»   » ಅನುಷ್ಕಾ ಶರ್ಮಾ ಚಿತ್ರದ ಶೂಟಿಂಗ್ ವೇಳೆ ಅವಘಡ, ಓರ್ವ ತಂತ್ರಜ್ಞ ಸಾವು

ಅನುಷ್ಕಾ ಶರ್ಮಾ ಚಿತ್ರದ ಶೂಟಿಂಗ್ ವೇಳೆ ಅವಘಡ, ಓರ್ವ ತಂತ್ರಜ್ಞ ಸಾವು

Posted By:
Subscribe to Filmibeat Kannada

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿನಯಿಸುತ್ತಿರುವ ಹೊಸ ಚಿತ್ರದ ಚಿತ್ರೀಕರಣ ವೇಳೆ ಅವಘಡ ಸಂಭವಿಸಿದ್ದು, ಓರ್ವ ತಂತ್ರಜ್ಞ ಸಾವಿಗೀಡಾಗಿದ್ದಾನೆ.

ಕಳೆದ ರಾತ್ರಿ ಕೊಲ್ಕತ್ತದಲ್ಲಿ ಅನುಷ್ಕಾ ಶರ್ಮಾ ಅಭಿನಯದ 'ಪಾರಿ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಸೆಟ್ ನಲ್ಲಿದ್ದ ತಂತ್ರಜ್ಞರೊಬ್ಬರು ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದಾರೆ. ಕೂಡಲೆ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಅನುಷ್ಕಾ ಶರ್ಮಾ ಮುಖ ನೋಡಿ ಭಯಗೊಂಡ ಬಾಲಿವುಡ್

Technician dies at shooting set of Anushka Sharma's pari

ಈ ಸಂದರ್ಭದಲ್ಲಿ ನಟಿ ಅನುಷ್ಕಾ ಶರ್ಮಾ, ಬೆಂಗಾಳಿ ನಟ ಪರಂಬ್ರಾಟಾ ಚಟರ್ಜಿ ಹಾಗೂ ಮತ್ತೋರ್ವ ನಟ ಸ್ಥಳದಲ್ಲಿ ಇದ್ದರು ಎನ್ನಲಾಗಿದೆ. ಈ ಘಟನೆಯ ನಂತರ ಚಿತ್ರೀಕರಣವನ್ನ ನಿಲ್ಲಿಸಲಾಗಿದೆ.

'ಪಾರಿ' ಚಿತ್ರವನ್ನ ಪ್ರಾಸಿಟ್ ರಾಯ್ ನಿರ್ದೇಶನ ಮಾಡುತ್ತಿದ್ದು, ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದೆ. ಅನುಷ್ಕಾ ಶರ್ಮಾ ಅವರ ಗೆಟಪ್ ಹಾಗೂ ಪಾತ್ರದ ಮೂಲಕ ನಿರೀಕ್ಷೆ ಹುಟ್ಟಿಸಿದೆ. ಹೀಗಿರುವಾಗ, ಈ ದುರಂತ ನಡೆದಿರುವುದು ಚಿತ್ರತಂಡಕ್ಕೆ ಸ್ವಲ್ಪ ತಲೆನೋವಾಗಿ ಪರಿಣಮಿಸಿದೆ.

ಅನುಷ್ಕಾ ಶರ್ಮಾ ನಟಿಯಾಗಲು ಈ ಬಾಲಿವುಡ್ ಬ್ಯೂಟಿಯೇ ಕಾರಣ! ಯಾರದು?

English summary
Technician got electrocuted during shooting of Anushka Sharma's film in Kolkata.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada