»   » ಜಿಯಾ ರೇಪ್ ಕೇಸ್: ಗೆಳೆಯ ಸೂರಜ್ ಬಂಧನ

ಜಿಯಾ ರೇಪ್ ಕೇಸ್: ಗೆಳೆಯ ಸೂರಜ್ ಬಂಧನ

By Mahesh
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  25 ವರ್ಷದ ಹರೆಯ. ಬ್ರಿಟಿಷ್ ಮೂಲದ ಬಾಲಿವುಡ್ ತಾರೆ ನಫೀಸಾ ಅಲಿಯಾಸ್ ಜಿಯಾ ಖಾನ್ ಆತ್ಮಹತ್ಯೆ ಕಾರಣ ಬಹುತೇಕ ಸ್ಪಷ್ಟವಾಗುತ್ತಿದೆ. ಜಿಯಾ ಖಾನ್ ಗೆಳೆಯ ಸೂರಜ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

  ಬಾಲಿವುಡ್ ನಟ ಆದಿತ್ಯ ಪಂಚೋಲಿ ಪುತ್ರ ಸೂರಜ್ ಹಾಗೂ ಜಿಯಾ ಖಾನ್ ನಡುವೆ ಬರೀ ಗೆಳೆತನ ಇತ್ತು ಎನ್ನಲಾಗಿತ್ತು. ಆದರೆ, ಜಿಯಾಖಾನ್ ಬರೆದಿರುವ ಸುದೀರ್ಘ ಪತ್ರದಲ್ಲಿ ಆಕೆ ಹಾಗೂ ಸೂರಜ್ ನಡುವಿನ ಸಂಬಂಧದ ಬಗ್ಗೆ ಸವಿಸ್ತಾರ ಮಾಹಿತಿ ಇದೆ.

  ಸೂಸೈಡ್ ನೋಟ್ ನಲ್ಲಿ ಹೇಳಿರುವಂತೆ ಜಿಯಾಖಾನ್ ಮೇಲೆ ಹಲ್ಲೆ, ಅತ್ಯಾಚಾರ ಎಸಗಿರುವ ಸೂರಜ್ ಅವರು ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕಾರಣರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲು ಆತನನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

  ಪುತ್ರಿ ಜಿಯಾ ಖಾನ್ ಪತ್ರ ಓದಿ ಶಾಕ್ ಗೆ ಒಳಗಾಗಿರುವ ರಬಿಯಾ ಖಾನ್, ಸೂರಜ್ ಬಗ್ಗೆ ನನಗೆ ಒಳ್ಳೆ ಅಭಿಪ್ರಾಯವಿತ್ತು ಆದರೆ, ಈ ರೀತಿ ಆಗಿರುವುದು ಊಹಿಸಲು ಸಾಧ್ಯವಿಲ್ಲ. ಆತ ತಪ್ಪಿತಸ್ಥನಾದರೆ ಕಠಿಣ ಶಿಕ್ಷೆ ಸಿಗಲಿ ನನ್ನ ಮಗಳಂತೂ ಹಿಂತಿರುಗಿ ಬರುವುದಿಲ್ಲ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. [ಮರಣಪತ್ರದ ವಿವರ]

  ಸೂರಜ್ ವಿಚಾರಣೆಗೆ

  ಜಿಯಾಖಾನ್ ಮೇಲೆ ಸೂರಜ್ ಅತ್ಯಾಚಾರ ಎಸಗಿದ್ದ. ಆಕೆ ಸೂರಜ್ ಮಗುವಿನ ತಾಯಿಯಾಗುತ್ತಿದ್ದಳು ಆದರೆ, ಗರ್ಭಪಾತವಾಗಿತ್ತು. ನೋವು, ಹತಾಶೆ, ಅವಮಾನಗಳಿಂದ ಬೆಂದಿದ್ದ ಜಿಯಾ ಆತ್ಮಹತ್ಯೆಗೆ ಶರಣಾದಳು

