ಈಕೆಯ ಫೋಟೊಗಳನ್ನು ನೋಡಿ ದೀಪಿಕಾ ಪಡುಕೋಣೆ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.

ದೀಪಿಕಾ ನೋಡಿ ಫ್ಯಾನ್ಸ್ ಫಿದಾ
ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ಬೇಜಾನ್ ಸದ್ದು ಮಾಡುತ್ತಿದ್ದಾರೆ. ದೇಶಾದ್ಯಂತ ರಿಜುತಾ ಘೋಷ್ ಡೆಬ್ ಬಗ್ಗೆ ಚರ್ಚೆಯಾಗುತ್ತಿದೆ. ಸಾಕಷ್ಟು ಮಂದಿ ಈಕೆಯ ಲುಕ್ ಬಗ್ಗೆನೇ ಚರ್ಚೆ ಮಾಡುತ್ತಿದ್ದಾರೆ. ಕೆಲವರಂತೂ ಈಕೆ ದೀಪಿಕಾ ಪಡುಕೋಣೆ ಇದ್ದಂತೆಯೇ ಇದ್ದಾರೆ. ಎಂದು ಒಬ್ಬರು ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರು " ಈಕೆ ಪಾಲಿಕಾ ಬಜಾರ್‌ನ ದೀಪಿಕಾ ಪಡುಕೋಣೆ" ಎನ್ನುತ್ತಿದ್ದಾರೆ. ಮತ್ತೊಬ್ಬರು " ರಣ್‌ವೀರ್ ಸಿಂಗ್ ಇವರಿಬ್ಬರಲ್ಲಿ ಯಾರು ರಿಯಲ್ ಅಂತ ಗೊಂದಲಕ್ಕೆ ಬೀಳುತ್ತಾರೆ" ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

ತಾರೆಯರಂತೆ ಕಾಣುವುದು ಇದೇ ಮೊದಲೇನಲ್ಲ
ಸೋಶಿಯಲ್ ಮೀಡಿಯಾದಲ್ಲಿ ಹೀಗೆ ನಕಲಿ ತಾರೆಯರು ಸಿಕ್ಕಿರುವುದು ಇದೇ ಮೊದಲೇನಲ್ಲ. ಕೆಲವು ದಿನಗಳ ಹಿಂದಷ್ಟೇ ಆಲಿಯಾ ಭಟ್‌ರಂತೆ ಕಾಣುವ ಯುವತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಂತೆ ಶ್ರೀದೇವಿ, ಮಾಧುರಿ ದೀಕ್ಷಿತ್ ಕಾಣುವವರು ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗಿತ್ತು. ಈಗ ದೀಪಿಕಾ ಪಡುಕೋಣೆಯಂತೆಯೇ ಕಾಣುವ ಯುವತಿ ಫೋಟೊ ವೈರಲ್ ಆಗಿದೆ.

ದೀಪಿಕಾ ಬ್ಯಾಕ್ ಟು ಬ್ಯಾಕ್ ಸಿನಿಮಾ
ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಈಗಷ್ಟೇ ವಿದೇಶಿ ಪ್ರವಾಸ ಮುಗಿಸಿ ಬಂದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಂದ ಬಿಡುವು ಮಾಡಿಕೊಂಡು ಎಂಜಾಯ್ ಮಾಡಿದ್ದರು. ಸದ್ಯ ದೀಪಿಕಾ ಪಡುಕೋಣೆ ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಅಭಿನಯದ 'ಪಠಾಣ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ಹಾಗೂ ಅಮಿತಾಬ್ ಬಚ್ಚನ್ ಅಭಿನಯದ 'ಪ್ರಾಜೆಕ್ಟ್ ಕೆ'ನಲ್ಲಿ ನಟಿಸುತ್ತಿದ್ದಾರೆ.