»   » ನಿಶ್ಚಿತಾರ್ಥಕ್ಕೆ ಸಜ್ಜಾದ ನಟಿ ಸೋನಮ್ ಕಪೂರ್: ಹುಡುಗ ಯಾರು?

ನಿಶ್ಚಿತಾರ್ಥಕ್ಕೆ ಸಜ್ಜಾದ ನಟಿ ಸೋನಮ್ ಕಪೂರ್: ಹುಡುಗ ಯಾರು?

Posted By:
Subscribe to Filmibeat Kannada

ಬಾಲಿವುಡ್ ನಟಿ ಸೋನಮ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿಯನ್ನ ಬಾಲಿವುಡ್ ಮಾಧ್ಯಮಗಳು ವರದಿ ಮಾಡಿದೆ.

ತಮ್ಮ ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಮೆಂಟ್ ಮಾಡಿಕೊಳ್ಳಲು ಅನಿಲ್ ಕಪೂರ್ ಪುತ್ರಿ ಸಿದ್ದವಾಗಿದ್ದು, ಮುಹೂರ್ತ ಕೂಡ ನಿಗದಿಯಾಗಿದೆಯಂತೆ.

ಹಾಗಿದ್ರೆ, ಸೋನಮ್ ಕಪೂರ್ ಅವರನ್ನ ವರಿಸಲಿರುವ ಆ ಯುವಕ ಯಾರು? ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ.....

2018ಕ್ಕೆ ನಿಶ್ಚಿತಾರ್ಥ.!

ಸೋನಮ್ ಕಪೂರ್ ಮತ್ತು ಗೆಳೆಯ ಉದ್ಯಮಿ ಆನಂದ್ ಆಹುಜಾ ಅವರು ಎಂಗೇಜ್ ಮೆಂಟ್ 2018ರ ಸಮ್ಮರ್ ವೊತ್ತಿಗೆ ನಡೆಯಲಿದೆ ಎನ್ನಲಾಗುತ್ತಿದೆ.

ಕಾನ್ಸ್ ನಲ್ಲಿ ಐಶ್ವರ್ಯ ರೈ'ಗೆ ಹೋಲಿಸಿದ್ದಕ್ಕೆ ಸೋನಮ್ ಕಪೂರ್ ಗರಂ

ವರ್ಷಾಂತ್ಯಕ್ಕೆ ಮದುವೆ

2018ರಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಸೋನಮ್ ಕಪೂರ್ ಮತ್ತು ಆನಂದ್ ಆಹುಜಾ ಅವರ ಮದುವೆ ಕೂಡ ಅದೇ ವರ್ಷದ ಅಂತ್ಯಕ್ಕೆ ನಡೆಸಲು ತೀರ್ಮಾನಿಸಲಾಗಿದೆಯಂತೆ.

ಮದುವೆ ಬಗ್ಗೆ ಅಧಿಕೃತವಾಗಿಲ್ಲ

ಈ ಬಗ್ಗೆ ಸೋನಮ್ ಆಗಲಿ ಅಥವಾ ಅವರ ಕುಟುಂಬದವರಾಗಲಿ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದ್ರೆ, ಕುಟುಂಬದ ಆಪ್ತವಲಯ ಹೇಳುವ ಪ್ರಕಾರ ಇವರಿಬ್ಬರ ಮದುವೆ ಸುದ್ದಿ ಖಚಿತವೆನ್ನಲಾಗಿದೆ.

ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಾಲಿವುಡ್ ನಟಿ.!

ಸೋನಮ್ ಸಿನಿಮಾ ಬಿಡುಗಡೆ.!

'ನೀರ್ಜಾ' ಚಿತ್ರದ ನಂತರ ಯಶಸ್ಸಿನ ನಂತರ ಸೋನಮ್ ಕಪೂರ್ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ 'ವೀರೆ ದಿ ವೆಡ್ಡಿಂಗ್' ಚಿತ್ರ 2018ರಲ್ಲಿ ಬಿಡುಗಡೆಯಾಗಲಿದೆ. ಒಂದ್ಕಡೆ ಸಿನಿಮಾ ರಿಲೀಸ್, ಇನ್ನೊಂದೆಡೆ ಎಂಗೇಜ್ ಮೆಂಟ್...ಹೀಗಾಗಿ, ಮುಂದಿನ ವರ್ಷ ಸೋನಮ್ ತುಂಬ ಬಿಜಿಯಾಗಲಿದ್ದಾರೆ.

English summary
Bollywood Actor Anil Kapoor Daughter Sonam Kapoor and Anand Ahuja To Get Engaged In March 2018.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X