twitter
    For Quick Alerts
    ALLOW NOTIFICATIONS  
    For Daily Alerts

    ವಿಪರ್ಯಾಸವೆಂದರೆ ಇದು: ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂದು ಹೇಳಿದ್ದರು ಸುಶಾಂತ್!

    |

    ಕೇವಲ ಒಂಬತ್ತು ತಿಂಗಳ ಹಿಂದಷ್ಟೇ ಸುಶಾಂತ್ ಸಿಂಗ್ ರಜಪೂತ್, ವರುಣ್ ಶರ್ಮಾ, ಶ್ರದ್ಧಾ ಕಪೂರ್, ಪ್ರತೀಕ್ ಬಬ್ಬರ್, ತಾಹಿರ್ ರಾಜ್ ಭಾಸಿನ್ ಅಭಿನಯದ 'ಚಿಚೋರೆ' ಎಂಬ ಚಿತ್ರ ಬಿಡುಗಡೆಯಾಗಿತ್ತು. ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರ ತನ್ನ ಕಥಾವಸ್ತುವಿನ ಕಾರಣದಿಂದ ಗಮನ ಸೆಳೆದಿತ್ತು.

    Recommended Video

    ರೀಲ್ ನಲ್ಲಿ ಪರಿಹಾರ ಕೊಟ್ಟ ಸುಶಾಂತ್ ರಿಯಲ್ ಲೈಫ್ ನಲ್ಲಿ ಸೋತಿದ್ಯಾಕೆ? |Sushant Singh Rajput|FILMIBEAT KANNADA

    ಸುಶಾಂತ್ ಮತ್ತು ಇತರೆ ಕಲಾವಿದರು ಇಲ್ಲಿ ಎರಡು ಛಾಯೆಯ ಪಾತ್ರಗಳಲ್ಲಿ ನಟಿಸಿದ್ದರು. ಕಾಲೇಜು ದಿನಗಳು ಹಾಗೂ ಅವರ ಮಧ್ಯವಯಸ್ಸಿನ ದಿನಗಳ ಪಾತ್ರಗಳಿದ್ದವು. ಕಡಿಮೆ ಅಂಕ ಗಳಿಸಿದ್ದ ಕಾರಣಕ್ಕೆ ತನಗೆ ಐಐಟಿಯಲ್ಲಿ ಸೀಟು ಸಿಗುವುದಿಲ್ಲ ಎಂಬ ಕಾರಣಕ್ಕೆ ಮಗ ಮನೆಯ ಮೇಲಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸುವ ಘಟನೆಯ ಹಿನ್ನೆಲೆಯಲ್ಲಿ ಈ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಅಪ್ಪ ಬಹಳ ಬುದ್ಧಿವಂತ ಎಂಜಿನಿಯರ್. ಆತನ ಮಟ್ಟಕ್ಕೆ ತನ್ನ ಬುದ್ಧಿಶಕ್ತಿ ಇಲ್ಲ ಎನ್ನುವುದು ಮಗನನ್ನು ಕಾಡುತ್ತಿತ್ತು. ಮುಂದೆ ಓದಿ....

    ಅಪ್ಪ-ಮಗನ ಬಾಂಧವ್ಯ

    ಅಪ್ಪ-ಮಗನ ಬಾಂಧವ್ಯ

    ಅಪ್ಪ (ಸುಶಾಂತ್) ಮತ್ತು ಅಮ್ಮ (ಶ್ರದ್ಧಾ ಕಪೂರ್) ನಡುವಿನ ಮನಸ್ತಾಪ ಕೂಡ ಆತನ ಮನಸಿನ ಮೇಲೆ ಪರಿಣಾಮ ಬೀರಿತ್ತು. ತಾನೊಬ್ಬ 'ಸೋತವ' ಎಂದು ಯಾರು ಕರೆಯಬಾರದು ಎಂಬ ಅಳುಕಿನಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಮಗ ಹೇಳಿಕೊಳ್ಳುತ್ತಾನೆ. ಅಪ್ಪ-ಮಗನ ಬಾಂಧವ್ಯ ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಲಾಗಿತ್ತು.

