»   » ಅತುಲ್ ಟ್ವೀಟ್ ಗೆ ಸನ್ನಿ ಲಿಯೋನ್ ಖಡಕ್ ಉತ್ತರ

ಅತುಲ್ ಟ್ವೀಟ್ ಗೆ ಸನ್ನಿ ಲಿಯೋನ್ ಖಡಕ್ ಉತ್ತರ

Posted By: ಸುನಿ ಗೌಡ
Subscribe to Filmibeat Kannada

ಭಾರತದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರೇಪ್ ಕೇಸ್ ಗಳು ಹೆಚ್ಚಾಗಲು ಬಾಲಿವುಡ್ ನ ಮಾದಕ ತಾರೆ ಸನ್ನಿ ಲಿಯೋನ್ ಕಾರಣ ಅಂತ ಹೇಳಿಕೆ ನೀಡಿರುವ ಸಿಪಿಐ ಹಿರಿಯ ಮುಖಂಡ ಅತುಲ್ ಅಂಜಾನ್ ಮೇಲೆ ಸನ್ನಿ ಟ್ವೀಟ್ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದ ಕಾಂಡೋಮ್ ಜಾಹೀರಾತು ಒಂದು ರೇಪ್ ಹೆಚ್ಚಾಗಲು ಕಾರಣ ಎಂದು ಸಿಪಿಐ ಮುಖಂಡ ಅತುಲ್ ಅಂಜಾನ್ ಹೇಳಿಕೆ ಭಾರಿ ವಿವಾದಕ್ಕೆ ಗುರಿಯಾಗಿತ್ತು.[ಸನ್ನಿ ಕಾಂಡೋಮ್ ಜಾಹೀರಾತಲ್ಲಿ ಕಾಣಿಸಿಕೊಂಡ್ರೆ ರೇಪ್ ಹೆಚ್ಚತ್ತಾ?]

sunny leone

ಇದಕ್ಕೆ ಟ್ವಿಟ್ಟರ್ ಮೂಲಕ ಖಡಕ್ ಆಗಿ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಅಧಿಕಾರದಲ್ಲಿರುವವರು ಅಸಹಾಯಕರಿಗೆ ನೆರವು ಒದಗಿಸುವ ಬದಲು ನನ್ನ ಬಗ್ಗೆ ಯೋಚಿಸಿ, ಮಾತಾಡಿ ಅವರ ಸಮಯ ಹಾಗೂ ಶಕ್ತಿಯನ್ನು ವ್ಯರ್ಥ ಮಾಡುವುದು ನೋಡಿದರೆ ತುಂಬಾ ಬೇಸರವೆನಿಸುತ್ತದೆ ಎಂದು ಟಾಂಗ್ ನೀಡಿದ್ದಾರೆ.

ಒಂದು ಕಾಲದಲ್ಲಿ ಪೋರ್ನ್ ಸ್ಟಾರ್ ಆಗಿ ಫೇಮಸ್ ಆಗಿದ್ದ ಸನ್ನಿ ಲಿಯೋನ್ 'ಬಿಗ್ ಬಾಸ್' ಮೂಲಕ ತಮ್ಮ ನವ ಜೀವನವನ್ನು ಶುರು ಮಾಡಿದ್ದರು. ತದನಂತರ ಬಾಲಿವುಡ್ ಕ್ಷೇತ್ರದಲ್ಲಿ ಕೆಲವೊಂದು ಅವಕಾಶಗಳು ಅವರಿಗೆ ಒದಗಿ ಬಂದಿದ್ದು, ಹಾಟ್ ಅಭಿನಯದ ಮೂಲಕ ಮೆಚ್ಚುಗೆ ಗಳಿಸಿ ಸಖತ್ ಫೇಮಸ್ ಆದರು.[ಅಂತೂ ಶಾರುಖ್, ಸಲ್ಮಾನ್, ಸನ್ನಿ ಲಿಯೋನ್ ''ಕನ್ನಡ''ಕ್ಕೆ ಬಂದ್ರು.!]

sunny leone

ಈ ನಡುವೆ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಇತ್ತೀಚೆಗೆ ಕಾಂಡೋಮ್ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಸಿಪಿಐ ಮುಖಂಡ ವಿವಾದದ ಕಿಡಿ ಹಚ್ಚಿದ್ದು, ಇದಕ್ಕೆ ಪ್ರತಿಯಾಗಿ ಸನ್ನಿ ಲಿಯೋನ್ ನನ್ನ ಕುರಿತು ಚಿಂತನೆ ನಡೆಸುವ ಬದಲು ದೇಶದ ಕುರಿತು ಚಿಂತನೆ ನಡೆಸಿ ಎಂದು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

ಒಟ್ನಲ್ಲಿ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ಚಪಲ ಹೊಂದಿರುವ ರಾಜಕೀಯ ನಾಯಕರಿಗೆ ಖಡಕ್ ತಿರುಗೇಟು ನೀಡಿ ಸನ್ನಿ ಮತ್ತೊಮ್ಮೆ ಪ್ರಖ್ಯಾತಿ ಗಳಿಸಿದ್ದಾರೆ.

English summary
Not too long ago, Communist Party of India`s national secretary (CPI) Atul Kumar Anjan had claimed that Sunny`s condom advertisement will incite men to commit rapes. Here’s what Sunny had to say in response to the minister’s remark: Sad when people of of power waste their time and energy on me, instead of focusing on helping those in need.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada