»   » ಪೋಲಿ ಚಿತ್ರಗಳ ಸಹವಾಸ ಸಾಕು; ಸನ್ನಿ ಲಿಯೋನ್

ಪೋಲಿ ಚಿತ್ರಗಳ ಸಹವಾಸ ಸಾಕು; ಸನ್ನಿ ಲಿಯೋನ್

Posted By:
Subscribe to Filmibeat Kannada

ಬಾಲಿವುಡ್ ಬೆಡಗಿಯಾಗಿ ಬದಲಾದ ಪೋಲಿ ಚಿತ್ರಗಳ ತಾರೆ ಸನ್ನಿ ಲಿಯೋನ್, ಇನ್ನುಂದೆ ಇಲ್ಲೇ ಬೆಳಗಲಿರುವುದು ಪಕ್ಕಾ ಆಗಿದೆ. "ಇನ್ನೆರಡು ವರ್ಷ ನಾನು ನೀಲಿ ಚಿತ್ರಗಳಲ್ಲಿ ನಟಿಸಲಾರೆ. ನನಗೀಗ ಸಾಕಷ್ಟು ಬಾಲಿವುಡ್ ಆಫರ್ ಗಳು ಬರಲಾರಂಭಿಸಿವೆ" ಎಂದು ಸ್ವತಃ ಸನ್ನಿ ಲಿಯೋನ್ ಹೇಳಿದ್ದಾರೆ. ಅಲ್ಲಿಗೆ 'ಜಿಸ್ಮ್-2' ಯಶಸ್ವಿಯಾಗಿದೆ ಎಂಬುದಕ್ಕೆ ಇದು ಇನ್ನೊಂದು ಸಾಕ್ಷಿಯಾಗಿದೆ. ಮೊದಲ ವಾರದಲ್ಲಿ ಒಟ್ಟು ರು. 29.91 ಕೋಟಿ ಗಳಿಸಿರುವ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಆದರೆ 'ಜಿಸ್ಮ್ 2' ಚಿತ್ರದ ಮೊದಲ ವಾರದ ಕಲೆಕ್ಷನ್, ಈ ಮೊದಲು ಮಹೇಶ್ ಭಟ್ ಬ್ಯಾನರ್ ನಲ್ಲಿ ಮೂಡಿಬಂದಿದ್ದ 'ಜನ್ನತ್-2' ಹಾಗೂ 'ಮರ್ಡರ್ 2' ಚಿತ್ರವನ್ನು ಸರಿಗಟ್ಟುವಲ್ಲಿ ವಿಫಲವಾಗಿದೆ. 'ಜಿಸ್ಮ್ 2' ಮೊದಲ ವಾರ ರು. 29.91 ಗಳಿಸಿದ್ದರೆ 'ಜನ್ನತ್-2' ರು. 35.5 ಕೋಟಿ ಹಾಗೂ 'ಮರ್ಡರ್-2' ರು. 36.5 ಕೋಟಿ ಗಳಿಸಿದ್ದವು. ಜಿಸ್ಮ್ 2. ಆ ದಾಖಲೆ ತಲುಪಿಲ್ಲ ಅಷ್ಟೇ.

ಹಾಗೆಂದು 'ಜಿಸ್ಮ್ 2' ಬಾಕ್ಸ್ ಆಫೀಸ್ ನಲ್ಲಿ ಸೋತಿಲ್ಲ. ರು. 29.91 ಕೋಟಿ ಒಳ್ಳೆಯ ಕಲೆಕ್ಷನ್ ಎಂದೇ ಹೇಳಲಾಗಿದೆ. ಈಗಲೂ ಕೂಡ ಚಿತ್ರದ ಕಲೆಕ್ಷನ್ ಚೆನ್ನಾಗಿಯೇ ಇದೆ. ಅಷ್ಟೇ ಅಲ್ಲ, ಈ ಚಿತ್ರವು ನಾಯಕಿ ನಟಿ ಸನ್ನಿ ಲಿಯೋನ್ ಅವರಿಗೆ ಬಾಲಿವುಡ್ ನಲ್ಲಿ ಅದೃಷ್ಟದ ಬಾಗಿಲು ತೆರೆದಿದೆ. ಸನ್ನಿ ಲಿಯೋನ್ ಇದರಿಂದ ಭಾರಿ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇನ್ನು ಪೋಲಿ ಚಿತ್ರಗಳ ಸಹವಾಸ ಸಾಕು ಎಂದಿದ್ದಾರೆ.

ತಮ್ಮ ನಟನೆಯ ಕುರಿತು ಸಾಕಷ್ಟು ಹೆಮ್ಮೆಪಡುತ್ತಿರುವ ಸನ್ನಿ, ತನ್ನ ಕುಟುಂಬ ಹಾಗೂ ಆತ್ಮೀಯರಿಗೆಲ್ಲಾ ಕರೆದು ಕರೆದು 'ಜಿಸ್ಮ್-2' ಚಿತ್ರವನ್ನು ತೋರಿಸುತ್ತಿದ್ದಾರಂತೆ. ಈ ಮೊದಲು ವಯಸ್ಕರ ಚಿತ್ರಗಳಲ್ಲಿ ಮಾತ್ರ ನಟಿಸುತ್ತಿದ್ದ ಸನ್ನಿಗೆ ಬಾಲಿವುಡ್ ಚಿತ್ರ ಮೃಷ್ಟಾನ್ನ ಭೋಜನ ಎನ್ನುವಂತಾಗಿದೆ. ಜೊತೆಗೆ ಬಾಲಿವುಡ್ ನಲ್ಲಿ ಸಾಕಷ್ಟು ಆಫರ್ ಗಳು ಸನ್ನಿಯನ್ನು ಹುಡುಕಿಕೊಂಡು ಬರುತ್ತಿರುವುದರಿಂದ ಇನ್ನೆರಡು ವರ್ಷ ನೀಲಿ ಚಿತ್ರಗಳಲ್ಲಿ ನಟಿಸದಿರಲು ಸನ್ನಿ ನಿರ್ಧರಿಸಿದ್ದಾರಂತೆ. (ಏಜೆನ್ಸೀಸ್)

English summary
Sunny Leone debut Bollywood movie Jism 2 has done superb business at Box Office. Pooja-Mahesh Bhatt film has had wonderful collection in the first week.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada