»   » ಸನ್ನಿ ಮನದಾಳದ ಬಯಕೆ ಬಹಿರಂಗ

ಸನ್ನಿ ಮನದಾಳದ ಬಯಕೆ ಬಹಿರಂಗ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕೆನಡಾ ಮೂಲದ ನಟಿ, ರೂಪದರ್ಶಿ ಸನ್ನಿ ಲಿಯೋನ್ ಭಾನುವಾರ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಅಡ್ಡಾಡಿದ ಮೇಲೆ ಬರ್ಲಿನ್ ಗೆ ಹಾರಿದ ಸುದ್ದಿ ನಿಮಗೆಲ್ಲ ತಿಳಿದೇ ಇದೆ. ಸದ್ಯಕ್ಕೆ ಈ ಮಾಜಿ ಪೋರ್ನ್ ತಾರೆ ತನ್ನ ಮನದಾಳದ ಬಯಕೆ ಬಹಿರಂಗಗೊಳಿಸಿದ್ದಾರೆ.

ಪೋರ್ನೊಗ್ರಾಫಿಕ್ ಚಿತ್ರಗಳ ಮೂಲಕ 2000ರ ಸುಮಾರಿಗೆ ವಿಶ್ವಖ್ಯಾತಿ ಪಡೆದಿದ್ದ ಸನ್ನಿ ಈಗ ತಮ್ಮ ವೃತ್ತಿ ಜೀವನವನ್ನು ಬಾಲಿವುಡ್ ನಲ್ಲಿ ಕಂಡುಕೊಳ್ಳುತ್ತಿದ್ದಾರೆ. ಜಿಸ್ಮ್ 2 ಹಾಗೂ ಶೂಟ್ ಔಟ್ ಅಟ್ ವಡಾಲಾ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ರಾಗಿಣಿ ಎಂಎಂಎಸ್ 2 ಹಾಗೂ ಜಾಕ್ ಪಾಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.

ಜಾಕ್ ಪಾಕ್ ಚಿತ್ರದಲ್ಲಿ ಇತ್ತೀಚೆಗಷ್ಟೇ ಮದುವೆಯಾದ ಭರತ್ ಜತೆ ಸನ್ನಿ ನಟಿಸುತ್ತಿದ್ದಾರೆ. ಭರತ್ ರಿಂದ ರಜನಿ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿರುವ ಸನ್ನಿ ಈಗ ರಜನಿ ಜಪ ಮಾಡುತ್ತಿದ್ದಾರೆ ಎಂಬ ಸುದ್ದಿಯಿದೆ. ರಜನಿ ಅವರು ಸಿಗರೇಟ್ ಸೇದುವ ರೀತಿಯಲ್ಲಿ ಪ್ರತ್ಯಕ್ಷ ಕಾಣಲು ಕಾತುರದಿಂದ ಕಾದಿದ್ದೇನೆ ಎಂದು 32 ವರ್ಷ ಸನ್ನಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ರಜನಿ ಬಗ್ಗೆ ಸನ್ನಿ ಹೇಳಿದ್ದೇನು ಮುಂದೆ ಓದಿ....

ನಾನು ರಜನಿ ಫ್ಯಾನ್

ದಕ್ಷಿಣ ಭಾರತ ನಟರ ಶಿಸ್ತು, ಸಮಯಪಜ್ಞೆ, ನಟನಾ ಕೌಶಲ್ಯ ಬಗ್ಗೆ ಭರತ್ ರಿಂದ ತಿಳಿಯಿತು. ರಜನಿ ಸಾರ್ ಬಗ್ಗೆ ನನಗೆ ಹೆಚ್ಚು ಮಾಹಿತಿ ಸಿಕ್ಕಿತ್ತು. ರಜನಿ ಅವರಿಗೆ ಉತ್ತಮ ಕಾಮಿಡಿ ಸೆನ್ಸ್ ಇದೆ. ಅವರ ಡ್ಯಾನ್ಸ್- ಸಾಂಗ್ ಸ್ಟೈಲ್ ಗೆ ನಾನು ಮಾರು ಹೋಗಿದ್ದೇನೆ.

ರಜನಿ ಅತಿದೊಡ್ಡ ಸೂಪರ್ ಸ್ಟಾರ್ ಎಂಬುದು ನನಗೆ ಗೊತ್ತು. ಅವರ ಸಿಗರೇಟ್ ಟ್ರಿಕ್ಸ್ ಬಗ್ಗೆ ಕೇಳಿದ್ದೇನೆ. ಅದನ್ನು ಕಣ್ಣಾರೆ ನೋಡುವ ಬಯಕೆ ಇದೆ

ಯಾವ ಪಾತ್ರವಾದರೂ ಸರಿ

ರಜನಿ ಅವರ ಚಿತ್ರದಲ್ಲಿ ಯಾವ ಪಾತ್ರವಾದರೂ ಸರಿ ಮಾಡಲು ನಾನು ರೆಡಿ, ಅದರಲ್ಲೂ ಅವರ ಜತೆ ಹಾಡಿ ಕುಣಿಯುವ ದೃಶ್ಯವಿದ್ದರೆ ನನ್ನ ಬಯಕೆ ಈಡೇರಿದಂತಾಗುತ್ತದೆ. ಇದಕ್ಕೆ ಕಾಲ ಯಾವಾಗ ಕೂಡಿ ಬರುತ್ತದೋ ಕಾದು ನೋಡಬೇಕಿದೆ.

