For Quick Alerts
  ALLOW NOTIFICATIONS  
  For Daily Alerts

  ಸಾಯುವ ನಾಲ್ಕು ದಿನಗಳ ಮುಂಚೆಯಷ್ಟೇ ಅಕ್ಕನಿಗೆ ಹೀಗೆ ಸಂದೇಶ ಕಳುಹಿಸಿದ್ದರು ಸುಶಾಂತ್

  |

  ಕಳೆದ ತಿಂಗಳು ಸಾವಿಗೆ ಶರಣಾದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾದ ಚರ್ಚೆ ಮತ್ತಷ್ಟು ತೀವ್ರವಾಗಿದೆ. ಸುಶಾಂತ್ ಮೃತಪಟ್ಟ ಬಳಿಕ ಅವರ ಕುಟುಂಬ ಅಷ್ಟಾಗಿ ಹೊರ ಜಗತ್ತಿನೊಂದಿಗೆ ಸಂಪರ್ಕ ಹೊಂದಿಲ್ಲ. ಆದರೆ ಸುಶಾಂತ್ ಜತೆ ಹೆಚ್ಚು ಬಾಂಧವ್ಯ ಹೊಂದಿದ್ದ ಅವರ ನಾಲ್ವರು ಸಹೋದರಿಯಲ್ಲಿ ಒಬ್ಬರಾದ ಶ್ವೇತಾ ಸಿಂಗ್ ಕೃತಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸುಶಾಂತ್ ನೆನಪನ್ನು ಹಂಚಿಕೊಳ್ಳುತ್ತಿರುತ್ತಾರೆ.

  KGF 2 : 29ಕ್ಕೆ ರಿಲೀಸ್ ಆಗಲಿದೆ KGF 2 ಭಯಂಕರ ಅಪ್ಡೇಟ್ | Yash | PrashanthNeel | Filmibeat Kannada

  ಸುಶಾಂತ್ ಸಿಂಗ್ ರಜಪೂತ್ ಅವರಿಗಿದ್ದ ಮಾನಸಿಕ ಸಮಸ್ಯೆಗಳ ಕುರಿತು ಅವರ ಕುಟುಂಬಕ್ಕೆ ಸಂಪೂರ್ಣ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಸಾಯುವ ಮುನ್ನ ಕೇವಲ ನಾಲ್ಕು ದಿನಗಳ ಮುನ್ನ ಸುಶಾಂತ್ ಮತ್ತು ಶ್ವೇತಾ ವಾಟ್ಸಾಪ್‌ನಲ್ಲಿ ಚಾಟಿಂಗ್ ನಡೆಸಿದ್ದರು. ಇದರ ಒಂದು ಭಾಗವನ್ನು ಶ್ವೇತಾ ಹಂಚಿಕೊಂಡಿದ್ದಾರೆ. ಸುಶಾಂತ್ ಜತೆಗಿನ ಕೆಲವು ಅಪರೂಪದ ಫೋಟೊಗಳೊಂದಿಗೆ ಬಾಲ್ಯದ ನೆನಪುಗಳನ್ನು ಅವರು ತೆರೆದಿಟ್ಟಿದ್ದಾರೆ. ಮುಂದೆ ಓದಿ.

  ಕೊನೆಯ ಸಿನಿಮಾದಲ್ಲಿ ಐವರಿಗೆ ಗೌರವ ಸಲ್ಲಿಸಿ ಹೋದ ಸುಶಾಂತ್, ಯಾರವರು?

  ಅಮೆರಿಕಕ್ಕೆ ಆಹ್ವಾನ

  ಅಮೆರಿಕಕ್ಕೆ ಆಹ್ವಾನ

  ಶ್ವೇತಾ ಸಿಂಗ್ ಅಮೆರಿಕದಲ್ಲಿ ನೆಲೆಸಿದ್ದು, ಸುಶಾಂತ್ ಸಾಯುವ ನಾಲ್ಕುದಿನದ ಮುಂಚೆಯಷ್ಟೇ ಅಮೆರಿಕದ ತಮ್ಮ ಮನೆಗೆ ಬರುವಂತೆ ಸುಶಾಂತ್‌ಗೆ ಮನವಿ ಮಾಡಿದ್ದರು ಎನ್ನುವುದು ಅವರು ಶೇರ್ ಮಾಡಿರುವ ವಾಟ್ಸಾಪ್ ಮಾತುಕತೆಯ ಸ್ಕ್ರೀನ್‌ಶಾಟ್‌ನಿಂದ ಬಹಿರಂಗವಾಗಿದೆ.

  ಬರಬೇಕು ಎನಿಸುತ್ತಿದೆ...

  ಬರಬೇಕು ಎನಿಸುತ್ತಿದೆ...

  ಅಕ್ಕನ ಆಹ್ವಾನಕ್ಕೆ ಸುಶಾಂತ್, 'ನನಗೆ ಹಾಗೆ ತುಂಬಾ ಅನಿಸುತ್ತಿದೆ' ಎಂದು ಪ್ರತಿಕ್ರಿಯಿಸಿದ್ದರು. 'ಹಾಗಾದರೆ, ಪ್ಲೀಸ್ ಬಂದು ಬಿಡು. ಒಂದು ತಿಂಗಳ ಮಟ್ಟಿಗೆ ಇಲ್ಲಿರು. ಖುಷಿಯಾಗಿ ಕಾಲ ಕಳೆಯಬಹುದು. ನಿನಗೂ ಆರಾಮೆನಿಸುತ್ತದೆ. ನೀನು ಇಲ್ಲಿಗೆ ಬಂದಿದ್ದನ್ನು ಯಾರಿಗೂ ಹೇಳುವುದಿಲ್ಲ. ನಿನಗೆ ತೊಂದರೆ ಇರುವುದಿಲ್ಲ' ಎಂದು ಅಕ್ಕ ಹೇಳಿದ್ದರು.

  ಹೊಸ ದಾಖಲೆ ಬರೆದ ಸುಶಾಂತ್ ಸಿಂಗ್ ಕೊನೆಯ ಸಿನಿಮಾ

  ಮೊದಲ ಮಗು ಗಂಡಾಗಿತ್ತು

  ಮೊದಲ ಮಗು ಗಂಡಾಗಿತ್ತು

  'ನನ್ನ ಅಪ್ಪ ಮತ್ತು ಅಮ್ಮ ಗಂಡು ಮಗು ಬೇಕು ಎಂದು ಹಂಬಲಿಸುತ್ತಿದ್ದರು ಎಂಬುದಾಗಿ ಕುಟುಂಬದ ಅನೇಕರು ಯಾವಾಗಲೂ ಹೇಳುತ್ತಿದ್ದರು. ಏಕೆಂದರೆ ಅಮ್ಮನಿಗೆ ಮೊದಲು ಹುಟ್ಟಿದ್ದು ಗಂಡುಮಗು. ಆದರೆ ಒಂದೂವರೆ ವರ್ಷವಾಗಿದ್ದಾಗಲೇ ಅವನನ್ನು ಕಳೆದುಕೊಂಡಿದ್ದರು. ನನ್ನ ಮೊದಲ ಸಹೋದರನನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿರಲಿಲ್ಲ'.

  ಹುಟ್ಟಿನಿಂದಲೂ ತೇಜಸ್ಸು

  ಹುಟ್ಟಿನಿಂದಲೂ ತೇಜಸ್ಸು

  ನನ್ನ ಅಪ್ಪ ಮತ್ತು ಅಮ್ಮ ಎರಡನೆಯದು ಗಂಡು ಮಗುವಾಗುತ್ತದೆ ಎಂದು ನಿರೀಕ್ಷಿಸಿದ್ದರು. ಅದಕ್ಕಾಗಿ ಅವರು ಸಂಕಲ್ಪ ಮಾಡಿದ್ದರು. ಅಮ್ಮ ಎರಡು ವರ್ಷ ಭಗವತಿ ತಾಯಿಗೆ ಪ್ರಾರ್ಥನೆ ಮಾಡಿದ್ದರು. ಪೂಜೆ, ಹೋಮ ಹವನ ಹೀಗೆ ಸಾಧ್ಯವಾದುದ್ದನ್ನೆಲ್ಲಾ ಮಾಡಿದ್ದರು. ಆದರೆ ದೀಪಾವಳಿ ದಿನ ನಾನು ಹುಟ್ಟಿದೆ. ನನ್ನನ್ನು ಬಹಳ ಅದೃಷ್ಟಶಾಲಿ ಎಂದು ಅಮ್ಮ ಪರಿಗಣಿಸಿದ್ದರು. ನನ್ನನ್ನು ಲಕ್ಷ್ಮಿ ಎಂದೇ ಕರೆಯುತ್ತಿದ್ದರು. ಅವರು ತಮ್ಮ ಪೂಜೆಗಳನ್ನು ಮುಂದುವರಿಸಿದ್ದರು. ಕೊನೆಗೆ ನನ್ನ ಪುಟ್ಟ ತಮ್ಮ ಜನಿಸಿದ. ಹುಟ್ಟಿನಿಂದಲೂ ಆತನಲ್ಲಿ ವಿಶೇಷ ತೇಜಸ್ಸು ಇತ್ತು. ಸುಂದರ ನಗು ಮತ್ತು ಮಿನುಗುವ ಕಣ್ಣುಗಳ ಮೂಲಕ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತಿದ್ದ.

  ತಮ್ಮನ ಬಗ್ಗೆ ವಿಪರೀತ ಕಾಳಜಿ

  ತಮ್ಮನ ಬಗ್ಗೆ ವಿಪರೀತ ಕಾಳಜಿ

  ಸುಶಾಂತ್ ಹಾಗೂ ತನ್ನನ್ನು ಎಲ್ಲರೂ ಪ್ರೀತಿಯಿಂದ ಗುಡಿಯಾ ಗುಲ್ಷನ್ ಎಂದು ಕರೆಯುತ್ತಿದ್ದರು. ಒಟ್ಟಿಗೆ ಆಡುತ್ತಾ, ಕುಣಿಯುತ್ತಾ, ಓದುತ್ತಾ, ಎಲ್ಲ ಬಗೆಯ ತರಲೆ ತುಂಟಾಟಗಳಲ್ಲಿ ಭಾಗಿಯಾಗಿದ್ದರು. ಒಟ್ಟಿಗೆ ಮಲಗುತ್ತಿದ್ದರು. 'ನಾವಿಬ್ಬರೂ ಎರಡು ಪ್ರತ್ಯೇಕ ಜೀವಿಗಳು ಎಂಬುದನ್ನು ಎಲ್ಲರೂ ಮರೆತೇ ಹೋಗಿದ್ದರು. ಸುಶಾಂತ್ ನನ್ನನ್ನು ಪೀತಿಯಾ ಎಂದು ಕರೆಯುತ್ತಿದ್ದ. ಏಕೆಂದರೆ ಸುಶಾಂತ್ ನಮ್ಮ ಬದುಕಿನೊಳಗೆ ಬರಲು ನನ್ನ ಜನನವೇ ಕಾರಣ ಎನ್ನುವುದು ಅವರ ನಂಬಿಕೆ. ನನ್ನ ಪುಟ್ಟ ತಮ್ಮನ ಬಗ್ಗೆ ನಾನು ಬಹಳ ಕಾಳಜಿ ಹೊಂದಿದ್ದೆ. ಏಕೆಂದರೆ ಅವನನ್ನು ಬೆಳೆಸುವುದು ನನ್ನ ಜವಾಬ್ದಾರಿ ಎಂದು ಭಾವಿಸಿದ್ದೆ' ಎಂಬುದಾಗಿ ವಿವರಿಸಿದ್ದಾರೆ.

  ಅಕ್ಕನನ್ನು ಹುಡುಕಿಕೊಂಡು ಶಾಲೆಗೆ ಹೋಗಿದ್ದ ಸುಶಾಂತ್

  ಅಕ್ಕನನ್ನು ಹುಡುಕಿಕೊಂಡು ಶಾಲೆಗೆ ಹೋಗಿದ್ದ ಸುಶಾಂತ್

  ಒಮ್ಮೆ ಮನೆಯಲ್ಲಿ ಇರಲು ಒಂಟಿತನ ಕಾಡುತ್ತಿದೆ ಮತ್ತು ಬೇಸರವಾಗುತ್ತಿದೆ ಎಂದು ನಾಲ್ಕೈದು ವರ್ಷದ ಪೋರ ಸುಶಾಂತ್ ಅರ್ಧ ಕಿ.ಮೀ. ನಡೆದು ಅಕ್ಕನ ಶಾಲೆಗೆ ಹೋಗಿದ್ದನಂತೆ. ಶಾಲೆಯಲ್ಲಿ ಮೊದಲ ದಿನ ತನ್ನ ಹಾಗೂ ಸ್ನೇಹಿತೆಯ ನಡುವೆ ಕ್ಲಾಸ್ ರೂಮ್‌ನಲ್ಲಿ ತಮ್ಮನನ್ನು ಅಡಗಿಸಿ ಕೂರಿಸಿಕೊಂಡಿದ್ದೆ ಎಂದು ಶ್ವೇತಾ ಹೇಳಿಕೊಂಡಿದ್ದಾರೆ.

  ಬಿಹಾರದಲ್ಲಿ ಸುಶಾಂತ್ ನೆಚ್ಚಿನ ಫಡ್ಜ್

  ಬಿಹಾರದಲ್ಲಿ ಸುಶಾಂತ್ ನೆಚ್ಚಿನ ಫಡ್ಜ್

  ಸುಶಾಂತ್ ಸಿಂಗ್ ಸಾವಿನ ಬಳಿಕ ಅವರ ಮುದ್ದಿನ ನಾಯಿ ಫಡ್ಜ್ ಕುರಿತು ಅನೇಕ ಕಥೆಗಳು ಹುಟ್ಟಿಕೊಂಡಿದ್ದವು. ಸುಶಾಂತ್ ಮತ್ತು ಫಡ್ಜ್ ಆಡುವ ಅನೇಕ ಫೋಟೊ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು. ಅನ್ನಾಹಾರ ತ್ಯಜಿಸಿ ಫಡ್ಜ್ ಸತ್ತು ಹೋಗಿದೆ ಎಂದೆಲ್ಲ ಹೇಳಲಾಗಿತ್ತು. ಆದರೆ ಫಡ್ಜ್ ಈಗ ಬಿಹಾರದಲ್ಲಿ ಸುಶಾಂತ್ ತಂದೆಯೊಂದಿಗೆ ಇದೆ. ಇದರ ಫೋಟೊವನ್ನು ಶ್ವೇತಾ ಇತ್ತೀಚೆಗೆ ಶೇರ್ ಮಾಡಿದ್ದರು.

  ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಮಹೇಶ್ ಭಟ್‌ ವಿಚಾರಣೆ

  English summary
  Sushant Singh Rajput's sister Shweta Singh Kriti has shared the screen shot of Whatsapp chat with the actor four days before his death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X