For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಿಂದ ಭಾರತೀಯ ಸಂಸ್ಕೃತಿ ಹಾಳು: ಸೋನಂ ಮೇಲೆ ಟ್ರೋಲಿಗರ ಕಣ್ಣು.!

  By Harshitha
  |

  ಬಾಲಿವುಡ್ ನಿಂದಾಗಿ ಭಾರತೀಯ ಸಂಸ್ಕೃತಿ ಹಾಳಾಗುತ್ತಿದೆ, ಬಾಲಿವುಡ್ ತಾರೆಯರಿಂದಾಗಿ ಭಾರತೀಯ ಸಂಪ್ರದಾಯ ನಶಿಸಿ ಹೋಗುತ್ತಿದೆ ಎಂದು ಕೆಲ ಸಂಪ್ರದಾಯವಾದಿಗಳು ಸೋಷಿಯಲ್ ಮೀಡಿಯಾದಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ.

  ಬಿಕಿನಿ ಧರಿಸಿರುವ ಬಾಲಿವುಡ್ ನಟಿಯರು ತಮ್ಮ ಫೋಟೋವನ್ನ ಇನ್ಸ್ಟಾಗ್ರಾಮ್ ನಲ್ಲಿಯೋ, ಟ್ವಿಟ್ಟರ್ ನಲ್ಲಿಯೋ ಶೇರ್ ಮಾಡಿದಾಗ, ಅದಕ್ಕೆ ಛೀಮಾರಿ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯ ಮದುವೆ ಆಗಿರುವ ಸೋನಂ ಕಪೂರ್ ಇಂಥದ್ದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ.

  ಇತ್ತೀಚೆಗಷ್ಟೇ ಉದ್ಯಮಿ ಆನಂದ್ ಅಹುಜಾ-ಸೋನಂ ಕಪೂರ್ ವಿವಾಹ ಮಹೋತ್ಸವ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಮದುವೆ ಆದ ಬಳಿಕ ಸಾಂಪ್ರದಾಯಿಕವಾಗಿ ಸೀರೆಯುಟ್ಟು, ಮಂಗಳಸೂತ್ರ ಧರಿಸಿದ್ದ ಸೋನಂ ಕಪೂರ್ ರನ್ನ ಎಲ್ಲರೂ ಭೇಷ್ ಎನ್ನುತ್ತಿದ್ದರು. ಆದ್ರೀಗ ಅದೇ ಸೋನಂ ಕಪೂರ್ ಟ್ರೋಲ್ ಆಗುತ್ತಿದ್ದಾರೆ. ಕಾರಣ ಏನು.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ವಜ್ರಖಚಿತ ಮಾಂಗಲ್ಯ ಸರ

  ವಜ್ರಖಚಿತ ಮಾಂಗಲ್ಯ ಸರ

  ತಮ್ಮ ಮಾಂಗಲ್ಯ ಸರ ಹೀಗೇ ಇರಬೇಕು ಅಂತ ನಟಿ ಸೋನಂ ಕಪೂರ್ ತಾವೇ ಖುದ್ದಾಗಿ ಡಿಸೈನ್ ಮಾಡಿದ್ದರು. ಸೋನಂ ಕಪೂರ್ ಕರಿ ಮಣಿ ಮಾಂಗಲ್ಯ ಸರದಲ್ಲಿ ಮಿಥುನ ಹಾಗೂ ಸಿಂಹ ರಾಶಿಯ ಚಿಹ್ನೆ ಜೊತೆಗೆ ವಜ್ರವೂ ಇದೆ.

  ಮದುವೆಗೆ ಸೋನಂ ಧರಿಸಿದ ಉಂಗುರದ ಬೆಲೆ ಕೇಳಿದ್ರೆ, ನಿಮ್ಮ ಕಣ್ಣರಳುತ್ತೆ.!ಮದುವೆಗೆ ಸೋನಂ ಧರಿಸಿದ ಉಂಗುರದ ಬೆಲೆ ಕೇಳಿದ್ರೆ, ನಿಮ್ಮ ಕಣ್ಣರಳುತ್ತೆ.!

  ಅಂದು ಸೋನಂ ಕುತ್ತಿಗೆಯಲ್ಲಿ ಮಾಂಗಲ್ಯ ಸರ

  ಅಂದು ಸೋನಂ ಕುತ್ತಿಗೆಯಲ್ಲಿ ಮಾಂಗಲ್ಯ ಸರ

  ಸಿಖ್ ಸಂಪ್ರದಾಯದಂತೆ ಸೋನಂ ಕಪೂರ್ ಕೊರಳಿಗೆ ಆನಂದ್ ಅಹುಜಾ ಮಾಂಗಲ್ಯಧಾರಣೆ ಮಾಡಿದ್ದರು. ಅಂದು ಸಂಪ್ರದಾಯಬದ್ಧವಾಗಿ ಕೊರಳಿಗೆ ಕರಿ ಮಣಿ ಮಾಂಗಲ್ಯ ಧರಿಸಿದ್ದ ಸೋನಂ ಇದೀಗ ಕೈಗೆ ಮಾಂಗಲ್ಯ ಹಾಕಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

