»   » ಸಲ್ಮಾನ್ ಖಾನ್ ಗೆ ಅರ್ಪಿತಾ ಒಡಹುಟ್ಟಿದ ತಂಗಿ ಅಲ್ಲ

ಸಲ್ಮಾನ್ ಖಾನ್ ಗೆ ಅರ್ಪಿತಾ ಒಡಹುಟ್ಟಿದ ತಂಗಿ ಅಲ್ಲ

Posted By:
Subscribe to Filmibeat Kannada

ಇಡೀ ಬಾಲಿವುಡ್ಡಿಗೆ ಬಾಲಿವುಡ್ಡೇ ಇಂದು ಬಿಟ್ಟುಬಿಡದೆ ಜಪಿಸುತ್ತಿರುವ ಹೆಸರು ''ಅರ್ಪಿತಾ ಖಾನ್''. ಇವತ್ತಷ್ಟೇ ತನ್ನ ದೀರ್ಘ ಕಾಲದ ಗೆಳೆಯ ಆಯುಷ್ ಶರ್ಮ ರೊಂದಿಗೆ ಹಸೆಮಣೆ ಏರಿರುವ ಅರ್ಪಿತಾ ನಿಜಕ್ಕೂ ಖಾನ್ ಕುಟುಂಬದ ಕುಡಿನಾ..?

ತಾನಿನ್ನೂ ಮದುವೆಯಾಗದಿದ್ದರೂ, ಅರ್ಪಿತಾ ಮದುವೆಯನ್ನ ಹೈದರಾಬಾದ್ ನ ಅರಮನೆಯಲ್ಲಿ ವೈಭವೋಪೇತವಾಗಿ ನೆರವೇರಿಸುತ್ತಿರುವ ಸಲ್ಮಾನ್, ಅರ್ಪಿತಾಗೆ ನಿಜಕ್ಕೂ ಅಣ್ಣನಾ..?

ಶಾರೂಖ್ ನಿಂದ ಹಿಡಿದು ಭಾರತೀಯ ಚಿತ್ರರಂಗದ ಗಣ್ಯಾತಿ ಗಣ್ಯರೇ ಅರ್ಪಿತಾ-ಆಯುಷ್ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹ ಅರ್ಪಿತಾ ಒಂದ್ಕಾಲದಲ್ಲಿ, ಫುತ್ ಪಾತ್ ನಲ್ಲಿ ಬಿದ್ದಿದ್ದ ಬಾಲಕಿ ಅನ್ನುವುದು ಎಷ್ಟು ಜನಕ್ಕೆ ತಾನೆ ಗೊತ್ತು?

ಹೌದು, ಅರ್ಪಿತಾ, ಖಾನ್ ಕುಟುಂಬದ ಕುಡಿಯಲ್ಲ. ಸಲ್ಮಾನ್ ತಂಗಿಯೂ ಅಲ್ಲ. ವರ್ಷಗಳ ಹಿಂದೆ ಮುಂಬೈನ ಫುತ್ ಪಾತ್ ನಲ್ಲಿ ಅಮ್ಮನನ್ನ ಕಳೆದುಕೊಂದು ದಿಕ್ಕಲ್ಲದೇ ಅನಾಥವಾಗಿ ಅಳುತ್ತಿದ್ದ ಪುಟ್ಟ ಬಾಲಕಿ ಅರ್ಪಿತಾ ಖಾನ್. [ಚಿತ್ರಗಳಲ್ಲಿ ಅರ್ಪಿತಾ ಖಾನ್ ಮದುವೆ ಮನೆ ವೈಭವ]

ಇಂದು ಸುಖದ ಸಂಪತ್ತಿನಲ್ಲಿ ತೇಲುತ್ತಿರುವ ಅರ್ಪಿತಾಳ ರಿಯಲ್ ಕಹಾನಿ ಹೇಳ್ತೀವಿ, ಈ ಸ್ಲೈಡ್ ಗಳನ್ನ ಕ್ಲಿಕ್ ಮಾಡಿ.

ತಂದೆ-ತಾಯಿ ಕಳೆದುಕೊಂಡಿದ್ದ ಅರ್ಪಿತಾ .!

