For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ದುಬಾರಿ ಮನೆ ಖರೀದಿ ಮಾಡಿದ ನಟಿ ಸೋನಾಕ್ಷಿ ಸಿನ್ಹಾ

  |

  ಹೊಸ ಮನೆ ಖರೀದಿ ಮಾಡುತ್ತಿರುವ ನಟಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಹಲವು ನಟಿಯರು ಮನೆ ಮೇಲೆ ಬಂಡವಾಳ ಹಾಕಿದ್ದಾರೆ. ಹೃತಿಕ್ ರೋಷನ್, ಜಾಹ್ನವಿ ಜಪೂರ್, ಆಲಿಯಾ ಭಟ್, ಜಾಕ್‌ಲೀನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮುಂಬೈನಲ್ಲಿ ಮನೆ ತೆಗೆದುಕೊಂಡಿದ್ದಾರೆ.

  ಈಗ ಸೋನಾಕ್ಷಿ ಸಿನ್ಹಾ ಅವರು ಮುಂಬೈನಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಕುರಿತು ಪಿಂಕ್ ವಿಲ್ಲಾ ವೆಬ್ ಸೈಟ್ ವರದಿ ಮಾಡಿದೆ.

  ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿದ ಬಾಲಿವುಡ್ ನಟಿ ಜಾಕ್‌ಲೀನ್

  4 ಬಿಎಚ್‌ಕೆ ಫ್ಲ್ಯಾಟ್‌ ಮೇಲೆ ನಟಿ ಸೋನಾಕ್ಷಿ ಬಂಡವಾಳ ಹೂಡಿದ್ದಾರೆ. ಮುಂಬೈನ ಬಾಂದ್ರಾ ನಗರದ ಪ್ರಮುಖ ಅಪಾರ್ಟ್‌ಮೆಂಟ್‌ನಲ್ಲಿ ಈ ಮನೆ ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿದೆ.

  ''ವೃತ್ತಿ ಜೀವನ ಆರಂಭಿಸಿದ ಕ್ಷಣದಿಂದಲೂ ನಾನು ಸ್ವಂತ ಮನೆ ಖರೀದಿ ಮಾಡಬೇಕು ಎಂಬ ಆಸೆ ಹೊಂದಿದ್ದೆ. ನಾನು ದುಡಿದ ದುಡ್ಡಿನಲ್ಲಿ ನನ್ನ ಕನಸಿನ ಮನೆ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ನನಗೆ 30 ವರ್ಷ ವಯಸ್ಸು ಆಗುವಷ್ಟರಲ್ಲಿ ಹೊಸ ಮನೆ ಖರೀದಿ ಮಾಡುವ ಪ್ಲಾನ್ ಇತ್ತು. ಅದಕ್ಕೂ ಮುಂಚೆಯೇ ಆ ಕನಸು ನೆರವೇರಿದೆ'' ಎಂದು ಸೋನಾಕ್ಷಿ ಸಂತಸ ಹಂಚಿಕೊಂಡಿದ್ದಾರೆ.

  ಕೊನೆಯದಾಗಿ ದಬಾಂಗ್ 3 ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದರು. ಈಗ ಅಜಯ್ ದೇವಗನ್ ನಟನೆಯ ಭುಜ್:ಪ್ರೈಡ್ ಆಫ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ಜಾಹ್ನವಿ ಹಾಗೂ ಹೃತಿಕ್ ಜುಹಾ ನಗರದಲ್ಲಿ ಮನೆ ಖರೀದಿ ಮಾಡಿದ್ರೆ, ಆಲಿಯಾ ಭಟ್ ಬಾಂದ್ರಾದಲ್ಲಿ ಕೊಂಡುಕೊಂಡಿದ್ದರು. ಜಾಕ್‌ಲೀನ್ ಸಹ ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದರು.

  ಸದ್ದಿಲ್ಲದೆ ಮುಗಿದುಹೋಯ್ತು ವರುಣ್ ಧವನ್ ಮದುವೆ | Filmibeat Kannada
  English summary
  Bollywood actress Sonakshi Sinha buys a 4 BHK house in Bandra reports Mumbai Based Website.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X