Just In
Don't Miss!
- News
Corona Alert: ಯಾವ ರಾಜ್ಯಗಳು ಅತಿಹೆಚ್ಚು ಅಪಾಯ ಎದುರಿಸುತ್ತಿವೆ?
- Sports
ಐಪಿಎಲ್ 2021: ಹೈದರಾಬಾದ್ ತಂಡದ ಯಶಸ್ಸಿನ ಮಂತ್ರ ಹೇಳಿದ ರಶೀದ್ ಖಾನ್
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Automobiles
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಲ್ಮಾನ್, ಸಂಜಯ್ ದತ್, ಸೈಫ್ ಅಲಿ ಖಾನ್‌ಗೆ ಕ್ಷಮೆ ಕೇಳಿದ ಪಾಕ್ ನಟಿ
ಪಾಕಿಸ್ತಾನ ಮೂಲದ ನಟಿ ಸೋಮಿ ಅಲಿ ಬಾಲಿವುಡ್‌ನ ಕೆಲವು ಸ್ಟಾರ್ ನಟರ ಕ್ಷಮೆ ಕೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋಮಿ ಅಲಿ, ನಟ ಸಲ್ಮಾನ್ ಖಾನ್, ಸಂಜಯ್ ದತ್, ಸೈಫ್ ಅಲಿ ಖಾನ್, ಚಂಕಿ ಪಾಂಡೆ, ಗೋವಿಂದಾ, ಮಿಥುನ್ ಚಕ್ರವರ್ತಿ, ದಿವಂಗತ ಓಂ ಪುರಿ ಇನ್ನೂ ಕೆಲವು ನಟ, ನಿರ್ದೇಶಕ, ನಿರ್ಮಾಪಕರ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.
ನಟಿ ಸೋಮಿ ಅಲಿ 1990 ರ ದಶಕದಲ್ಲಿ ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ 'ನಾನೊಬ್ಬ ಕೆಟ್ಟ ನಟಿ, ನನ್ನನ್ನು ಸಹಿಸಿಕೊಂಡ ನಟ-ನಟಿಯರಿಗೆ ನಾನು ಕ್ಷಮೆ ಕೇಳುತ್ತಿದ್ದೇನೆ' ಎಂದಿದ್ದಾರೆ ಸೋಮಿ ಅಲಿ.
'ನಾನೊಬ್ಬ ಕೆಟ್ಟ ನಟಿ, ನನಗೆ ನೃತ್ಯವೂ ಸರಿಯಾಗಿ ಬರುತ್ತಿರಲಿಲ್ಲ ಆದರೂ ಹೇಗೆ ನಾನು ಆ ಹತ್ತು ಸಿನಿಮಾಗಳಲ್ಲಿ ನಟಿಸಿದೆ ಎಂಬುದು ನನಗೇ ಆಶ್ಚರ್ಯವಾಗುತ್ತಿದೆ' ಎಂದು ಹೇಳಿದ್ದಾರೆ ಸೋನಿ ಅಲಿ. ವಿಶೇಷವಾಗಿ ಮಿಥುನ್ ಚಕ್ರವರ್ತಿಯವರ ಕ್ಷಮೆ ಕೇಳಿದ್ದಾರೆ ಸೋಮಿ ಅಲಿ, ಅವರೊಂದಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು ಸೋಮಿ.
'ನಾನು ನಟಿಸಿದ ಸಿನಿಮಾದ ನಿರ್ಮಾಪಕ-ನಿರ್ದೇಶಕರಲ್ಲೂ ನಾನು ಕ್ಷಮೆ ಕೇಳುತ್ತೇನೆ. ನನಗೆ ಅಭಿನಯ ಇಷ್ಟವಿರಲಿಲ್ಲ. ನಾನೆಂದೂ ನೃತ್ಯ ತರಬೇತಿಗೆ ಹೋದವಳಲ್ಲ. ಸರೋಜ್ ಖಾನ್ ಅವರು ಪ್ರತಿ ಬಾರಿ ನನ್ನನ್ನು ನೃತ್ಯ ತರಬೇತಿಗೆ ಕರೆಯುತ್ತಿದ್ದರು. ಆದರೆ ನಾನು ಹೋಗುತ್ತಿರಲಿಲ್ಲ. ನಾನೆಂದು ನನ್ನ ಪಾತ್ರದ ಸಂಭಾಷಣೆಯನ್ನೂ ಸಹ ಮನದಟ್ಟು ಮಾಡಿಕೊಳ್ಳುತ್ತಿರಲಿಲ್ಲ' ಎಂದಿದ್ದಾರೆ ಸೋಮಿ.
'ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದಾಗ ನಾನಿನ್ನೂ ವಯಸ್ಸಿನಲ್ಲಿ ಸಣ್ಣವಳಾಗಿದ್ದೆ. ಆದರೆ ಆ ವಯಸ್ಸಿಗೆ ಅನುಭವಿಸಬಾರದ ಕೆಲವನ್ನು ನಾನು ಅನುಭವಿಸಿದೆ. ಕೆಲವರ ಸಂಬಂಧಗಳು ನನ್ನಿಂದಾಗಿಯೇ ಮುರಿದವು. ಆದರೆ ಹಾಗೆ ಆಗಲಿಕ್ಕೆ ಬೇರೊಬ್ಬರು ನನಗೆ ನೀಡಿದ ತಪ್ಪು ಸಲಹೆಗಳೇ ಕಾರಣ' ಎಂದಿದ್ದಾರೆ ಸೋಮಿ ಅಲಿ.
ಸೋಮಿ ಅಲಿ ಹಾಗೂ ಸಲ್ಮಾನ್ ಖಾನ್ ಆಪ್ತವಾಗಿದ್ದರು. ಆದರೆ ಎರಡೇ ವರ್ಷದಲ್ಲಿ ಇಬ್ಬರೂ ಬೇರಾದರು. ಆ ನಂತರ ಸೋಮಿ ಅಲಿ ಬಾಲಿವುಡ್‌ನಿಂದ ದೂರವಾಗಿ ಅಮೆರಕಕ್ಕೆ ತೆರಳಿದರು.