For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಾವಿನ ಪರಿಣಾಮ: 'ಬಾಲಿವುಡ್ ಕುಟುಂಬ'ಗಳ ಫಾಲೋವರ್ಸ್ ಸಂಖ್ಯೆ ಇಳಿಕೆ

  By Avani Malnad
  |

  ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಬಾಲಿವುಡ್‌ ಅನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಕೆಲವೇ ಕುಟುಂಬಗಳ ಶೋಷಣೆ, ದಬ್ಬಾಳಿಕೆ ಕಾರಣ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಬಾಲಿವುಡ್‌ನಲ್ಲಿ ಭಾರಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕರಣ್ ಜೋಹರ್, ಸಲ್ಮಾನ್ ಖಾನ್, ಆಲಿಯಾ ಭಟ್ ಸೇರಿದಂತೆ ಅನೇಕರ ವಿರುದ್ಧ ಕಿಡಿಕಾರಾಗುತ್ತಿದೆ.

  Case filed against 8 people including Karan Johar, Sanjay Leela Bhansali, Salman Khan | Filmibeat

  ಸುಶಾಂತ್ ಸಾವು ಒಂದೆಡೆ ಅನುಕಂಪ, ನೋವಿನ ಜತೆಯಲ್ಲಿ ಚಿತ್ರರಂಗದೊಳಗೇ ಹಲವು ದಶಕಗಳಿಂದ ಬೂದಿ ಮುಚ್ಚಿದ್ದ ಕೆಂಡದಂತಿದ್ದ ಅಸಮಾಧಾನದ ಸ್ಫೋಟಕ್ಕೂ ಕಾರಣವಾಗಿದೆ. ಇದು ಅಭಿಮಾನಿಗಳ ನಡೆಗಳಲ್ಲಿಯೂ ಕಾಣಿಸುತ್ತಿದೆ. ಚಿತ್ರರಂಗದಲ್ಲಿ ಬೇರೂರಿರುವ ಕುಟುಂಬಗಳಿಂದ ಬಂದು ಅವಕಾಶಗಳನ್ನು ಪಡೆಯುತ್ತಿರುವ ಕಲಾವಿದರ ಜನಪ್ರಿಯತೆ ಏಕಾಏಕಿ ಕುಸಿಯುತ್ತಿದೆ. ಮುಂದೆ ಓದಿ...

  'ಸುಶಾಂತ್ ಸಾವಿಗೆ ಕಾರಣರಾದ ಕರಣ್, ಯಶ್ ರಾಜ್, ಸಲ್ಮಾನ್ ಖಾನ್ ಚಿತ್ರಗಳನ್ನು ಬಹಿಷ್ಕರಿಸಿ''ಸುಶಾಂತ್ ಸಾವಿಗೆ ಕಾರಣರಾದ ಕರಣ್, ಯಶ್ ರಾಜ್, ಸಲ್ಮಾನ್ ಖಾನ್ ಚಿತ್ರಗಳನ್ನು ಬಹಿಷ್ಕರಿಸಿ'

  ಕಂಗನಾ ಫಾಲೋವರ್ಸ್ ಹೆಚ್ಚಳ

  ಕಂಗನಾ ಫಾಲೋವರ್ಸ್ ಹೆಚ್ಚಳ

  ಒಂದೆರಡು ದಿನಗಳಲ್ಲಿಯೇ ಅನೇಕ ಸ್ಟಾರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಸುಶಾಂತ್ ಪರವಾಗಿ, ಬಾಲಿವುಡ್‌ನ ನೆಪೋಟಿಸಂ ವಿರುದ್ಧ ಹರಿಹಾಯ್ದಿದ್ದ ಕಂಗನಾ ರಣಾವತ್ ಫಾಲೋವರ್‌ಗಳ ಸಂಖ್ಯೆ ಹೆಚ್ಚಾಗಿದೆ. ಕಂಗನಾ ಸುಮಾರು 2 ಮಿಲಿಯನ್ ಫಾಲೋವರ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹೊಂದಿದ್ದರು. ಈಗ ಅವರ ಸಂಖ್ಯೆ 3.6ಕ್ಕೆ ಏರಿದೆ.

  ಕರಣ್ ಜೋಹರ್, ಆಲಿಯಾ

  ಕರಣ್ ಜೋಹರ್, ಆಲಿಯಾ

  11 ಮಿಲಿಯನ್‌ನಷ್ಟು ಫಾಲೋವರ್‌ಗಳನ್ನು ಹೊಂದಿದ್ದ ನಿರ್ಮಾಪಕ ಕರಣ್ ಜೋಹರ್ ಭಾರಿ ಪ್ರಮಾಣದಲ್ಲಿ ಫಾಲೋವರ್‌ಗಳನ್ನು ಕಳೆದುಕೊಂಡಿದ್ದು, 10.8 ಮಿಲಿಯನ್‌ಗೆ ಇಳಿದಿದೆ. ಕೆಂಗಣ್ಣಿಗೆ ಗುರಿಯಾಗಿರುವ ಆಲಿಯಾ ಭಟ್ ಕೂಡ ಒಂದು ಲಕ್ಷ ಫಾಲೋವರ್‌ಗಳನ್ನು ಕಳೆದುಕೊಂಡಿದ್ದಾರೆ.

  ಸುಶಾಂತ್ ಸಿಂಗ್ ಖಿನ್ನತೆ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದ ತಂದೆಸುಶಾಂತ್ ಸಿಂಗ್ ಖಿನ್ನತೆ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದ ತಂದೆ

  ಫಾಲೋವರ್‌ಗಳ ಇಳಿಕೆ

  ಫಾಲೋವರ್‌ಗಳ ಇಳಿಕೆ

  ಸೋನಂ ಕಪೂರ್, ಸಲ್ಮಾನ್ ಖಾನ್, ಅನನ್ಯಾ ಪಾಂಡೆ, ಸೋನಾಕ್ಷಿ ಸಿನ್ಹಾ, ಶಾಹಿದ್ ಕಪೂರ್ ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳ ಫಾಲೋವರ್‌ಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದೆ. ಇದು ಸಿನಿಮಾ ಅಭಿಮಾನಿಗಳ ಆಕ್ರೋಶದ ಪರಿಣಾಮ. ಹಾಗೆಯೇ ಸುಶಾಂತ್ ಸಾಯುವ ಮುನ್ನ ಇದ್ದ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಸುಮಾರು 9.1 ಮಿಲಿಯನ್. ಅದೀಗ 11.9 ಮಿಲಿಯನ್‌ಗೆ ಏರಿಕೆಯಾಗಿದೆ.

  ಸುಶಾಂತ್ ಮಾಜಿ ಗೆಳತಿಯರು

  ಸುಶಾಂತ್ ಮಾಜಿ ಗೆಳತಿಯರು

  ಸುಶಾಂತ್ ಸಿಂಗ್ ಅವರಿಗೆ ಹೆಚ್ಚು ಆಪ್ತರಾಗಿದ್ದ ಮತ್ತು ಹೆಚ್ಚಿನ ಸಿನಿಮಾ ಅಭಿಮಾನಿಗಳಿಗೆ ಪರಿಚಿತರಾಗಿರದ ಮಹೇಶ್ ಶೆಟ್ಟಿ ಸೇರಿದಂತೆ ಅನೇಕರಿಗೆ ಫಾಲೋವರ್‌ಗಳು ಹೆಚ್ಚಾಗಿದ್ದಾರೆ. ಸುಶಾಂತ್ ಅವರ ಗೆಳತಿಯರಾಗಿದ್ದ ಅಂಕಿತಾ ಲೋಖಂಡೆ, ರೆಹಾ ಚಕ್ರಬೋರ್ತಿ ಮತ್ತು ಕೃತಿ ಸನನ್ ಅವರ ಫಾಲೋವರ್‌ಗಳ ಸಂಖ್ಯೆ ಅಧಿಕವಾಗಿದೆ.

  ಸುಶಾಂತ್ ಸಿಂಗ್‌ಗೆ ಅವಮಾನ ಮಾಡಿದ್ದ ಶಾರುಖ್ ಖಾನ್: ವಿಡಿಯೋ ವೈರಲ್ಸುಶಾಂತ್ ಸಿಂಗ್‌ಗೆ ಅವಮಾನ ಮಾಡಿದ್ದ ಶಾರುಖ್ ಖಾನ್: ವಿಡಿಯೋ ವೈರಲ್

  English summary
  Karan Johar, Alia Bhatt and many others loses huge number of followers on social media after the sad demise of Sushant Singh Rajput.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X