For Quick Alerts
  ALLOW NOTIFICATIONS  
  For Daily Alerts

  The Kashmir Files:ವಿವಾದಾತ್ಮಕ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ವಿವೇಶ್ ಅಗ್ನಿಹೋತ್ರಿ ಹಿನ್ನೆಲೆಯೇನು?

  |

  'ದಿ ಕಾಶ್ಮೀರ್ ಫೈಲ್ಸ್' ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ಸಿನಿಮಾ. 1990ರಲ್ಲಿ ಕಾಶ್ಮೀರಿ ಪಂಡಿತರ ವಲಸೆ ಹಾಗೂ ಹತ್ಯೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಸಿನಿ,ಆ ಬಿಡುಗಡೆಯಾಗಿದ್ದೇ ಆಗಿದ್ದು, ದೇಶಾದ್ಯಂತ ದೊಡ್ಡ ಹಲ್‌ಚಲ್ ಎಬ್ಬಿಸಿದೆ. ಈ ಸಿನಿಮಾ ನೋಡಿದವವರು ಥಿಯೇಟರ್‌ನಲ್ಲಿ ಕಣ್ಣೀರು ಹಾಕಿದ್ದು ಇದೆ. ಮೆಚ್ಚಿಕೊಂಡಿದ್ದೂ ಇದೆ. ಅದೇ ಮತ್ತೊಂದು ಕಡೆ ಈ ಸಿನಿಮಾದಲ್ಲಿ ಬಹುತೇಕ ದೃಶ್ಯ ಸತ್ಯಕ್ಕೆ ದೂರವಾಗಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಹಲವು ರಾಜಕೀಯ ಪಕ್ಷಗಳು ಈ ಸಿನಿಮಾ ಸತ್ಯಕ್ಕೆ ದೂರವಾಗಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿವೆ. ಪರ ಮತ್ತು ವಿರೋಧದ ನಡುವೆಯೂ 'ದಿ ಕಾಶ್ಮೀರ್ ಫೈಲ್ಸ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.

  ಈ ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಹಿಂದಿರುವ ವ್ಯಕ್ತಿ ವಿವೇಕ್ ಅಗ್ನಿಹೋತ್ರಿ. ಈ ಸಿನಿಮಾದ ನಿರ್ದೇಶಕ. ಸಿನಿಮಾ ಎಷ್ಟು ಸದ್ದು ಮಾಡುತ್ತಿದೆಯೋ, ಅಷ್ಟೇ ಜನಪ್ರಿಯರಾಗಿರುವುದು ವಿವೇಕ್ ಅಗ್ನಿಹೋತ್ರಿ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರಚಾರ ಮಾಡುತ್ತಿಲ್ಲವೆಂದು ಆರೋಪ ಮಾಡುತ್ತಾ ದೇಶದ ಗಮನ ಸೆಳೆದಿದ್ದ ನಿರ್ದೇಶಕ. ಹಾಗಂತ ಇದು ಇವರ ಮೊದಲ ಸಿನಿಮಾವೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ತೆರೆಕಂಡ ಬಳಿಕ ನಿರ್ದೇಶಕನಿಗೆ ವೈ ಸೆಕ್ಯೂರಿಟಿ ಕೊಟ್ಟಿದ್ದೇಕೆ? ಈ ನಿರ್ದೇಶಕನ ಹಿನ್ನೆಲೆಯೇನು?

  ಬಿಜೆಪಿ ಶಾಸಕರೊಂದಿಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಬಿಎಸ್‌ವೈಬಿಜೆಪಿ ಶಾಸಕರೊಂದಿಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಬಿಎಸ್‌ವೈ

  ವಿವೇಕ್ ಅಗ್ನಿಹೋತ್ರಿ ಹಿನ್ನೆಲೆಯೇನು?

  ವಿವೇಕ್ ಅಗ್ನಿಹೋತ್ರಿ ಹಿನ್ನೆಲೆಯೇನು?

  ವಿವೇಕ್ ಅಗ್ನಿಹೋತ್ರಿ ಸಿನಿಮಾಗೆ ಎಂಟ್ರಿಕೊಡುವುದಕ್ಕೂ ಮುನ್ನ ಜಾಹೀರಾತುಗಳಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿಷ್ಟಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್‌ನಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ. ಹಾವರ್ಡ್ ಎಕ್ಸ್‌ಟೆನ್ಷನ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಪ್ರತಿಷ್ಟಿತ ಕಂಪನಿ 'ಜಿಲ್ಲೆಟ್' ಹಾಗೂ 'ಕೋಕಾ ಕೋಲಾ'ಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಜಾಹೀರಾತು ಏಜೆನ್ಸಿಯಲ್ಲಿರುವಾಗಲೇ ವಿವೇಕ್ ಅಗ್ನಿಹೋತ್ರಿ ಟೆಲಿ ಸೀರಿಯಲ್‌ಗಳನ್ನು ನಿರ್ಮಿಸಿದ್ದರು. ಈ ಟೆಲಿ ಸೀರಿಯಲ್‌ಗೆ ಪಾಸಿಟಿವ್ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಆದರೆ, 2018ರಲ್ಲಿ 'ಮೊಹಮ್ಮದ್ ಹಾಗೂ ಊರ್ವಶಿ' ಶಾರ್ಟ್ ಫಿಲ್ಸ್‌ಗೆ ಬೆದರಿಕೆ ಕರೆ ಬಂದಿತ್ತು ಎಂದು ಅಗ್ನಿಹೋತ್ರಿ ಆರೋಪ ಮಾಡಿದ್ದರು. ವಿವೇಕ್ ಅಗ್ನಿಹೋತ್ರಿ ಸಿನಿಮಾ ಎಂಟ್ರಿ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ.

  The Kashmir Files: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶನಕ್ಕೆ ಅಡಚಣೆ, ಚಿತ್ರಮಂದಿರದಲ್ಲಿ ಗಲಾಟೆThe Kashmir Files: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶನಕ್ಕೆ ಅಡಚಣೆ, ಚಿತ್ರಮಂದಿರದಲ್ಲಿ ಗಲಾಟೆ

  ಫ್ಲಾಪ್ ಡೈರೆಕ್ಟರ್ ಆಗಿದ್ದ ವಿವೇಕ್ ಅಗ್ನಿಹೋತ್ರಿ

  ಫ್ಲಾಪ್ ಡೈರೆಕ್ಟರ್ ಆಗಿದ್ದ ವಿವೇಕ್ ಅಗ್ನಿಹೋತ್ರಿ

  2005ರಲ್ಲಿ ವಿವೇಕ್ ಅಗ್ನಿಹೋತ್ರಿ 'ಚಾಕೊಲೇಟ್' ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಅನಿಲ್ ಕಪೂರ್, ಇರ್ಫಾನ್ ಖಾನ್, ಇಮ್ರಾನ್ ಹಾಶ್ಮಿ, ತನುಶ್ರಿ ದತ್ತಾ ಈ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಚೊಚ್ಚಲ ಚಿತ್ರವೇ ಮಕಾಡೆ ಮಲಗಿತ್ತು. ಇದರ ಹಿಂದೆನೇ 'ಧನ್ ಧನಾ ಧನ್ ಗೋಲ್' ಅನ್ನೋ ಚಿತ್ರವನ್ನು ನಿರ್ದೇಶಿಸಿದ್ದರು. ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲೇ ಇಲ್ಲ. ಬಾಲಿವುಡ್‌ನ ಬೋಲ್ಡ್ ಸಿನಿಮಾ 'ಹೇಟ್ ಸ್ಟೋರಿ', 'ಜಿದ್', 'ಬುದ್ಧ ಇನ್ ಟ್ರಾಫಿಕ್ ಜಾಮ್', 'ಜೂನೂನಿಯತ್' ಸೇರಿದಂತೆ ಹಲವು ಸಿನಿಮಾ ಸೋತಿದ್ದವು. 2016ರಿಂದ 2019ರವರೆಗೆ ವಿವೇಕ್ ಅಗ್ನಿಹೋತ್ರಿ ಒಂದೇ ಒಂದು ಸಿನಿಮಾವನ್ನೂ ನಿರ್ದೇಶನ ಮಾಡಿಲ್ಲ. ಎಲ್ಲಾ ತರಹದ ಸಿನಿಮಾಗಳನ್ನೂ ಟ್ರೈ ಮಾಡಿ ಸೋತಿದ್ದ ವಿವೇಕ್ 'ದಿ ತಾಷ್ಕಿಂಟ್ ಫೈಲ್ಸ್' ಅನ್ನು ತೆರೆಮೇಲೆ ತಂದಿದ್ದರು.

   'ದಿ ತಾಷ್ಕಿಂಟ್ ಫೈಲ್ಸ್' ಕಥೆಯೇನು?

  'ದಿ ತಾಷ್ಕಿಂಟ್ ಫೈಲ್ಸ್' ಕಥೆಯೇನು?

  ವಿವೇಕ್ ಅಗ್ನಿಹೋತ್ರಿ 2019ರಲ್ಲಿ 'ದಿ ತಾಷ್ಕಿಂಟ್ ಫೈಲ್ಸ್' ಸಿನಿಮಾವನ್ನು ನಿರ್ದೇಶಿಸಿದ್ದರು. ಇದು ಭಾರತದ ಮೊದಲ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯ ನಿಗೂಢ ಸಾವಿನ ಬಗ್ಗೆ ಚಿತ್ರಿಸಿದ ಸಿನಿಮಾ ಆಗಿತ್ತು. ರಾಷ್ಟ್ರೀಯ ಮಾಧ್ಯಮಗಳು ಈ ಸಿನಿಮಾವನ್ನು ಸರಾಸಗಟಾಗಿ ತಿರಸ್ಕರಿಸಿದ್ದವು. ಇಂಡಿಯಾ ಟುಡೇ- "ಇದು ರಾಜಕೀಯ ಪ್ರೇರಿತ ಸಿನಿಮಾ ಎಂದಿತ್ತು." ದಿ ಹಿಂದು- "ಎಡಪಂಥವನ್ನು ಆಕ್ರಮಣ ಮಾಡಲೆಂದೇ ಈ ಸಿನಿಮಾ ಮಾಡಲಾಗಿದೆ" ಎಂದಿತ್ತು. ದಿ ಫಸ್ಟ್ ಪೋಸ್ಟ್-"ಇದೊಂದು ಚೀಪ್ ಟ್ರಿಕ್ಸ್" ಎಂದಿತ್ತು. ದಿ ಪ್ರಿಂಟ್-" ಲಾಜಿಕ್ ಇಲ್ಲ" ಎಂದು ಹೇಳಿತ್ತು. ರಿವ್ಯೂ ಇಷ್ಟೆಲ್ಲಾ ನೆಗೆಟಿವ್ ಇದ್ದರೂ ಈ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಪೋಷಕ ನಟಿ ಪಲ್ಲವಿ ಜೋಷಿ ( ವಿವೇಕ್ ಪತ್ನಿ) ಹಾಗೂ ಬೆಸ್ಟ್ ಡೈಲಾಗ್‌ ವಿಭಾಗದಲ್ಲಿ ವಿವೇಕ್ ಅಗ್ನಿಹೋತ್ರಿ ನ್ಯಾಷನಲ್ ಅವಾರ್ಡ್ ಗಿಟ್ಟಿಸಿಕೊಂಡಿದ್ದರು. ಈ ಸಿನಿಮಾಗೆ ರಾಜಕೀಯ ಪ್ರೇರಿತವಾಗಿದೆ ಅನ್ನುವ ಆರೋಪ ಕೂಡ ಕೇಳಿ ಬಂದಿತ್ತು.

  Narendra Modi: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ವಿರುದ್ಧ ಷಡ್ಯಂತ್ರ: ಮೋದಿNarendra Modi: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ವಿರುದ್ಧ ಷಡ್ಯಂತ್ರ: ಮೋದಿ

  ವಿವೇಕ್ ವಿರುದ್ಧ Metoo ಆರೋಪ

  ವಿವೇಕ್ ವಿರುದ್ಧ Metoo ಆರೋಪ

  2018ರಲ್ಲಿ ವಿವೇಕ್ ಅಗ್ನಿಹೋತ್ರಿ ವಿರುದ್ಧ ನಟಿ ತನುಶ್ರೀ ದತ್ತಾ ಮೀಟೂ ಆರೋಪ ಮಾಡಿದ್ದರು. 'ಚಾಕೋಲೇಟ್' ಸಿನಿಮಾ ಚಿತ್ರೀಕರಣದ ವೇಳೆ ವಿವಸ್ತ್ರಗೊಂಡು ಡ್ಯಾನ್ಸ್ ಮಾಡುವಂತೆ ಹೇಳಿದ್ದರು ಎಂದು ಆರೋಪಿಸಿದ್ದರು. ಆದರೆ, ವಿವೇಕ್ ಅಗ್ನಿಹೋತ್ರಿ ಈ ಆರೋಪವನ್ನು ಅಲ್ಲಗೆಳೆದು, ನಟಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

  'ದಿ ಕಾಶ್ಮೀರ್ ಫೈಲ್ಸ್‌' ಬೆಂಬಲಿಸಿತಾ ಬಿಜೆಪಿ?

  'ದಿ ಕಾಶ್ಮೀರ್ ಫೈಲ್ಸ್‌' ಬೆಂಬಲಿಸಿತಾ ಬಿಜೆಪಿ?

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಿಡುಗಡೆಗೊಂಡ ಬಳಿಕ ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಈ ಚಿತ್ರಕ್ಕೆ ಬೆಂಬಲ ನೀಡಲಾಗಿದೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹರಿಯಾಣ, ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ಗೋವಾ, ತ್ರಿಪುರ, ಉತ್ತರಪ್ರದೇಶ ಹಾಗೂ ಉತ್ತರಾಖಂಡ್‌ನಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ. ಮಧ್ಯಪ್ರದೇಶ ಹಾಗೂ ಅಸ್ಸಾಂನಲ್ಲಿ ಸರ್ಕಾರಿ ನೌಕರರಿಗೆ ಸಿನಿಮಾ ನೋಡಲು ಅರ್ಧ ದಿನ ರಜೆ ನೀಡಲಾಗಿತ್ತು. ಹೀಗಾಗಿ 'ದಿ ಕಾಶ್ಮೀರ್ ಫೈಲ್ಸ್' ಕೂಡ ನೈಜ ಘಟನೆಯನ್ನು ಆಧರಿಸಿದೆಯಾ? ಇಲ್ಲಾ ರಾಜಕೀಯ ಪ್ರೇರಿತನಾ ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

  English summary
  The Kashmir Files director Vivek Agnihotri background and other details. Vivek Agnihotri is film director and screenwriter.
  Friday, March 18, 2022, 20:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X