For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಮಾಜಿ ನೌಕರಿಗೆ ಸಹೋದರಿ ಬೆದರಿಕೆ: ವಿಡಿಯೋ ವೈರಲ್

  |

  ಸುಶಾಂತ್ ಸಿಂಗ್ ಪ್ರಕರಣ ದಿನೇ ದಿನೇ ಗೋಜಲಾಗುತ್ತಾ ಸಾಗುತ್ತಿದೆ. ಯಾರದು ತಪ್ಪು, ಯಾರದು ಸರಿ ಎಂದು ಲಭ್ಯವಿರುವ ಮಾಹಿತಿಗಳಿಂದ ನಿರ್ಧರಿಸುವುದು ಕಠಿಣವಾಗಿರುವ ಪರಿಸ್ಥಿತಿಯಲ್ಲಿ ಪ್ರಕರಣ ನಿಂತಿದೆ.

  ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ವಿರುದ್ಧ ಸಾಕ್ಷ್ಯಗಳು ಹೊರಬಿದ್ದರೆ, ಮತ್ತೊಮ್ಮೆ ಸುಶಾಂತ್ ಕುಟುಂಬದವರದ್ದೇ ತಪ್ಪು ಎಂದು ಸೂಚಿಸುವ ವಿಡಿಯೋಗಳು, ಹೇಳಿಕೆಗಳು ಹೊರಬೀಳುತ್ತಿವೆ. ಪ್ರಕರಣವನ್ನು ದೂರ ನಿಂತು ನೋಡುತ್ತಿರುವವರಿಗೆ ಗೊಂದಲ ಹೆಚ್ಚಾಗುತ್ತಿದೆ.

  ಮಾಜಿ ಪ್ರೇಯಸಿ ಅಂಕಿತಾ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ EMI ಕಟ್ಟುತ್ತಿದ್ರಾ ಸುಶಾಂತ್ ಸಿಂಗ್?

  ಸುಶಾಂತ್ ಸಿಂಗ್ ಪ್ರಕರಣದಲ್ಲಿ ಹೆಚ್ಚು ಸಕ್ರಿಯರಾಗಿರುವ ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕಾ ಅವರ ಹಳೆಯ ವಿಡಿಯೋ ಒಂದು ಇದೀಗ ವೈರಲ್ ಆಗಿದ್ದು. ಸುಶಾಂತ್ ಸಿಬ್ಬಂದಿಗೆ ಪ್ರಿಯಾಂಕಾ ಹಾಗೂ ಆಕೆಯ ಪತಿ ಬೆದರಿಕೆ ಹಾಕುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದೆ.

  ಹಣ ವರ್ಗಾವಣೆ ವಿಷಯದ ಬಗ್ಗೆ ಜಗಳ

  ಹಣ ವರ್ಗಾವಣೆ ವಿಷಯದ ಬಗ್ಗೆ ಜಗಳ

  ವಿಡಿಯೋದಲ್ಲಿ ಕಾಣುತ್ತಿರುವಂತೆ ಪ್ರಿಯಾಂಕಾ ಹಾಗೂ ಆಕೆಯ ಪತಿ ಮದ್ಯ ಕುಡಿಯುತ್ತಾ ಸುಶಾಂತ್‌ ನ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ರಜತ್ ಎಂಬುವರನ್ನು ತೆಗಳುತ್ತಿದ್ದಾರೆ. ದೊಡ್ಡ ಮೊತ್ತದ ಹಣವನ್ನು ಪಂಕಜ್ ಎಂಬ ವ್ಯಕ್ತಿಗೆ ವರ್ಗಾವಣೆ ಮಾಡಿದ್ದರ ಬಗ್ಗೆ ಆ ಚರ್ಚೆ ನಡೆದಿದೆ.

  ಸುಶಾಂತ್ ಡೈರಿ ಬಿಚ್ಚಿಟ್ಟ ಸತ್ಯ: 2020ರಲ್ಲಿ ಅಭಿಮಾನಿಗಳಿಗೆ ಕಾದಿತ್ತು ಸರ್ಪ್ರೈಸ್

  'ಪೊಲೀಸರನ್ನು ಕರೆಸಿ ಒಳಗೆ ಹಾಕಿಸುತ್ತೇನೆ'

  'ಪೊಲೀಸರನ್ನು ಕರೆಸಿ ಒಳಗೆ ಹಾಕಿಸುತ್ತೇನೆ'

  ವಿಡಿಯೋದಲ್ಲಿ ಇರುವಂತೆ, ಪ್ರಿಯಾಂಕಾ, ರಜತ್‌ ವಿರುದ್ಧ ಏರು ದನಿಯಲ್ಲಿ ಮಾತನಾಡುತ್ತಿದ್ದು, 'ದೊಡ್ಡ ಬಾಲಿವುಡ್ ಸ್ಟಾರ್ ಮನೆಯಲ್ಲಿ ನೀನಿದ್ದೀಯ ಎಂಬುದನ್ನು ಮರೆಯಬೇಡ', 'ಪೊಲೀಸರನ್ನು ಕರೆಸಿ ಒಳಗೆ ಹಾಕಿಸುತ್ತೇನೆ' ಎಂದು ಬೆದರಿಸುತ್ತಿದ್ದಾರೆ.

  2019 ರಲ್ಲಿ ಚಿತ್ರೀಕರಿಸಿರುವ ವಿಡಿಯೋ

  2019 ರಲ್ಲಿ ಚಿತ್ರೀಕರಿಸಿರುವ ವಿಡಿಯೋ

  ಪ್ರಿಯಾಂಕಾ ಪತಿ ಸಹ ನೌಕರ ರಜತ್ ವಿರುದ್ಧ ಏರು ದನಿಯಲ್ಲಿ ಮಾತನಾಡುತ್ತಿದ್ದು, 'ಈ ಕೃತ್ಯದ (ಹಣ ವರ್ಗಾವಣೆ) ಹಿಂದಿರುವ ವ್ಯಕ್ತಿ ಯಾರೆಂಬುದು ಗೊತ್ತಾಗಬೇಕು ಎಂದು ಕೇಳುತ್ತಿದ್ದಾರೆ. ಈ ವಿಡಿಯೋವನ್ನು 2019 ರ ಏಪ್ರಿಲ್‌ನಲ್ಲಿ ತೆಗೆಯಲಾಗಿದೆ ಎನ್ನಲಾಗಿದೆ.

  ಸುಶಾಂತ್ ಸಿಂಗ್ ಪ್ರಕರಣಕ್ಕೆ ತಿರುವು: 'ಸ್ಟನ್ ಗನ್' ಬಳಸಿ ಕೊಲೆ ಮಾಡಲಾಗಿದ್ಯಾ?

  ರಜತ್ ಅನ್ನು ಕೆಲಸದಿಂದ ತೆಗೆದಿದ್ದ ಪ್ರಿಯಾಂಕಾ

  ರಜತ್ ಅನ್ನು ಕೆಲಸದಿಂದ ತೆಗೆದಿದ್ದ ಪ್ರಿಯಾಂಕಾ

  ಸುಶಾಂತ್‌ನ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ರಜತ್ ಅನ್ನು ಪ್ರಿಯಾಂಕಾ ಕೆಲಸದಿಂದ ವಜಾ ಮಾಡಿದರು. ಆ ಸ್ಥಾನಕ್ಕೆ ಸ್ಯಾಮ್ಯುಲ್ ಮಿರಾಂಡಾ ಅವರನ್ನು ನೇಮಿಸಿಕೊಳ್ಳಲಾಯಿತು. ಇದೀಗ ಸುಶಾಂತ್ ಸಾವು ಪ್ರಕರಣದಲ್ಲಿ ಸ್ಯಾಮ್ಯುಲ್ ಮೇಲೂ ಸುಶಾಂತ್ ತಂದೆ ದೂರು ನೀಡಿದ್ದಾರೆ.

  ಸುಶಾಂತ್ ಸಹೋದರಿ ಮೇಲೆ ರಿಯಾ ದೂರು

  ಸುಶಾಂತ್ ಸಹೋದರಿ ಮೇಲೆ ರಿಯಾ ದೂರು

  ಸುಶಾಂತ್ ಸಹೋದರಿ ಪ್ರಿಯಾಂಕಾ ವಿರುದ್ಧ ರಿಯಾ ಗುರುತರ ಆರೋಪ ಮಾಡಿದ್ದು, ನನ್ನ ವಿರುದ್ಧ ಪ್ರಿಯಾಂಕಾ ದೌರ್ಜನ್ಯ ಮಾಡಿದ್ದರು. ಲೈಂಗಿಕ ದೌರ್ಜನ್ಯ ಸಹ ಎಸಗಲು ಯತ್ನಿಸಿದ್ದರು ಎಂದು ಹೇಳಿದ್ದಾರೆ. ರಿಯಾಳ ಸುಳ್ಳು, ಪ್ರಕರಣದ ದಿಕ್ಕು ತಪ್ಪಿಸುವ ಯತ್ನವೆಂದು ಸುಶಾಂತ್ ತಂದೆ ಪರ ವಕೀಲರು ಹೇಳಿದ್ದಾರೆ.

  ಆತ್ಮಹತ್ಯೆನಾ ಅಥವಾ ಕೊಲೆನಾ? ಅನುಮಾನದಲ್ಲೇ ಅಂತ್ಯವಾಯ್ತು ತಾರೆಯರ ಸಾವು

  English summary
  Late actor Sushant Singh's sister Priyanka's old video getting viral. in that video she is threatening Sushant's ex employee.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X