For Quick Alerts
  ALLOW NOTIFICATIONS  
  For Daily Alerts

  ಸಹಾಯ ಕೋರಿ ಬರ್ತಿರುವ ಸಂದೇಶಗಳ ಸಂಖ್ಯೆ ರಿವೀಲ್ ಮಾಡಿ, ಕ್ಷಮೆ ಕೇಳಿದ ಸೋನು ಸೂದ್

  By ಫಿಲ್ಮ್ ಡೆಸ್ಕ್
  |

  ಬಹುಭಾಷಾ ನಟ ಸೋನು ಸೂದ್ ಮಾಡುತ್ತಿರುವ ಜನಪರ ಕೆಲಸಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಾಕ್ ಡೌನ್ ಆದಾಗಿನಿಂದನೂ ಸೋನು ಸೂದ್ ಕಷ್ಟದಲ್ಲಿರುವ ಲಕ್ಷಾಂತರ ಜನರಿಗೆ ನೆರವಾಗಿದೆ. ಅವರ ಸಮಾಜ ಸೇವೆ ಅಷ್ಟಕ್ಕೆ ನಿಲ್ಲಿಸಿಲ್ಲ.

  ಲಾಕ್ ಡೌನ್ ಬಳಿಕವೂ ಸಮಾಜ ಸೇವೆ ಮುಂದುವರೆಸಿರುವ ಸೋನು ಸೂದ್ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ ಬಡವರಿಗೆ, ಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತಿದ್ದಾರೆ. ಪ್ರತೀದಿನ ಸಹಾಯಕೋರಿ ಸೋನು ಸೂದ್ ಗೆ ಸಾವಿರಾರು ಸಂದೇಶಗಳು ಬರುತ್ತಿವೆ. ಈ ಬಗ್ಗೆ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಬಡ ರೈತನ ಕುಟುಂಬಕ್ಕೆ ಸೋನು ಸೂದ್ ನೆರವು: ಟ್ರ್ಯಾಕ್ಟರ್ ಗಿಫ್ಟ್ ನೀಡಿದ ನಟಬಡ ರೈತನ ಕುಟುಂಬಕ್ಕೆ ಸೋನು ಸೂದ್ ನೆರವು: ಟ್ರ್ಯಾಕ್ಟರ್ ಗಿಫ್ಟ್ ನೀಡಿದ ನಟ

  ಪ್ರತೀದಿನ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬರ್ತಿರುವ ಸಂದೇಶಗಳ ಪಟ್ಟಿ ನೋಡಿದ್ರೆ ನಿಜಕ್ಕು ಅಚ್ಚರಿಯಾಗುತ್ತೆ. 1137 ಮೇಲ್, 19000 ಫೇಸ್ ಬುಕ್ ಸಂದೇಶ, 4812 ಇನ್ಸ್ಟಾಗ್ರಾಮ್ ಸಂದೇಶಗಳು, 6741 ಟ್ವಿಟ್ಟರ್ ಸಂದೇಶಗಳು ಪ್ರತೀದಿನ ಬರುತ್ತಿವೆ ಎಂದು ರಿವೀಲ್ ಮಾಡಿದ್ದಾರೆ.

  ಕಳೆದ ಕೆಲವು ತಿಂಗಳಿಂದ ಸೋನು ಸೂದ್, ಸಾವಿರಾರು ಕೂಲಿ ಕಾರ್ಮಿಕರನ್ನು ಮರಳಿ ಮನೆಗೆ ಸೇರಿಸಿದ್ದಾರೆ. ವಿದೇಶದಲ್ಲಿ ಸಿಲುಕ್ಕಿದ್ದ ಭಾರತೀಯರನ್ನು ವಿಮಾನದ ಮೂಲಕ ತವರಿಗೆ ಕೆರೆಸಿಕೊಂಡಿದ್ದಾರೆ. ಅಲ್ಲದೆ ನಿರುದ್ಯೋಗಿ ವಲಸೆ ಕಾರ್ಮಿಕರಿಗೆ ಆರ್ಥಿಕ ಸಹಾಯಮಾಡಿ, ಉದ್ಯೋಗಾವಕಾಶ ಕಲ್ಪಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.

  ಕಷ್ಟದಲ್ಲಿರುವ ಲಕ್ಷಾಂತರ ಜನರಿಗೆ ನೆರವಾಗುತ್ತಿರುವ ಸೋನು ಸೂದ್ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಇಷ್ಟೆಲ್ಲ ಸಂದೇಶಗಳು ಸಹಾಯಕೋರಿ ಬಂದರೆ ಹೇಗೆ ಸಹಾಯಮಾಡಲು ಸಾಧ್ಯ. ಈ ಬಗ್ಗೆ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಬೆರದುಕೊಂಡಿದ್ದಾರೆ, " ಇಂದಿನ ಸಹಾಯ ಸಂದೇಶಗಳಿವು. ಸರಾಸರಿ ಇಷ್ಟು ಮನವಿಗಳು ಬಂದಿವೆ. ಎಲ್ಲರನ್ನೂ ಸಂಪರ್ಕ ಮಾಡುವುದು ಅಸಾಧ್ಯವಾಗಿದೆ. ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಂದೇಶಗಳು ಮಿಸ್ ಆಗಿದ್ದಾರೆ ಕ್ಷಮಿಸಿ" ಎಂದಿದ್ದಾರೆ.

  English summary
  Actor Sonu Sood reveals about number of help messages he received in day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X