ಇನ್ಯಾರ ಜತೆ ನಟಿಸಬೇಕು?

ಸೂಪರ್ ಸ್ಟಾರ್ ರಜನಿ ನಂತರ ಅಮೀರ್ ಖಾನ್, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಜತೆ ನಟಿಸಿ ನರ್ತಿಸಬೇಕು ಎಂಬ ಆಸೆಯಿದೆ ಎಂದು ತಮ್ಮ ಬಯಕೆಯನ್ನು ಸನ್ನಿ ತೋಡಿಕೊಂಡಿದ್ದಾರೆ.

ಹೊಸ ಹುರುಪಿನಲ್ಲಿ

2011ರಲ್ಲಿ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಸನ್ನಿ ಲಿಯೋನ್ 49ನೇ ದಿನ ಮನೆ ಪ್ರವೇಶಿಸಿದ್ದಳು. ತನ್ನ ಹಳೆ ಜೀವನ, ಪೋರ್ನ್ ಚಿತ್ರಗಳ ಮಾಡಲು ಇದ್ದ ಸಂಕಟದ ಬಗ್ಗೆ ನೇರವಾಗಿ ಬಾಯ್ಬಿಡದಿದ್ದರೂ ಆಗಾಗ ಹೇಳಿಕೊಂಡು ನೋವು ತೋಡಿಕೊಂಡಿದ್ದಳು

ಬರ್ಲಿನ್ ನಲ್ಲಿ

ಭಾನುವಾರ ಬೆಂಗಳೂರಿಗೆ ಬಂದಿದ್ದ ಸನ್ನಿ ಲಿಯೋನ್ ನೇರವಾಗಿ ಜರ್ಮನಿಯ ಬರ್ಲಿನ್ ಗೆ ತೆರಳಿದ್ದಾರೆ. ಸನ್ನಿ ಜತೆ ಪತಿ ಡೇನಿಯಲ್ ವೆಬ್ಬರ್ ಇದ್ದರು ಎಂದು ತಿಳಿದು ಬಂದಿದೆ.

ಮತ್ತೆ ಮುಂಬೈಗೆ

ಬರ್ಲಿನ್ ನಲ್ಲಿ ಹೆಚ್ಚು ದಿನ ಉಳಿಯದ ಸನ್ನಿ ಮತ್ತೆ ಮುಂಬೈಗೆ ಆಗಮಿಸಿ ರಾಗಿಣಿ ಎಂಎಂಎಸ್ 2 ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎರಡನೇ ವಿಶ್ವ ಮಹಾ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ಡೇನಿಯಲ್ ವೆಬ್ಬರ್ ಅವರ ಕುಟುಂಬದ ಸದಸ್ಯರಿಗೆ ಶಾಂತಿ ಕೋರಿ Holocaust ಸ್ಮಾರಕದಲ್ಲಿ ದಂಪತಿ ಪ್ರಾರ್ಥಿಸಿದ್ದಾರೆ.

ರಜನಿ ಚಿತ್ರ

ರಜನಿಕಾಂತ್ ವಿಷಯಕ್ಕೆ ಬಂದರೆ ಸದ್ಯಕ್ಕೆ ಬಹುನಿರೀಕ್ಷಿತ ಕೋಚಾಡಿಯನ್ ಚಿತ್ರದ ಪೋಸ್ಟ್ ಪ್ರೊಡೆಕ್ಷನ್ ನಲ್ಲಿ ರಜನಿ ಬ್ಯುಸಿಯಾಗಿದ್ದಾರೆ. ಪುತ್ರಿ ಸೌಂದರ್ಯ ಅಶ್ವಿನ್ ನಿರ್ದೇಶನದ ಅನಿಮೇಷನ್ ಚಿತ್ರ ಭಾರಿ ಕುತೂಹಲ ಕೆರಳಿಸಿದೆ.

ರಜನಿ ಜತೆ ನಟಿಸುವ ಬಯಕೆ ಸನ್ನಿ ವ್ಯಕ್ತಪಡಿಸಿದರೂ ರಜನಿ ಮುಂದೆ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸನ್ನಿ ಬಯಕೆ ಸದ್ಯಕ್ಕಂತೂ ಈಡೇರುವಂತಿಲ್ಲ.

ಕೊಚಾಡಿಯನ್ ರಿಲೀಸ್

ಕೊಚಾಡಿಯನ್ ಚಿತ್ರದ ಟ್ರೇಲರ್, ಟೀಸರ್, ಪೋಸ್ಟರ್ ಅಭಿಮಾನಿಗಳ ಕುತೂಹಲವನ್ನು ತಣಿಸಿದೆ. ಚಿತ್ರ ಬಹುತೇಕ ಡಿಸೆಂಬರ್ ವೇಳೆಗೆ ತೆರೆಗೆ ಬರಲಿದೆ. ದೀಪಿಕಾ ಪಡುಕೋಣೆ, ಜಾಕಿ ಶ್ರಾಫ್, ಶರತ್ ಕುಮಾರ್ ಮುಂತಾದವರು ತಾರಾಗಣದಲ್ಲಿದ್ದಾರೆ.

English summary
Bollywood actress Sunny Leone, who is busy with her Hindi movie Ragini MMS 2, has expressed her wish to work in South films. Like many actresses, the sensational girl has said that she would like to work with one of the biggest stars of South films.
Please Wait while comments are loading...