For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್ ಚಿತ್ರದಲ್ಲಿ ರಜನಿಕಾಂತ್ ಐಟಂ ಡಾನ್ಸ್

  By Rajendra
  |

  ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಬಾಲಿವುಡ್ ನಲ್ಲಿ ಭರ್ಜರಿ ಆಫರ್ ಸಿಕ್ಕಿದೆ. ಅದೂ ಎಂಥಹಾ ಆಫರ್ ಅಂತೀರಾ ಐಟಂ ಬೆಡಗಿಯರು ಬಾಫ್ ರೇ ಎಂದು ಮೂಗಿನ ಮೇಲೆ ಬೆರಳಿಡುವಂತಹ ಅವಕಾಶ ಅವರ ಜೇಬಿಗೆ ಬಂದು ಬಿದ್ದಿದೆ.

  ಅಮೀರ್ ಖಾನ್ ಜೊತೆ ರಜನಿಕಾಂತ್ ಅಭಿನಯಿಸಲು ಓಕೆ ಎಂದಿದ್ದು ಈಗ ಮುಂಬೈನಿಂದ ಕನ್ಯಾಕುಮಾರಿ ತನಕ ಚರ್ಚನೀಯ ಅಂಶವಾಗಿದೆ. ಅಮೀರ್ ಖಾನ್ ಅವರ ಮುಂದಿನ ಚಿತ್ರ 'ತಲಾಷ್' ಚಿತ್ರದಲ್ಲಿ ಐಟಂ ಡಾನ್ಸ್ ಮಾಡಲಿದ್ದಾರೆ ರಜನಿಕಾಂತ್! ಈ ಮೂಲಕ ಅವರು ಹೊಸ ಐಟಂ ಬಾಯ್ ಆಗಿ ಹೊರಹೊಮ್ಮುತ್ತಿದ್ದಾರೆ.

  ಈ ಸುದ್ದಿ ಇನ್ನೂ ಪಕ್ಕಾ ಆಗಿಲ್ಲದಿದ್ದರೂ ಬಾಲಿವುಡ್ ನಲ್ಲಿ ಲೀಕ್ ಆಗಿದೆ. ರಜನಿಕಾಂತ್ ಇದುವರೆಗೂ ಐಟಂ ಹಾಡಿನಲ್ಲಿ ಅಭಿನಯಿಸಿದ್ದಿಲ್ಲ. ಒಂದು ವೇಳೆ ಅವರು ಅಮೀರ್ ಚಿತ್ರದಲ್ಲಿ ಐಟಂ ಹಾಡಿಗೆ ಕಾಲು ಕುಣಿಸಿದರೆ ಅವರ ವೃತ್ತಿಜೀವನದಲ್ಲಿ ಮೊಟ್ಟ ಮೊದಲ ಐಟಂ ಡಾನ್ಸ್ ಇದಾಗಲಿದೆ.

  ಇದಕ್ಕಾಗಿ ರಜನಿಕಾಂತ್ ಪಡೆದಿರುವ ಸಂಭಾವನೆ ಎಷ್ಟು ಗೊತ್ತೆ? ಸರಿಸುಮಾರು ರು.15 ಕೋಟಿಯಂತೆ. ಚಿತ್ರದ ಬಜೆಟ್ ರು.50 ಕೋಟಿ ಎನ್ನುತ್ತವೆ ಮೂಲಗಳು. ಹೆಚ್ಚುಕಡಿಮೆ ಚಿತ್ರದ ಬಜೆಟ್ ನ ಕಾಲು ಭಾಗ ರಜನಿಕಾಂತ್ ಖಾತೆಗೆ ಜಮೆಯಾಗಲಿದೆ.

  ಈ ಹಿಂದೆ ರಜನಿಕಾಂತ್ ಹಿಂದಿಯ 'ಧೂಮ್ 3' ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈಗ ಸ್ವತಃ ಅಮೀರ್ ಖಾನ್ ಅವರೇ ರಜನಿಯನ್ನು ಭೇಟಿ ಮಾಡಿ 'ತಲಾಷ್' ಚಿತ್ರದಲ್ಲಿ ಅಭಿನಯಿಸುವಂತೆ ಕೋರಿದ್ದಾರೆ ಎನ್ನುತ್ತವೆ ಬಾಲಿವುಡ್ ವಲಯಗಳು.

  12.12.12ಕ್ಕೆ ಕೋಚಡಯಾನ್: ರಜನಿಕಾಂತ್ ಅಭಿನಯಿಸುತ್ತಿರುವ ಭಾರಿ ಬಜೆಟ್ ಚಿತ್ರ 'ಕೋಚಡಯಾನ್' ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಈ ಚಿತ್ರ ರಜನಿ ಹುಟ್ಟುಹಬ್ಬದ ದಿನ (ಡಿಸೆಂಬರ್ 12) ಅಂದರೆ 12.12.12ರಂದು ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

  ಇನ್ನೊಂದು ವಿಶೇಷ ಎಂದರೆ 'ಕೋಚಡಯಾನ್' ಚಿತ್ರದ ಆಡಿಯೋ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಬಿಡುಗಡೆ ಮಾಡಲು ಮುಂದಾಗಿರುವುದು. ಜಪಾನ್ ನಲ್ಲಿ ರಜನಿಗೆ ಅಪಾರ ಅಭಿಮಾನಿ ಬಳಗವಿರುವ ಕಾರಣ ಹೀಗೆ ಮಾಡಲಾಗುತ್ತಿದೆ.

  ಈ ಚಿತ್ರದಲ್ಲಿ ರಜನಿಕಾಂತ್ ಜೊತೆಯಾಗಿದ್ದಾರೆ ದೀಪಿಕಾ ಪಡುಕೋಣೆ. ಆಕ್ಷನ್ ಕಟ್ ಹೇಳುತ್ತಿರುವವರು ಸೌಂದರ್ಯ ರಜನಿಕಾಂತ್. 3Dಯಲ್ಲೂ ಈ ಚಿತ್ರದ ಮೂಡಿಬರಲಿದ್ದು ರಜನಿ ಅಭಿಮಾನಿಗಳ ಪಾಲಿಗೆ ನಯನಾನಂದ ನೀಡಲಿದೆ. (ಏಜೆನ್ಸೀಸ್)

  English summary
  The rumours are doing the rounds that megastar Rajinikanth might be doing an item number for the brilliant Aamir Khan's upcoming film Talaash. Though the report has not been confirmed, but it is believed that Rajini has possibly given a nod to appear in an item number in Talaash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X