    Breaking ಚಿತ್ರರಂಗಕ್ಕೆ ಮತ್ತೊಂದು ಆಘಾತ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆBreaking ಚಿತ್ರರಂಗಕ್ಕೆ ಮತ್ತೊಂದು ಆಘಾತ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

    ಮಗನಲ್ಲಿ ಆತ್ಮವಿಶ್ವಾಸ ತುಂಬುವ ಪಾತ್ರ

    ಮಗನಲ್ಲಿ ಆತ್ಮವಿಶ್ವಾಸ ತುಂಬುವ ಪಾತ್ರ

    ಆಗ ಅಪ್ಪ, ತಾನೊಬ್ಬ ಯಶಸ್ವಿ ವ್ಯಕ್ತಿ ಭಾವಿಸಿದ್ದ ಮಗನಿಗೆ ತಾನು ಜೀವನದಲ್ಲಿ ಬಹುದೊಡ್ಡ ಸೋಲು ಕಂಡವನು. ತಾನೊಬ್ಬ ಲೂಸರ್ ಎಂಬುದನ್ನು ಅಪ್ಪ ವಿವರಿಸುತ್ತಾನೆ. ಅದಕ್ಕಾಗಿ ಬೇರೆ ಬೇರೆ ದಿಕ್ಕಿನಲ್ಲಿರುವ ತನ್ನ ಸ್ನೇಹಿತರನ್ನು ಕರೆಯಿಸಿ ತಮ್ಮ ಕಾಲೇಜು ದಿನಗಳ ಕಥೆ ಹೇಳಿಸುತ್ತಾನೆ. ಆ ಮೂಲಕ ಮಗನಲ್ಲಿ ಆತ್ಮವಿಶ್ವಾಸ ತುಂಬುತ್ತಾನೆ. ಹಾಗೆಯೇ ಆತ್ಮಹತ್ಯೆಯಿಂದ ಯಾವುದಕ್ಕೂ ಪರಿಹಾರ ಸಿಗುವುದಿಲ್ಲ ಎಂಬುದನ್ನು ಮನದಟ್ಟು ಮಾಡುತ್ತಾನೆ.

    ಸ್ಫೂರ್ತಿ ತುಂಬಿದ್ದ ಚಿತ್ರ

    ಸ್ಫೂರ್ತಿ ತುಂಬಿದ್ದ ಚಿತ್ರ

    ಈ ಚಿತ್ರದ ವಸ್ತು ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು. ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಗನಿಗೆ, ಯಾವ ಸೋಲೂ ಆತ್ಮಹತ್ಯೆಗೆ ಎಡೆ ಮಾಡಿಕೊಡಬಾರದು. ಆತ್ಮಹತ್ಯೆಯಿಂದ ಪರಿಹಾರ ಸಿಗುವುದಿಲ್ಲ. ಸವಾಲನ್ನು ಎದುರಿಸಿದರೆ ಪರಿಹಾರ ಸಿಗುತ್ತದೆ ಎಂದು ಹೇಳುವ ಪಾತ್ರದಲ್ಲಿ ಸುಶಾಂತ್ ನಟಿಸಿದ್ದರು. ಈ ಚಿತ್ರ ಅನೇಕರಲ್ಲಿ ಸ್ಫೂರ್ತಿ ತುಂಬಿತ್ತು.

    ವಾರದ ಹಿಂದಷ್ಟೇ ಎಂದೆಂದಿಗೂ ನಿಮಗೆ ಚಿರರುಣಿ ಎಂದಿದ್ದ ಸುಶಾಂತ್ ಹೀಗೇಗೆ ಮಾಡಿಕೊಂಡರು?ವಾರದ ಹಿಂದಷ್ಟೇ ಎಂದೆಂದಿಗೂ ನಿಮಗೆ ಚಿರರುಣಿ ಎಂದಿದ್ದ ಸುಶಾಂತ್ ಹೀಗೇಗೆ ಮಾಡಿಕೊಂಡರು?

    ಆತ್ಮಹತ್ಯೆ ಆಯ್ಕೆಯಲ್ಲ ಎಂದಿದ್ದರು

    ಆತ್ಮಹತ್ಯೆ ಆಯ್ಕೆಯಲ್ಲ ಎಂದಿದ್ದರು

    ಆದರೆ ಪರಿಹಾರ ಕಂಡುಕೊಳ್ಳಲು ಹೋರಾಟವನ್ನೇ ಆಯ್ದುಕೊಂಡೆ, ಆತ್ಮಹತ್ಯೆ ಎಂದಿಗೂ ಆಯ್ಕೆಯಾಗಿರಲಿಲ್ಲ ಎಂಬ ಸಂಭಾಷಣೆಯನ್ನು ಹೇಳುವ ಮೂಲಕ ಸಂದೇಶ ನೀಡಿದ್ದ ಸುಶಾಂತ್ ಸಿಂಗ್ ಅವರೇ ಒಂಬತ್ತು ತಿಂಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದು ವಿಪರ್ಯಾಸ.

    English summary
    Sushant Singh Rajput starring Chhichhore which was released last year had a strong message against suicide.
    Sunday, June 14, 2020, 20:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X