  ರಿಸೆಪ್ಷನ್ ನಲ್ಲಿ ಸ್ಪೋರ್ಟ್ಸ್ ಶೂ ಧರಿಸಿದ್ದ ಸೋನಂ ಪತಿ: ಟ್ರೋಲಿಗರಿಗೆ ಆನಂದ್ ಆಹುತಿ.!ರಿಸೆಪ್ಷನ್ ನಲ್ಲಿ ಸ್ಪೋರ್ಟ್ಸ್ ಶೂ ಧರಿಸಿದ್ದ ಸೋನಂ ಪತಿ: ಟ್ರೋಲಿಗರಿಗೆ ಆನಂದ್ ಆಹುತಿ.!

  ಸೋನಂ ಕೈಯಲ್ಲಿ ಮಾಂಗಲ್ಯದ ಬ್ರೇಸ್ಲೆಟ್

  ಸೋನಂ ಕೈಯಲ್ಲಿ ಮಾಂಗಲ್ಯದ ಬ್ರೇಸ್ಲೆಟ್

  ತಮ್ಮ ಮುಂದಿನ ಸಿನಿಮಾ 'ವೀರೇ ದಿ ವೆಡ್ಡಿಂಗ್' ಪ್ರಮೋಷನ್ ವೇಳೆ ತಮ್ಮ ಕೈಗೆ ಕರಿ ಮಣಿ ಮಾಂಗಲ್ಯದ ಬ್ರೇಸ್ಲೆಟ್ ನ ಸೋನಂ ಕಪೂರ್ ತೊಟ್ಟಿದ್ದರು. ಸೋನಂ ರವರ ಈ ನಡೆಯನ್ನ ಫ್ಯಾಶನ್ ಪ್ರಿಯರು ಕೊಂಡಾಡಿದರೆ, ಸಂಪ್ರದಾಯವಾದಿಗಳ ಕಣ್ಣು ಕೆಂಪಾಯಿತು.

  ಸೋನಂ ರಿಸೆಪ್ಷನ್ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರ ತಕಧಿಮಿತಾ.!ಸೋನಂ ರಿಸೆಪ್ಷನ್ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರ ತಕಧಿಮಿತಾ.!

  ಶುರುವಾಯ್ತು ಟ್ರೋಲ್ ಗಳು.!

  ಶುರುವಾಯ್ತು ಟ್ರೋಲ್ ಗಳು.!

  ''ಮಾಂಗಲ್ಯವನ್ನ ಬ್ರೇಸ್ಲೆಟ್ ಆಗೂ ಧರಿಸಬಹುದೇ.? ಧರ್ಮವನ್ನ ಪಾಲಿಸಲ್ಲ ಅಂದ್ರೆ ಪಾಲಿಸಬೇಡಿ. ಈ ತರಹ ಡ್ರಾಮಾ ಯಾಕೆ.?'' ಅಂತೆಲ್ಲ ನೆಟ್ಟಿಗರು ಸೋನಂ ಕಪೂರ್ ಗೆ ಬೆಂಡೆತ್ತುತ್ತಿದ್ದಾರೆ.

  ಫೆಮಿನಿಸ್ಟ್ ಗಳ ಪ್ರಾಬ್ಲಂ ಇದು.!

  ಫೆಮಿನಿಸ್ಟ್ ಗಳ ಪ್ರಾಬ್ಲಂ ಇದು.!

  ''ಇದೆಲ್ಲ ಫೆಮಿನಿಸ್ಟ್ ಅಂತ ಕರೆಯಿಸಿಕೊಳ್ಳುವವರ ಪ್ರಾಬ್ಲಂ. ಇವರೆಲ್ಲ ಸಂಪ್ರದಾಯ ಪಾಲಿಸಲ್ಲ. ತಮ್ಮ ಮೂಗಿನ ನೇರಕ್ಕೆ ಹೇಗೆ ಬೇಕೋ, ಹಾಗೆ ನಡೆದುಕೊಳ್ಳುತ್ತಾರೆ ಅಷ್ಟೇ'' ಎನ್ನುತ್ತಿದ್ದಾರೆ ಟ್ವೀಟಿಗರು.

  ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳ್ಳದ ಸೋನಂ

  ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳ್ಳದ ಸೋನಂ

  ತಮ್ಮ ಮಾಂಗಲ್ಯ ಸರದ ಬಗ್ಗೆ ಇಷ್ಟೆಲ್ಲ ಟ್ರೋಲ್ ಆಗುತ್ತಿದ್ದರೂ, ಸೋನಂ ಕಪೂರ್ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಟ್ರೋಲ್ ಗಳನ್ನ 'ನೆಗೆಟಿವ್' ಅಂತ ಪರಿಗಣಿಸುವ ಸೋನಂ, ಅದಕ್ಕೆ ಉತ್ತರ ಕೊಡುವ ಗೋಜಿಗೆ ಹೋಗಲ್ಲ.

  English summary
  Bollywood Actress Sonam Kapoor gets trolled for wearing Mangalsutra around her wrist.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X