twitter
    For Quick Alerts
    ALLOW NOTIFICATIONS  
    For Daily Alerts

    ಆ ರಾತ್ರಿ ನಡೆದಿದ್ದೇನು? ಬಂಧನದ ಬಗ್ಗೆ ಹೃತಿಕ್ ರೋಷನ್ ಮಾಜಿ ಪತ್ನಿ ಸ್ಪಷ್ಟನೆ

    |

    ನಟ ಹೃತಿಕ್ ರೋಷನ್ ಪತ್ನಿ ಸೂಸೆನ್ ಖಾನ್, ಕ್ರಿಕೆಟಿಗ ಸುರೇಶ್ ರೈನಾ, ಗಾಯಕ ಗುರು ರಾಂಧವ್ ಸೇರಿ ಇನ್ನೂ ಕೆಲವರನ್ನು ಡಿಸೆಂಬರ್ 21 ರ ತಡ ರಾತ್ರಿ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

    Recommended Video

    02:30 ಕ್ಕೆ ಪೊಲೀಸರು ಬಂದು ಹೀಗೆ ಮಾಡಿದ್ರು ಅಂದ Hrithik Roshan ಮಾಜಿ ಪತ್ನಿ | Filmibeat Kannada

    ಕೊರೊನಾ ನಿಯಮಗಳನ್ನು ಉಲ್ಲಂಘಿಸಿ, ರಾತ್ರಿ ಕರ್ಪ್ಯೂ ಮೀರಿ ತಡ ರಾತ್ರಿ ವರೆಗೆ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಇವರನ್ನು ಬಂಧಿಸಿ ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಅಂದು ರಾತ್ರಿ ನಡೆದಿದ್ದ ಏನು ಎಂಬುದರ ಬಗ್ಗೆ ಹೃತಿಕ್ ರೋಷನ್ ಮಾಜಿ ಪತ್ನಿ ಸೊಸೆನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

    ಹೃತಿಕ್ ರೋಷನ್ ಮಾಜಿ ಪತ್ನಿ ಸುಸೈನ್ ಖಾನ್, ಗಾಯಕ ಗುರು ರಾಂಧವ ಬಂಧನಹೃತಿಕ್ ರೋಷನ್ ಮಾಜಿ ಪತ್ನಿ ಸುಸೈನ್ ಖಾನ್, ಗಾಯಕ ಗುರು ರಾಂಧವ ಬಂಧನ

    ಆ ದಿನ ರಾತ್ರಿ, ಆಪ್ತ ಗೆಳತಿಯ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದೆವು, ನಂತರ ಅಲ್ಲಿಂದ ಕೆಲವರು ಡ್ರಾಗನ್ ಫ್ಲೈ ಕ್ಲಬ್‌ ಗೆ ಹೋದೆವು, 2:30 ಸುಮಾರಿಗೆ ಕೆಲವು ಅಧಿಕಾರಿಗಳು ಡ್ರಾಗನ್ ಫ್ಲೈ ಕ್ಲಬ್‌ಗೆ ಬಂದರು. ಕ್ಲಬ್‌ನ ಅಧಿಕಾರಿಗಳು, ವ್ಯವಸ್ಥಾಪಕರೊಂದಿಗೆ ಅವರು ಮಾತನಾಡಿದರು.

    ಮೂರು ಗಂಟೆ ಅಲ್ಲೇ ತಡೆದು ನಿಲ್ಲಿಸಿದ್ದರು: ಸೂಸೆನ್ ಖಾನ್

    ಮೂರು ಗಂಟೆ ಅಲ್ಲೇ ತಡೆದು ನಿಲ್ಲಿಸಿದ್ದರು: ಸೂಸೆನ್ ಖಾನ್

    ಕ್ಲಬ್‌ನಲ್ಲಿದ್ದ ಅತಿಥಿಗಳನ್ನು ಕಾಯುವಂತೆ ಹೇಳಿದರು, ನಾವೆಲ್ಲರೂ ಅಲ್ಲಿಯೇ ಮೂರು ಗಂಟೆ ಹೊತ್ತು ಕಾಯ್ದು ಕೂತಿದ್ದೆವು, ನಂತರ 6 ಗಂಟೆ ಸುಮಾರಿಗೆ ನಮ್ಮನ್ನು ಅಲ್ಲಿಂದ ಹೊರಡುವಂತೆ ತಿಳಿಸಿದರು ಎಂದು ಸೂಸೆನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ಬಂಧಿಸಲಾಗಿತ್ತು ಎಂಬ ವರದಿ ಸುಳ್ಳು: ಸೂಸೆನ್ ಖಾನ್

    ಬಂಧಿಸಲಾಗಿತ್ತು ಎಂಬ ವರದಿ ಸುಳ್ಳು: ಸೂಸೆನ್ ಖಾನ್

    ಆದರೆ ಕೆಲವು ಮಾಧ್ಯಮಗಳಲ್ಲಿ ನಮ್ಮನ್ನು ಬಂಧಿಸಲಾಗಿತ್ತು, ಠಾಣೆಗೆ ಕರೆದೊಯ್ಯಲಾಗಿತ್ತು ಎಂಬ ವರದಿಗಳು ಪ್ರಕಟವಾಗಿದ್ದು ಅವೆಲ್ಲವೂ ಸುಳ್ಳು ಮತ್ತು ಜವಾಬ್ದಾರಿ ಹೀನ ವರದಿಗಳಾಗಿವೆ ಎಂದಿದ್ದಾರೆ ಸೂಸೆನ್ ಖಾನ್.

    ನೈಟ್ ಕ್ಲಬ್‌ ನಲ್ಲಿ ಹಾಜರಿದ್ದ ಸುರೇಶ್ ರೈನಾ

    ನೈಟ್ ಕ್ಲಬ್‌ ನಲ್ಲಿ ಹಾಜರಿದ್ದ ಸುರೇಶ್ ರೈನಾ

    ನೈಟ್ ಕ್ಲಬ್‌ ನಲ್ಲಿ ಹಾಜರಿದ್ದ ಸುರೇಶ್ ರೈನಾ ಅವರನ್ನು ಸಹ ಪೊಲೀಸರು ತಡೆದಿದ್ದರು. ಈ ಬಗ್ಗೆ ಪತ್ರಿಕಾ ಹೇಳಿಕೆ ಪ್ರಕಟಿಸಿರುವ ಸುರೇಶ್ ರೈನಾ, ಚಿತ್ರೀಕರಣಕ್ಕೆ ಮುಂಬೈಗೆ ಬಂದಿದ್ದೆ, ದೆಹಲಿಗೆ ಫ್ಲೈಟ್ ಹತ್ತುವ ಮೊದಲು ಗೆಳೆಯನೊಂದಿಗೆ ಕ್ಲಬ್‌ಗೆ ಹೋಗಿದ್ದೆ, ಮುಂಬೈನ ರಾತ್ರಿ ಕರ್ಪ್ಯೂ ನ ಸಮಯ, ನಿಯಮಗಳ ಬಗ್ಗೆ ನನಗೆ ಅರಿವಿರಲಿಲ್ಲ ಎಂದಿದ್ದಾರೆ.

    ಡ್ರಾಗನ್ ಫ್ಲೈ ಕ್ಲಬ್‌ ಮೇಲೆ ದಾಳಿ

    ಡ್ರಾಗನ್ ಫ್ಲೈ ಕ್ಲಬ್‌ ಮೇಲೆ ದಾಳಿ

    ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಡ್ರಾಗನ್ ಫ್ಲೈ ಎಂಬ ಕ್ಲಬ್‌ ಮೇಲೆ ನಿನ್ನೆ ರಾತ್ರಿ ಪೊಲೀಸರು ದಾಳಿ ಮಾಡಿದ್ದರು. ಕೊರೊನಾ ನಿಯಮ ಉಲ್ಲಂಘನೆ ಹಾಗೂ ರಾತ್ರಿ ಕರ್ಪ್ಯೂ ಉಲ್ಲಂಘನೆ ಅಡಿಯಲ್ಲಿ ಕ್ಲಬ್‌ ಮೇಲೆ ಪ್ರಕರಣ ದಾಖಲಿಸಲಾಗಿದೆ.

    English summary
    Sussanne Khan gave clarification about her arrest for violating corona rules. She said reports were false and irresponsible.
    Wednesday, December 30, 2020, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X