»   » ಸುದೀಪ್ ಜೊತೆ ಮತ್ತೆ ರಾಮ್ ಗೋಪಾಲ್ ವರ್ಮಾ

ಸುದೀಪ್ ಜೊತೆ ಮತ್ತೆ ರಾಮ್ ಗೋಪಾಲ್ ವರ್ಮಾ

Posted By:
Subscribe to Filmibeat Kannada
Sudeep teams up with Varma
ತಮ್ಮ ವಿಭಿನ್ನ ಚಿತ್ರಗಳಿಂದ ಗುರುತಿಸಿಕೊಂಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಈಗವರು ಮತ್ತೆ ಕಿಚ್ಚ ಸುದೀಪ್ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ಬಾಲಿವುಡ್ ಚಿತ್ರರಂಗಕ್ಕೆ ಸುದೀಪ್ ಅವರ ಪ್ರತಿಭೆಯನ್ನು ಪರಿಚಯಿಸಿದ್ದೇ ವರ್ಮಾ.

'ರಣ್' ಚಿತ್ರದಲ್ಲಿನ ಸುದೀಪ್ ಅಭಿನಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಬಳಿಕ ರಾಜಮೌಳಿ ನಿರ್ದೇಶನದಲ್ಲಿ ಬಂದಂತಹ 'ಈಗ' ಚಿತ್ರ ಸುದೀಪ್ ಅವರ ವೃತ್ತಿಜೀವನದಲ್ಲಿ ಹೊಸ ತಿರುವು ನೀಡಿತು. ಈಗವರು ಮತ್ತೆ ವರ್ಮಾ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಕುತೂಹಲ ಮೂಡಿಸಿದೆ.

ಇತ್ತೀಚೆಗೆ ತಮಿಳು ಚಿತ್ರ '6 Candles' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸುದೀಪ್, ಮತ್ತೊಮ್ಮೆ ರಾಮ್ ಗೋಪಾಲ್ ವರ್ಮಾ ಜೊತೆ ಅಭಿನಯಿಸುವುದಾಗಿ ಹೇಳಿದ್ದಾರೆ. ಏಕಕಾಲಕ್ಕೆ ಈ ಚಿತ್ರ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗಲಿದೆಯಂತೆ.

ಆದರೆ ಚಿತ್ರಕಥೆ ಏನು ಎಂಬ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲವಂತೆ. ಕಾರಣ ರಾಮು ಮೇಲಿಟ್ಟಿರುವ ಅಪಾರ ವಿಶ್ವಾಸ. ವರ್ಮಾ ಕಾಂಜಿಪಿಂಜಿ ಚಿತ್ರವಂತೂ ಮಾಡಲ್ಲ ಎಂಬ ನಂಬಿಕೆ ಸುದೀಪ್ ಅವರಿಗೆ ಅಪಾರವಾಗಿದೆಯಂತೆ.

ಏತನ್ಮಧ್ಯೆ ಸುದೀಪ್ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವ 'ವರದನಾಯಕ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಜನವರಿ ಮೊದಲ ವಾರದಲ್ಲಿ ಚಿರಂಜೀವಿ ಸರ್ಜಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ತೆರೆಕಾಣುತ್ತಿದೆ. ತೆಲುಗಿನ ಯಶಸ್ವಿ ಚಿತ್ರ ಲಕ್ಷ್ಯಂ ರೀಮೇಕ್ ವರದನಾಯಕ. (ಏಜೆನ್ಸೀಸ್)

English summary
Kannada actor Sudeep teams up with Ram Gopal Varma again. The film will be simultaneously made in Kannada, Telugu, Tamil and Hindi. However, he has not discussed about the storyline yet, as he trusts him a lot.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada