»   » ಪ್ರಭಾಸ್ ಜೊತೆ ಹಿಂದಿ ಚಿತ್ರದಲ್ಲಿ ರೊಮ್ಯಾನ್ಸ್ ಮಾಡ್ತಾರಂತೆ ತಮನ್ನಾ!

ಪ್ರಭಾಸ್ ಜೊತೆ ಹಿಂದಿ ಚಿತ್ರದಲ್ಲಿ ರೊಮ್ಯಾನ್ಸ್ ಮಾಡ್ತಾರಂತೆ ತಮನ್ನಾ!

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದ ಯಶಸ್ಸಿನ ನಂತರ ಕೇವಲ ದಕ್ಷಿಣ ಭಾರತದ ನಟಿಯರು ಮಾತ್ರವಲ್ಲದೇ ಬಾಲಿವುಡ್ ನಟಿಯರು ಸಹ ಟಾಲಿವುಡ್ ನಟ ಪ್ರಭಾಸ್ ಜೊತೆ ಅಭಿನಯಿಸಲು ಆಸಕ್ತಿ ತೋರುತ್ತಿದ್ದಾರೆ.

'ಸಾಹೋ' ನಂತರ ಪ್ರಭುದೇವ ಚಿತ್ರದಲ್ಲಿ 'ಬಾಹುಬಲಿ' ಪ್ರಭಾಸ್?

ನಟ ಪ್ರಭಾಸ್ ಸದ್ಯದಲ್ಲಿ 'ಸಾಹೋ' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಅವರು ಸ್ವತಃ ಬಾಲಿವುಡ್ ನಲ್ಲೂ ತಮ್ಮನ್ನು ಎಸ್ಟಬ್ಲಿಸ್ ಮಾಡಿಕೊಳ್ಳಲು ಆಸಕ್ತಿ ಹೊಂದಿದ್ದು, ಅದಕ್ಕಾಗಿ ಹಿಂದಿಯನ್ನು ಕಲಿಯುತ್ತಿದ್ದಾರಂತೆ. ಆದರೆ ಪ್ರಭಾಸ್ ಅಭಿನಯಿಸಲಿರುವ ಹಿಂದಿಯ ಚಿತ್ರದ ಬಗ್ಗೆ ಇನ್ನೂ ಸಹ ಕೇವಲ ರೂಮರ್ಸ್ ಹರಿದಾಡುತ್ತಿದ್ದು, ಯಾವ ಸಿನಿಮಾ ಎಂಬ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿಲ್ಲ. ಹೀಗಿರುವಾಗಲೇ ತಮನ್ನಾ ಭಾಟಿಯಾ ಪ್ರಭಾಸ್ ರ ಹಿಂದಿ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರೆ. ಮುಂದೆ ಓದಿರಿ..

ಪ್ರಭಾಸ್ ಬಗ್ಗೆ ತಮನ್ನಾ ಹೇಳಿದ್ದು..

ಇತ್ತೀಚೆಗೆ ತಮನ್ನಾ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಪ್ರಭಾಸ್ ಜೊತೆ ಮತ್ತೆ ಅಭಿನಯಿಸುವ ಆಸೆಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪ್ರಭಾಸ್ ಕುರಿತು ಮಾತನಾಡಿ, 'ಪ್ರಭಾಸ್ ಅದ್ಭುತ ನಟ ಮತ್ತು ನನಗೆ ಒಬ್ಬ ಗ್ರೇಟ್ ಫ್ರೆಂಡ್' ಎಂದು ಹೇಳಿದ್ದಾರೆ.

ಹಿಂದಿ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿದ ತಮನ್ನಾ

ಪ್ರಭಾಸ್ ಸದ್ಯದಲ್ಲೇ ಒಂದು ಹಿಂದಿ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಸಿನಿ ರಂಗದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿಯೇ ನಟಿ ತಮನ್ನಾ ಭಾಟಿಯಾ ಪ್ರಭಾಸ್ ರವರ ಹಿಂದಿ ಚಿತ್ರದಲ್ಲಿ ವರ್ಕ್ ಮಾಡಲು ಆಸಕ್ತಿ ತೋರಿಸಿದ್ದಾರೆ. ಈ ಬಗ್ಗೆ ಅವರು ಹೇಳಿದ್ದು ಏನೆಂದರೆ...

ಪ್ರಭಾಸ್ ಜೊತೆ ವರ್ಕ್ ಮಾಡುವುದು ನನ್ನ ಭಾಗ್ಯ

'ಪ್ರಭಾಸ್ ಜೊತೆ ವರ್ಕ್ ಮಾಡುವುದು ನನ್ನ ಭಾಗ್ಯ.. ಆದರೆ ಸ್ಕ್ರಿಪ್ಟ್ ಚೆನ್ನಾಗಿದ್ದಲ್ಲಿ ಮಾತ್ರ. ನಾನು ಹೀಗೆ ಹೇಳಿರುವ ಬಗ್ಗೆ ಕೆಲವು ಜನರು ಆಲಿಸಿದ್ದಾರೆ ಮತ್ತು 'ಬಾಹುಬಲಿ'ಯಂತೆ ಬಿಗ್ ಹಿಟ್ ನೀಡುವ ಅತ್ಯುತ್ತಮ ಹಿಂದಿ ಸ್ಕ್ರಿಪ್ಟ್ ಅನ್ನು ನಮಗೆ ನೀಡುತ್ತಾರೆ ಎಂಬ ಭರವಸೆ ಇದೆ' ಎಂದಿದ್ದಾರೆ.

'ಬಾಹುಬಲಿ' ಬಳಿಕ ಕರಣ್ ಜೋಹರ್ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ?

'ಬಾಹುಬಲಿ'ಯಲ್ಲಿ ತಮನ್ನಾ

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ- ದಿ ಬಿಗಿನ್ನಿಂಗ್' ಚಿತ್ರದಲ್ಲಿ ತಮನ್ನಾ 'ಅವಂತಿಕಾ' ಪಾತ್ರಧಾರಿಯಾಗಿ ಪ್ರಭಾಸ್ ಜೊತೆ ದೀರ್ಘಕಾಲ ಕಾಣಿಸಿಕೊಂಡಿದ್ದರು. 'ಬಾಹುಬಲಿ-2' ಚಿತ್ರದಲ್ಲಿ ಅವರು ಅಭಿನಯಿಸಿದ್ದರೂ ಸಹ ಅನುಪಸ್ಥಿತಿ ಹೆಚ್ಚಾಗಿತ್ತು.

English summary
Tamannaah Wants To Romance with Prabhas In A Hindi Film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada