Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುಶಾಂತ್ ಸಿಂಗ್ ಕೊಲೆ, ದಿಶಾ ಮೇಲೆ ಅತ್ಯಾಚಾರ: ಕೇಂದ್ರ ಸಚಿವ ಸ್ಫೋಟಕ ಹೇಳಿಕೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಅರೆಸ್ಟ್ ಆಗಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಆಘಾತಕಾರಿ ವಿಚಾರ ಬಹಿರಂಗಪಡಿಸಿದ್ದಾರೆ. 'ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ, ಅದು ಕೊಲೆ' ಎಂದು ಹೇಳಿದ್ದರು.
ಕೇಂದ್ರ ಸಚಿವ ರಾಣೆ ಅವರ ಈ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. ಜಾಮೀನು ಪಡೆದು ಹೊರಬಂದ ನಂತರ ಶಿವಸೇನೆ ಸರ್ಕಾರದ ವಿರುದ್ಧ ಮಾತನಾಡಿದ ನಾರಾಯಣ ರಾಣೆ, ಮುಂಬೈನಲ್ಲಿ ನಡೆದ ಕೆಲವು ಅನುಮಾನಸ್ಪಾದ ಸಾವುಗಳ ಬಗ್ಗೆ ಗಂಭೀರ ಅರೋಪಗಳನ್ನು ಮಾಡಿದ್ದಾರೆ.
ಕೇಂದ್ರ ಸಚಿವ ನಾರಾಯಣ್ ರಾಣೆ ವಶಕ್ಕೆ ಪಡೆದ ಮಹಾರಾಷ್ಟ್ರ ಪೊಲೀಸರು
''ನಾನು ಯಾವುದೇ ತಪ್ಪು ಮಾಡಿಲ್ಲ. ಅವರು (ಶಿವಸೇನಾ) ಅಧಿಕಾರವನ್ನು ಎಂಜಾಯ್ ಮಾಡ್ತಿದ್ದಾರೆ. ಕೋವಿಡ್‌ನಲ್ಲಿ ಮಹಾರಾಷ್ಟ್ರ ನಂ 1. ಕೋವಿಡ್ ಬಿಕ್ಕಟ್ಟಿನಲ್ಲಿ ಯಾವ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ. ಸುಶಾಂತ್ ಸಿಂಗ್ ಅವರದ್ದು ಕೊಲೆ, ದಿಶಾ ಸಾಲಿಯಾನ್ ಅವರನ್ನು ಅತ್ಯಾಚಾರ ಮಾಡಿ ಸಾಯಿಸಲಾಯಿತು. ತಪ್ಪಿತಸ್ಥರು ಆರಾಮಾಗಿ ಸುತ್ತಾಡಿಕೊಂಡಿದ್ದಾರೆ'' ಎಂದು ಹೇಳಿರುವುದಾಗಿ ಸಿಎನ್‌ಎನ್ ನ್ಯೂಸ್ 18 ವರದಿ ಮಾಡಿದೆ. ಮುಂದೆ ಓದಿ...

ಸುಶಾಂತ್ ಕೊಲೆ, ದಿಶಾ ಮೇಲೆ ಅತ್ಯಾಚಾರ
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ನಾರಾಯಣ ರಾಣೆ, ಟಿಕ್‌ಟಾಕ್ ಸ್ಟಾರ್ ಪೂಜಾ ಚೌಹಾಣ್ ಮತ್ತು ಟ್ಯಾಲೆಂಟ್ ಮ್ಯಾನೇಜರ್ ಅವರ ಶಂಕಸ್ಪಾದ ಸಾವಿಗೆ ಕಾರಣಾರಾರು? ಎಂದು ಪ್ರಶ್ನಿಸಿದ್ದಾರೆ. 'ದಿಶಾ ಸಾಲಿಯಾನ್ ಸತ್ತಿದ್ದು ಹೇಗೆ, ಅಪರಾಧ ಕೃತ್ಯ ನಡೆದಾಗ ಆ ಸ್ಥಳದಲ್ಲಿ ಯಾರಿದ್ದರು, ಯಾವ ಸಚಿವ ಇದ್ದರು, ಪೊಲೀಸರು ಏಕೆ ಕಾರಣ ಬಹಿರಂಗಪಡಿಸಿಲ್ಲ, ಪೂಜಾ ಚೌವಾಣ್‌ಗೆ ಏನಾಯಿತು. ಈ ಎರಡು ಸಾವಿಗೆ ಕಾರಣರಾದವರನ್ನು ಬಂಧಿಸುವವರಿಗೂ ನಾನು ಸುಮ್ಮನಿರುವುದಿಲ್ಲ'' ಎಂದು ನಾರಾಯಣ ರಾಣೆ ಎಚ್ಚರಿಸಿದರು. 'ಅಗತ್ಯವಿದ್ದರೆ ನಾನು ನ್ಯಾಯಾಲಯಕ್ಕೆ ಹೋಗುತ್ತೇನೆ, ನೋಡೋಣ ಅವರನ್ನು ಯಾರು ರಕ್ಷಿಸುತ್ತಾರೆ' ಎಂದು ಕೇಂದ್ರ ಸಚಿವರು ಸವಾಲ್ ಹಾಕಿದರು.

ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್
2020, ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮುಂಬೈ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಇದು ಆತ್ಮಹತ್ಯೆ ಎಂದು ಹೇಳಲಾಯಿತು. ಆದರೆ, ಸುಶಾಂತ್ ಕುಟುಂಬದವರು ಇದು ಆತ್ಮಹತ್ಯೆಯಲ್ಲ, ಇದು ಕೊಲೆ ಎಂದು ದೂರಿದರು. ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಬಿಹಾರ ಸರ್ಕಾರದ ಸಲಹೆಯಂತೆ ಈ ಕೇಸ್ ಸಿಬಿಐಗೆ ವರ್ಗಾವಣೆ ಆಗಿ ತನಿಖೆ ನಡೆಯುತ್ತಿದೆ. ಸಿಬಿಐ ತನಿಖೆ ಬಹುತೇಕ ಮುಕ್ತಾಯವಾಗಿದ್ದು, ಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಬೇಕಾಗಿದೆ. ಇನ್ನು ಸಿಬಿಐ ವರದಿಯಲ್ಲೂ ಇದು ಕೊಲೆಯಲ್ಲ ಎಂದು ವರದಿ ಬಂದಿರುವುದಾಗಿ ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿದ್ದವು.
ನಾನು ಶಿವಸೇನೆ ನಾಯಕತ್ವಕ್ಕೆ ಬೆದರುವುದಿಲ್ಲ ಎಂದಿದ್ದೇಕೆ ಸಚಿವ ನಾರಾಯಣ್ ರಾಣೆ?

ದಿಶಾ ಸಾವಿನ ಸುತ್ತವೂ ಅನುಮಾನ
ಸುಶಾಂತ್ ಸಿಂಗ್ ಸಾಯುವುದಕ್ಕು ಒಂದು ವಾರದ (ಜೂನ್ 8, 2020) ಮುಂಚೆ ಟ್ಯಾಲೆಂಜ್ ಮ್ಯಾನೇಜರ್ ದಿಶಾ ಸಾಲಿಯಾನ್ ಕಟ್ಟಡದಿಂದ ಬಿದ್ದ ಸಾವನ್ನಪ್ಪಿದ್ದರು. ದಿಶಾ ಸಾಲಿಯಾನ್ ನಿಧನಕ್ಕೂ ಮುಂಚೆ ಕೆಲವು ತಿಂಗಳ ಹಿಂದೆ ಸುಶಾಂತ್ ಸಿಂಗ್ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಹಾಗಾಗಿ, ಇವರಿಬ್ಬರ ಸಾವಿಗೂ ಸಂಬಂಧವಿದ್ಯಾ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಇನ್ನು ಟಿಕ್‌ಟಾಕ್ ಸ್ಟಾರ್ ಪೂಜಾ ಚೌವಾಣ್ ಪುಣೆಯ ಹೆವೆನ್ ಪಾರ್ಕ್ ಕಟ್ಟಡದಿಂದ ಬಿದ್ದ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾವಿನ ಸುತ್ತವೂ ಅನುಮಾನ ಬೆಳೆದುಕೊಂಡಿದೆ.

ಸಿಎಂ ವಿರುದ್ಧ ಹೇಳಿಕೆ, ಅರೆಸ್ಟ್ ಆಗಿದ್ದ ರಾಣೆ
ಸ್ವಾತಂತ್ರ್ಯ ಬಂದ ವರ್ಷವನ್ನು ಸಿಎಂ ಉದ್ಧವ್ ಠಾಕ್ರೆ ತಪ್ಪಾಗಿ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಾರಾಯಣ ರಾಣೆ, 'ನಾನು ಅಲ್ಲಿ ಇದ್ದಿದ್ದರೆ ಠಾಕ್ರೆ ಕಪಾಳೆಕ್ಕೆ ಹೊಡೆಯುತ್ತಿದ್ದೆ' ಎಂದಿದ್ದರು. ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದರು ಎಂಬ ಆರೋಪದಲ್ಲಿ ರತ್ನಗಿರಿ ಪೊಲೀಸರು ರಾಣೆ ಅವರನ್ನು ಅರೆಸ್ಟ್ ಮಾಡಿದ್ದರು. ನಂತರ ಜಾಮೀನು ಪಡೆದು ಬಿಡುಗಡೆಯಾದರು.