For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆ ರಣ್‌ವೀರ್ '83' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲುತ್ತೆ: 'Boycott 83'

  |

  ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಸಿನಿಮಾ '83' ವಿಶ್ವದಾದ್ಯಂತ ಬಿಡುಗಡೆಯಾಗಿದೆ. 1983ರಲ್ಲಿ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ತಂಡ ಮೊದಲ ಬಾರಿಗೆ ಕ್ರಿಕೆಟ್ ವಿಶ್ವ ಕಪ್ ಗೆದ್ದಿತ್ತು. ಆ ಕ್ಷಣಗಳನ್ನು ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ತೆರೆಮೇಲೆ ತಂದಿದ್ದಾರೆ. ಈಗಾಗಲೇ '83' ಸಿನಿಮಾ ಹಲವು ಕಡೆಗಳಲ್ಲಿ ಪ್ರೀಮಿಯರ್ ಕಂಡಿದೆ. ಸಿನಿಮಾ ನೋಡಿದವರು ಇದು ಥಿಯೇಟರ್‌ಗಳನ್ನೇ ಕ್ರಿಕೆಟ್ ಸ್ಟೇಡಿಯಂ ಆಗಿ ಪರಿವರ್ತಿಸುವ ಕ್ಷಣವೆಂದು ಹೇಳಿದ್ದಾರೆ.

  '83' ಸಿನಿಮಾ ನೋಡಿದವರೆಲ್ಲಾ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ಹೀಗಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲುತ್ತೆ. '83' ಸಿನಿಮಾವನ್ನು ಬಾಯ್‌ಕಾಟ್ ಮಾಡಿ ಅಂತ ಅಭಿಯಾನ ಶುರುಮಾಡಿದ್ದಾರೆ. ಅಷ್ಟಕ್ಕೂ ಸಿನಿಮಾ ಬಿಡುಗಡೆಗೆ ಮುನ್ನ '83' ಸಿನಿಮಾ ನೋಡಬೇಡಿ ಅಂತಿರುವುದು ಏಕೆ? ಬಾಯ್‌ಕಾಟ್ ಅಭಿಯಾನ ಶುರುಮಾಡಿದ್ದು ಯಾರು? ಈ ಎಲ್ಲಾ ಮಾಹಿತಿಗಾಗಿ ಮುಂದೆ ಓದಿ....

  ಟ್ರೆಂಡಿಂಗ್‌ನಲ್ಲಿ ಬಾಯ್‌ಕಾಟ್ '83'

  ಟ್ರೆಂಡಿಂಗ್‌ನಲ್ಲಿ ಬಾಯ್‌ಕಾಟ್ '83'

  ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಅಭಿನಯದ '83' ಸಿನಿಮಾ ವಿರುದ್ಧ ಬಿಡುಗಡೆಗೂ ಮುನ್ನವೇ 'ಬಾಯ್‌ಕಾಟ್ 83' ಅಭಿಯಾನ ಶುರುವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ '83' ಸಿನಿಮಾ ನಿಷೇಧಿಸುವಂತೆ ಕೆಲವರು ಪಟ್ಟು ಹಿಡಿದ ಕೂತಿದ್ದಾರೆ. ಅಷ್ಟಕ್ಕೂ 'ಬಾಯ್‌ಕಾಟ್ 83' ಅಭಿಯಾನವನ್ನು ಆರಂಭಿಸಿದ್ದು, ಬಾಲಿವುಡ್ ನಟ ಸುಶಾಂತ್ ಸಿಂಗ್ ಅಭಿಮಾನಿಗಳು. ಇಂದು (ಡಿಸೆಂಬರ್ 24) ಬೆಳಗ್ಗೆಯಿಂದಲೇ ಬಾಯ್‌ಕಾಟ್ ಅಭಿಯಾನ ಚಾಲನೆಯಲ್ಲಿದ್ದು, ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.

  ಸುಶಾಂತ್ ಅಣಕಿಸಿದ್ದಕ್ಕೆ 'ಬಾಯ್‌ಕಾಟ್ 83'

  ಸುಶಾಂತ್ ಅಣಕಿಸಿದ್ದಕ್ಕೆ 'ಬಾಯ್‌ಕಾಟ್ 83'

  ಕೆಲವು ದಿನಗಳ ಹಿಂದೆ ರಣ್‌ವೀರ್ ಸಿಂಗ್ ಚಿಪ್ಸ್ ಜಾಹೀರಾತಿನಲ್ಲಿ ನಟಿಸಿದ್ದರು. ಅದರಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್‌ರನ್ನು ಅಣುಕಿಸುವಂತೆ ರಣ್‌ವೀರ್ ಸಿಂಗ್ ನಟಿಸಿದ್ದರು. ಇಂಜಿನಿಯರಿಂಗ್ ಡಿಗ್ರಿಯ ಕೊನೆಯ ವರ್ಷದಲ್ಲಿರುವ ವಿದ್ಯಾರ್ಥಿಗೆ ಮುಂದೇನು ಪ್ಲ್ಯಾನ್ ಎಂದು ಕೇಳುತ್ತಾರೆ. ಆಗ ರಣ್‌ವೀರ್ ಸಿಂಗ್ ಕೊಡುವ ಹಾಸ್ಯಭರಿತ ಉತ್ತರ ಸುಶಾಂತ್ ಸಿಂಗ್ ಅಭಿಮಾನಿಗಳನ್ನು ಕೆರಳಿಸಿತ್ತು. ಒಂದು ವರ್ಷದ ಹಿಂದೆ ರಿಲೀಸ್ ಆಗಿದ್ದ ಈ ಜಾಹೀರಾತು ವಿವಾದಕ್ಕೆ ಕಾರಣವಾಗಿತ್ತು. ಈಗ '83' ಬಿಡುಗಡೆ ಸಂದರ್ಭದಲ್ಲಿ ಸೇಡು ತೀರಿಸಿಕೊಂಡಿದ್ದಾರೆ.

   ಧೋನಿ ಸಿನಿಮಾ ಜೊತೆ '83' ಹೋಲಿಕೆ

  ಧೋನಿ ಸಿನಿಮಾ ಜೊತೆ '83' ಹೋಲಿಕೆ

  ಸುಶಾಂತ್ ಅಭಿಮಾನಿಗಳು '83' ಸಿನಿಮಾ ಬಾಯ್‌ಕಾಟ್ ಮಾಡುವಂತೆ ಅಭಿಯಾನ ಆರಂಭಿಸಿದ್ದಕ್ಕೆ ಜಾಹೀರಾತು ಒಂದೇ ಕಾರಣವಲ್ಲ. ಸುಶಾಂತ್ ಸಿಂಗ್ ರಜಪೂತ್ ನಟಿಸಿದ ಎಂ ಎಸ್ ಧೋನಿ: ಅನ್‌ಟೋಲ್ಡ್ ಸ್ಟೋರಿ ಸಿನಿಮಾದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಇದಕ್ಕೂ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. 'ಬಾಯ್‌ಕಾಟ್ 83' ಬ್ಯಾನ್ ಮಾಡುವಂತೆ ಅಭಿಯಾನ ಅರಂಭಿಸಿದ್ದಕ್ಕೆ ಇದೂ ಒಂದು ಕಾರಣ.

  '83' ಕೆಲವೇ ಚಿತ್ರಮಂದಿರಗಳಲ್ಲಿ ರಿಲೀಸ್

  '83' ಕೆಲವೇ ಚಿತ್ರಮಂದಿರಗಳಲ್ಲಿ ರಿಲೀಸ್

  '83' ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಸ್ವತ: ಆಸಕ್ತಿ ವಹಿಸಿ ಈ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಕನ್ನಡಿಗರಿಗೆ 'ಪುಷ್ಪ'ದಂತೆ ಈ ಸಿನಿಮಾ ಕೂಡ ಬೇಸರ ತರಿಸಿದೆ. ಕೆಲವೇ ಕೆಲವು ಥಿಯೇಟರ್‌ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಕನ್ನಡಿಗರು ಈ ಸಿನಿಮಾಗೆ ಯಾವ ರೀತಿ ರೆಸ್ಪಾನ್ಸ್ ಕೊಡುತ್ತಾರೆ ಅನ್ನುವುದನ್ನು ಕುತೂಹಲ ಕೆರಳಿಸಿದೆ.

  English summary
  Sushant Singh Rajput Fans Trend Boycott Ranveer singh Deepika Padukone movie 83. Sushant Singh Rajput’s fans calling out Ranveer for allegedly mocking Sushant in a chips.
  Friday, December 24, 2021, 14:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X