For Quick Alerts
  ALLOW NOTIFICATIONS  
  For Daily Alerts

  '2022 ನಿಮ್ಮನ್ನು ಎದುರು ನೋಡುತ್ತಿದೆ': ಕಾಜಲ್ ಅಮ್ಮನಾಗುತ್ತಿರುವ ವಿಷಯ ತಿಳಿಸಿದ ಪತಿ ಗೌತಮ್

  |

  ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಸರು ಮಾಡಿರುವ ಉತ್ತರ ಭಾರತದ ನಟಿ ಕಾಜಲ್ ಅಗರ್ವಾಲ್. ದಕ್ಷಿಣದ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆ ನಟಿ ಕಾಜಲ್ ಅಗರ್ವಾಲ್ ಬಣ್ಣ ಹಚ್ಚಿದ್ದಾರೆ. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಕಾಜಲ್ ಅಳಿಲು ಸೇವೆ ಇದೆ. ಮದುವೆ ಬಳಿಕನೂ ಮೆಗಾಸ್ಟಾರ್ ಚಿರಂಜೀವಿ ಜೊತೆ ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಇಷ್ಟು ದಿನ ಸಿನಿಮಾಗಳಿಂದ ಸುದ್ದಿಯಲ್ಲಿದ್ದ ನಟಿ, ಈಗ ವೈಯುಕ್ತಿಕ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ.

  ಒಂದು ತಿಂಗಳ ಹಿಂದಷ್ಟೇ ಕಾಜಲ್ ಅಗರ್ವಾಲ್ ಫೋಟೊವೊಂದು ವೈರಲ್ ಆಗಿತ್ತು. ಈ ಫೋಟೊ ಬಗ್ಗೆನೇ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಚರ್ಚೆಯಾಗಿತ್ತು. ಆ ಒಂದು ಫೋಟೊ ನೋಡಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕಾಜಲ್ ಅಗರ್ವಾಲ್ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ವಿಷಯ ಹರಿದಾಡಿತ್ತು. ಆ ವಿಷಯವನ್ನು ಕಾಜಲ್ ಪತಿ ಗೌತಮ್ ಕಿಚ್ಲು ಈಗ ಬಹಿರಂಗ ಪಡಿಸಿದ್ದಾರೆ. ತಾವು ತಂದೆಯಾಗುತ್ತಿರುವ ವಿಷಯ ಬಹಿರಂಗ ಪಡಿಸಿದ್ದಾರೆ.

  ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಜಲ್

  ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಜಲ್

  'ಮಗಧೀರ', ಡಾರ್ಲಿಂಗ್, ಬೃಂದಾವನ, ತುಪಾಕಿ, ಸಿಂಗಂ, ಅದೆಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿಲ್ಲ. ಒಂದು ಕಾಲದಲ್ಲಿ ಕಾಜಲ್ ಅಗರ್ವಾಲ್ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದರು. ಬಳಿಕ ಬಾಲಿವುಡ್‌ನಲ್ಲೂ ಅದೃಷ್ಟ ಪರೀಕ್ಷೆ ಮುಂದಾಗಿದ್ದರು. 'ಸಿಂಗಂ' ಹಾಗೂ ' ಸ್ಪೆಷಲ್ 26' ಸಿನಿಮಾಗಳು ಯಶಸ್ಸು ನೀಡಿದ್ದವು. ಬಳಿಕ ಕಾಜಲ್ ಕೈಯಲ್ಲಿ ಗಮನ ಸೆಳೆಯುವಂತಹ ಸಿನಿಮಾ ಇರಲಿಲ್ಲ. ಈ ಬೆನ್ನಲ್ಲೇ ಬಹುದಿನದ ಗೆಳೆಯ, ಉದ್ಯಮಿ ಗೌತಮ್ ಕಿಚ್ಲು ಜೊತೆ ವಿವಾಹವಾಗಿದ್ದರು. ಈಗ ತಾಯಿಯಾಗುತ್ತಿರುವ ವಿಷಯವನ್ನು ಕಾಜಲ್ ಪತಿ ಗೌತಮ್ ಕಿಚ್ಲು ಬಹಿರಂಗ ಪಡಿಸಿದ್ದಾರೆ.

  ಕಾಜಲ್ ಗರ್ಭಿಣಿ: ವಿಷಯ ಬಹಿರಂಗ ಪಡಿಸಿದ ಪತಿ

  ಸ್ಟಾರ್ ನಟಿ ಕಾಜಲ್ ಅಗರ್ವಾಲ್ ತಾಯಿ ಆಗುತ್ತಿರುವ ವಿಷಯ ಕಳೆದೊಂದು ತಿಂಗಳ ಹಿಂದೆನೇ ಸದ್ದು ಮಾಡಿತ್ತು. ಆದರೂ, ಕಾಜಲ್ ಅಗರ್ವಾಲ್ ಈ ವಿಷಯದ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಈಗ ಕಾಜಲ್ ಬಚ್ಚಿಟ್ಟಿರುವ ವಿಷಯವನ್ನು ಪತಿ ಗೌತಮ್ ಕಿಚ್ಲು ಬಹಿರಂಗ ಪಡಿಸಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿರುವ ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ತಂದೆ-ತಾಯಿ ಆಗುತ್ತಿರುವ ಸಂತಸದಲ್ಲಿದ್ದಾರೆ. ಗೌತಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ "2022ರನ್ನು ಎದುರು ನೋಡುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

  ದುಬೈನಲ್ಲಿ ಹೊಸ ವರ್ಷದ ಸಂಭ್ರಮ

  ಕಾಜಲ್ ಹಾಗೂ ಗೌತಮ್ ಕಿಚ್ಲು ದಂಪತಿಗೆ ಎರಡೆರಡು ಸಂಭ್ರಮ. ತಂದೆ-ತಾಯಿಯಾಗುತ್ತಿರುವ ಸಂಭ್ರಮ ಒಂದುಕಡೆಯಾದರೆ, ಇನ್ನೊಂದು ಕಡೆ ಹೊಸ ವರ್ಷ. ಹೀಗಾಗಿ ಈ ದಂಪತಿ ದುಬೈನಲ್ಲಿ ನ್ಯೂ ಇಯರ್ ಅನ್ನು ಸೆಲೆಬ್ರೆಟ್ ಮಾಡುತ್ತಿದೆ. ದುಬೈನಿಂದಲೇ ಗೌತಮ್ ಕಿಚ್ಲು ಈ ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ಗೌತಮ್ ಹಾಗೂ ಕಾಜಲ್ ಇಬ್ಬರೂ ಹೊಸ ವರ್ಷ ಸಂಭ್ರಮದ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

  'ಇಂಡಿಯನ್ 2' ಸಿನಿಮಾದ ಕತೆಯೇನು?

  'ಇಂಡಿಯನ್ 2' ಸಿನಿಮಾದ ಕತೆಯೇನು?

  ಕಾಜಲ್ ಅಗರ್ವಾಲ್ ದಕ್ಷಿಣ ಭಾರತದಲ್ಲಿ ಇಬ್ಬರು ಮೆಗಾಸ್ಟಾರ್‌ಗಳ ಜೊತೆ ನಟಿಸುತ್ತಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿಸುತ್ತಿದ್ದ 'ಆಚಾರ್ಯ' ಕಂಪ್ಲೀಟ್ ಆಗಿದೆ. ಆದರೆ, ಕಮಲ್ ಹಾಸನ್ ಜೊತೆ ನಟಿಸುತ್ತಿದ್ದ 'ಇಂಡಿಯನ್ 2' ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಹೀಗಾಗಿ ಮತ್ತೆ ಸಿನಿಮಾ ಆರಂಭವಾದರೆ, ಕಾಜಲ್ ಅಗರ್ವಾಲ್ ಸಿನಿಮಾ ಭಾಗವಹಿಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಇನ್ನೂ ಒಂದು ವರ್ಷ 'ಇಂಡಿಯಾ 2' ಸೆಟ್ಟೇರುವ ಸಾಧ್ಯತೆ ಇಲ್ಲ. ನಿರ್ದೇಶಕ ಶಂಕರ್, ಕಾಜಲ್ ಅಗರ್ವಾಲ್ ಭಾಗದ ಶೂಟಿಂಗ್ ಮುಗಿಸಿದ್ದರೆ, ಮತ್ತೆ ಸಿನಿಮಾ ಶುರುವಾದರೂ ಆಗಬಹುದು.

  English summary
  South Actress Kajal Aggarwal pregnancy confirmed by husband Gautam Kitchlu. There were rumours that Kajal Aggarwal is expecting her first child. Gautam Kitchlu has confirmed it on social media.
  Monday, January 3, 2022, 11:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X