For Quick Alerts
  ALLOW NOTIFICATIONS  
  For Daily Alerts

  ಸೊನಾಲಿ ಪೋಗಟ್ ಕೊಲೆ ಪ್ರಕರಣ: ಮಹತ್ವದ ಸುಳಿವು ಬಹಿರಂಗ

  |

  ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಜೆಪಿ ನಾಯಕಿಯೂ ಆಗಿದ್ದ ಸೊನಾಲಿ ಪೋಗಟ್ ಸಾವು ಹಲವು ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಆರಂಭದಲ್ಲಿ, ಸೊನಾಲಿ, ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾಗಿತ್ತು. ಬಳಿಕ ಇದು ಕೊಲೆ ಎಂದು ಗೊತ್ತಾಗಿದೆ. ಇದೀಗ ಪ್ರಕರಣದ ತನಿಖೆ ಚಾಲ್ತಿಯಲ್ಲಿದ್ದು, ಹಲವು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಿವೆ.

  ಸೊನಾಲಿ ಪೋಗಟ್ ಅನ್ನು ಆಕೆಯ ಇಬ್ಬರು ಸಹಾಯಕರೇ ಕೊಂದಿದ್ದಾರೆ ಎನ್ನಲಾಗುತ್ತಿದೆ. ಆಕೆಯ ಇಬ್ಬರು ಸಹಾಯಕರಾದ ಸುಧೀರ್ ಸಾಂಗ್ವಾನ್ ಹಾಗೂ ಸಖ್ವೀಂದರ್ ವಾಸಿ ಅವರುಗಳನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

  ಸೊನಾಲಿ ಪೋಗಟ್ ಕೊಲೆ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್ಸೊನಾಲಿ ಪೋಗಟ್ ಕೊಲೆ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್

  ಸುಧೀರ್ ಹಾಗೂ ಸಖ್ವೀಂಧರ್ ಅವರುಗಳು ತಾವು ಸೊನಾಲಿಗೆ ಡ್ರಗ್ಸ್‌ ಅನ್ನು ನೀರಿನಲ್ಲಿ ಬೆರೆಸಿ ನೀಡಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಆಸ್ತಿ ಆಸೆಗೆ ಸೊನಾಲಿಯನ್ನು ಕೊಂದಿದ್ದಾರೆಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

  ಗುರುಗ್ರಾಮದ ಗ್ರೀನ್ ಸೊಸೈಟಿ ಅಪಾರ್ಟ್‌ಮೆಂಟ್‌ನಲ್ಲಿ ಸೊನಾಲಿ ಪೋಗಟ್ ಹಾಗೂ ಸುಧೀರ್ ಸಾಂಗ್ವಾನ್ ಹೆಸರಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆಯಲಾಗಿದೆ. ಈ ಬಾಡಿಗೆ ದಾಖಲೆಯಲ್ಲಿ ಸೊನಾಲಿ ಪೋಗಟ್, ಸುಧೀರ್ ಸಾಂಗ್ವಾನ್‌ನ ಪತ್ನಿ ಎಂದು ನಮೂದಾಗಿದೆ.

  ಸೊನಾಳಿ ಹಾಗೂ ಸುಧೀರ್ ಗೋವಾಕ್ಕೆ ಹೊರಡುವ ಮುನ್ನ ಸಹ ತಮ್ಮ ಟಾಟಾ ಸಫಾರಿ ಕಾರನ್ನು ಅದೇ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕ್ ಮಾಡಿ ಅಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಆದರೆ ಆ ಅಪಾರ್ಟ್‌ಮೆಂಟ್‌ನಲ್ಲಿರುವವರು ಒಮ್ಮೆಯೂ ತಾವು ಸೊನಾಲಿಯಲ್ಲಿ ಅಲ್ಲಿ ನೋಡಿಯೇ ಇಲ್ಲ ಎಂದಿದ್ದಾರೆ.

  ಸುಧೀರ್ ಅನ್ನು ಕೆಲವು ಬಾರಿ ಅಪಾರ್ಟ್‌ಮೆಂಟ್‌ನಲ್ಲಿ ನೋಡಿದ್ದೇವೆ ಆದರೆ ಸೊನಾಲಿ ಇಲ್ಲಿ ವಾಸವಿರುವುದು ಸಹ ನಮಗೆ ಗೊತ್ತಿಲ್ಲ ಎಂದು ತನಿಖಾ ನಿರತ ಪೊಲೀಸರ ಬಳಿ ತಿಳಿಸಿದ್ದಾರೆ.

  ಆದರೆ ಸೊನಾಲಿಯ ವಕೀಲರು ಬೇರೆಯದ್ದೇ ಮಾಹಿತಿ ನೀಡಿದ್ದು, ಸೊನಾಲಿ ಹಾಗೂ ಸುಧೀರ್ ಆ ಅಪಾರ್ಟ್‌ಮೆಂಟ್‌ನಲ್ಲಿ ಗಂಡ-ಹೆಂಡತಿ ರೀತಿ ಇದ್ದಿರಲು ಸಾಧ್ಯವೇ ಇಲ್ಲ. ಗೋವಾಕ್ಕೆ ಹೋಗುವ ಮುನ್ನ ಸೊನಾಲಿ ವಿದೇಶಕ್ಕೆ ಹೋಗಿದ್ದಳು. ಆಗ ಸುಧೀರ್ ನನ್ನ ಬಳಿ ಬಂದು ಸೊನಾಲಿಯ ವಿಧವೆ ಸಹೋದರಿಯ ಆಸ್ತಿ ವಿಷಯವಾಗಿ ಕೆಲವು ಮಾಹಿತಿ ಪಡೆದುಕೊಂಡರು. ಅಲ್ಲದೆ ಸೊನಾಲಿ ಇಲ್ಲದಾಗ ಆಕೆಯ ಮನೆ, ಆಸ್ತಿಗಳನ್ನು ಸುಧೀರ್ ನೋಡಿಕೊಳ್ಳುತ್ತಿದ್ದ. ಸೊನಾಲಿಯ ಕೊಲೆಯ ಹಿಂದೆ ಹಣಕಾಸು, ಆಸ್ತಿ ವಿಚಾರವೇ ಮೋಟಿವ್ ಆಗಿರುವ ಗಟ್ಟಿ ಸಾಧ್ಯತೆ ಇದೆ ಎಂದಿದ್ದಾರೆ.

  Recommended Video

  Chiyaan Vikram in Bangalore | ಅಭಿಮಾನಿಗಳನ್ನು ನೋಡಿ ಫಿದಾ ಆದ್ರು ವಿಕ್ರಮ್ | Cobra
  English summary
  Sonali Phogat Death Case: Accused Sudhir Sangwan named as Sonali's husband in a house rent document.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X