  ಕಮಲ್ ಖಾನ್ ಹೇಳಿಕೆ

  ಜಿಯಾ ಖಾನ್ ಸಾವಿಗೆ ಮಾನಸಿಕ ಖಿನ್ನತೆ, ವೃತ್ತಿಯಲ್ಲಿ ಏಳಿಗೆ ಕಾಣದಿರುವುದು ಕಾರಣ ಎಂದು ಎಲ್ಲರೂ ಹೇಳುವಾಗ ಮೊದಲ ಬಾರಿಗೆ ಆಕೆ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದು ನಟ ಕಮಲ್ ಖಾನ್. ಗ್ಲಾಮರ್ ನಟಿ ಜಿಯಾ ಸಾವಿಗೆ ಆಕೆ ಬಾಯ್ ಫ್ರೆಂಡ್ ಸೂರಜ್ ಪಂಚೋಲಿ ಕಾರಣ ಇರುವ ಸಾಧ್ಯತೆಯಿದೆ ಎಂದು ಕಮಲ್ ಖಾನ್ ಹೇಳಿದ್ದರು.

  ಸೂಸೈಡ್ ನೋಟ್ ಆಧಾರ

  ದೈಹಿಕವಾಗಿ, ಮಾನಸಿಕವಾಗಿ ಆತನಿಂದ ನೊಂದಿದ್ದೇನೆ. ಮೊದಲು ಪ್ರೀತಿ ತೋರಿಸಿದ್ದವ ಈಗ ಅವನನ್ನು ಕಂಡರೆ ಭಯವಾಗುತ್ತದೆ.ಬೇರೆ ಮಹಿಳೆಯರ ಜೊತೆ ಆತ ಬೆರೆಯುವುದು ನನಗೆ ಸಹಿಸಲು ಆಗುತ್ತಿಲ್ಲ. ನನ್ನ ವೃತ್ತಿ ಬಗ್ಗೆ ಗಮನ ಹರಿಸಲು ಆಗುತ್ತಿಲ್ಲ ಎಂದು ಜಿಯಾ ತನ್ನ ನೋವು ತೋಡಿಕೊಂಡಿದ್ದಳು

  ನೊಂದ ತಾಯಿ ಅಳಲು

  ಮುಂಬೈ ಪೊಲೀಸರು ಹಾಗೂ ಕಾನೂನಿನ ಮೇಲೆ ನನಗೆ ನಂಬಿಕೆಯಿದೆ. ಸೂರಜ್ ಗೆ ಮಾತ್ರವಲ್ಲ ಆತನ ತಂದೆ ಆದಿತ್ಯ ಹಾಗೂ ತಾಯಿ ಜರೀನಾ ವಹಾಬ್ ಗೂ ಶಿಕ್ಷೆಯಾಗಬೇಕು. ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ರಬಿಯಾ ಖಾನ್ ಹೇಳಿದ್ದಾರೆ.

  ಜೋರು ಜಗಳವಾಗಿತ್ತು

  ಸೂರಜ್ ಹಾಗೂ ಜಿಯಾ ನಡುವೆ ಮೊಬೈಲ್ ಸಂದೇಶ ಹರಿದಾಡಿದೆ. ಎಸ್ ಎಂಎಸ್, ಎಂಎಂಎಸ್ ಗಳಲ್ಲಿ ಏನಿತ್ತು ಎಂಬುದರ ಮಾಹಿತಿ ಸಿಕ್ಕಿದೆ. ಜೊತೆಗೆ ಜಿಯಾ ಬರೆದಿರುವ ಸೂಸೈಡ್ ನೋಟ್ ಪೊಲೀಸರಿಗೆ ಮಹತ್ವದ ದಾಖಲೆ ಒದಗಿಸಿದೆ.

  ಸಾಯುವ ಮುನ್ನ ಕೊನೆಯದಾಗಿ ಸಂಪರ್ಕಿಸಿದ್ದು ಸೂರಜ್ ರನ್ನು ಸಂಪರ್ಕಿಸಿದ್ದಲ್ಲದೆ ಆತನ ಜೊತೆ ಜೋರು ಜಗಳ ಮಾಡಿದ್ದರು ಎಂಬುದು ಜಗಜ್ಜಾಹೀರಾಗಿದೆ. ಸೂರಜ್ ಏನು ಹೇಳುತ್ತಾನೆ ಎಂಬುದು ಕುತೂಹಲಕಾರಿಯಾಗಿದೆ.

  English summary
  Bollywood actress Jiah Khan's boyfriend Suraj Pancholi, who is the son of Aditya Pancholi and Zarina Wahab, has been arrested by Mumbai Police in connection with Jiah's suicide. In her suicide note, Jiah had mentioned that Suraj has raped and abused her. Jiah also got pregnant with Suraj's child

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more