ಚಿಕ್ಕವಯಸ್ಸಲ್ಲೇ ಅಪ್ಪನನ್ನ ಕಳೆದುಕೊಂಡಿದ್ದ ಅರ್ಪಿತಾ, ತನ್ನ ತಾಯಿಯೊಂದಿಗೆ ನೆಲೆಸುವುದಕ್ಕೆ ಮನೆ ಇಲ್ಲದೇ ಫುತ್ ಪಾತ್ ನಲ್ಲಿ ಜೀವನ ಸಾಗಿಸುತ್ತಿದ್ದರು. ಅಷ್ಟರಲ್ಲೇ ಅರ್ಪಿತಾ ತಾಯಿ ಕೂಡ ಅಪಘಾತಕ್ಕೀಡಾದರು. ದಿಕ್ಕು ತೋಚದೆ ಅಮ್ಮನ ಮೃತದೇಹವನ್ನಿಟ್ಟುಕೊಂಡು ಅಳುತ್ತಿದ್ದ ಅರ್ಪಿತಾಗೆ ಆಸರೆಯಾಗಿದ್ದು ಸಲ್ಮಾನ್ ತಂದೆ.

ಅರ್ಪಿತಾಳನ್ನ ದತ್ತು ಪಡೆದ ಸಲ್ಲು ಅಪ್ಪ.

ಪುಟ್ಟ ಬಾಲಕಿ ಅಳುತ್ತಿದ್ದನ್ನ ನೋಡಿ, ಅದೇ ದಾರಿಯಲ್ಲಿ ಸಾಗುತ್ತಿದ್ದ ಸಲ್ಮಾನ್ ತಂದೆ ಸಲೀಂ ಖಾನ್, ಅರ್ಪಿತಾಳನ್ನ ಮನೆಗೆ ಕರೆತಂದರು. ಅಂದಿನಿಂದ ಖಾನ್ ಕುಟುಂಬದಲ್ಲಿ ಅರ್ಪಿತಾ ಒಬ್ಬರಾದರು.

ದತ್ತು ಪುತ್ರಿಯಾದರೂ ಭೇದಭಾವ ಇಲ್ಲ!

ಸಲೀಂ ಖಾನ್ ಗೆ ಅರ್ಪಿತಾ ದತ್ತು ಪುತ್ರಿಯಾದರೂ, ಇಡೀ ಖಾನ್ ಕುಟುಂಬ ಆಕೆಯನ್ನ ಮಹಾರಾಣಿಯಂತೆ ಸಾಕಿದೆ. ದತ್ತು ಪುತ್ರಿಯಂತ ಯಾವುದೇ ತಾರತಮ್ಯ ಮಾಡಿಲ್ಲ. ಅದಕ್ಕೆ ಇಂದು (ನವೆಂಬರ್ 18) ನಡೆಯುತ್ತಿರುವ ಅರ್ಪಿತಾಳ ವಿವಾಹ ಮಹೋತ್ಸವವೇ ಸಾಕ್ಷಿ.

ಅರ್ಪಿತಾ ಅಂದ್ರೆ ಸಲ್ಲುಗೆ ಪ್ರಾಣ

ಇಡೀ ಕುಟುಂಬದಲ್ಲಿ ಸಲ್ಮಾನ್ ಗೆ ಅತ್ಯಾಪ್ತೆ ಅಂದ್ರೆ ಅದು ಅರ್ಪಿತಾ. ತಂಗಿಯನ್ನ ಕಂಡ್ರೆ ಪ್ರಾಣ ಬಿಡುವ ಸಲ್ಮಾನ್ ಇಂದು ಮುಂದೆ ನಿಂತು ಅರ್ಪಿತಾ ಮದುವೆಯನ್ನ ಅದ್ದೂರಿಯಾಗಿ ಮಾಡ್ತಿದ್ದಾರೆ.

ಅರ್ಪಿತಾ ಕನಸು ನನಸಾಗಿಸಿದ ಸಲ್ಮಾನ್

ಅರ್ಪಿತಾಗೆ ದೊಡ್ಡ ಅರಮನೆಯಲ್ಲಿ ಮದುವೆಯಾಗ್ಬೇಕು ಅನ್ನುವ ಆಸೆಯಿತ್ತಂತೆ. ಅದನ್ನ ತಿಳಿದ ಸಲ್ಮಾನ್, ಹೈದರಾಬಾದ್ ನ ಪ್ರತಿಷ್ಠಿತ ತಾಜ್ ಫಲಕ್ನುಮಾ ಪ್ಯಾಲೇಸ್ ನಲ್ಲೇ ಮದುವೆ ಫಿಕ್ಸ್ ಮಾಡಿ ತಂಗಿ ಆಸೆಯನ್ನ ನೆರವೇರಿಸಿದ್ದಾರೆ. ಅದು ಬರೋಬ್ಬರಿ 2 ಕೋಟಿ ರೂಪಾಯಿ ಬಾಡಿಗೆ ಕೊಟ್ಟು.

ಅರ್ಪಿತಾಗೆ ಸಲ್ಲು ಕೊಟ್ಟ ದುಬಾರಿ ಗಿಫ್ಟ್

ಮದುವೆ ಸಂಭ್ರಮದಲ್ಲಿರುವ ಅರ್ಪಿತಾಗೆ ಸಲ್ಲು, 16 ಕೋಟಿ ರೂಪಾಯಿ ಮೌಲ್ಯದ ಐಶಾರಾಮಿ ಫ್ಲಾಟ್ ಒಂದನ್ನೂ ಗಿಫ್ಟ್ ಆಗಿ ನೀಡಿದ್ದಾರೆ.

ಲಂಡನ್ ಕಾಲೇಜ್ ನಲ್ಲಿ ಪದವೀಧರೆ

ಫ್ಯಾಶನ್ ಮಾರ್ಕೆಟಿಂಗ್ ಮತ್ತು ಮ್ಯಾನೇಜ್ಮೆಂಟ್ ವಿಷಯದಲ್ಲಿ ಲಂಡನ್ ಕಾಲೇಜ್ ನಿಂದ ಅರ್ಪಿತಾ ಪದವಿ ಪಡೆದಿದ್ದಾರೆ. ಸದ್ಯ ಮುಂಬೈನಲ್ಲಿರುವ ಒಳಾಂಗಣ ವಿನ್ಯಾಸ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಅರ್ಪತಾಗೆ ತನ್ನದೇ ಫ್ಯಾಶನ್ ಬ್ರ್ಯಾಂಡ್ ಮತ್ತು ಸಿನಿಮಾವೊಂದನ್ನ ನಿರ್ಮಿಸುವ ಆಸೆಯಿದೆ.

ಅರ್ಜುನ್ ಕಪೂರ್ ಜೊತೆ ಲವ್ವಿ ಡವ್ವಿ

ಇಂದು ಆಯುಷ್ ಜೊತೆ ವಿವಾಹವಾಗಿರುವ ಅರ್ಪಿತಾ, ಎರಡು ವರ್ಷಗಳ ಹಿಂದೆ ಅರ್ಜುನ್ ಕಪೂರ್ ಜೊತೆ ಪ್ರೇಮಪಾಶದಲ್ಲಿ ಸಿಲುಕಿದ್ದರು.

ಆಯುಷ್ ಜೊತೆ ವಿವಾಹ

ಅರ್ಜುನ್ ಕಪೂರ್ ಜೊತೆ ಬ್ರೇಕಪ್ ಆದ್ಮೇಲೆ ತನ್ನ ಗೆಳೆಯರ ಬಳಗದಲ್ಲೇ ಇದ್ದ ಆಯುಷ್ ರನ್ನ ಸಂಗಾತಿಯಾನ್ನಾಗಿಸಿಕೊಳ್ಳುವುದಕ್ಕೆ ಅರ್ಪಿತಾ ಮನಸ್ಸು ಮಾಡಿದ್ರು.

2015ಕ್ಕೆ ಆಗ್ಬೇಕಿತ್ತು ವಿವಾಹ

ಆಯುಷ್-ಅರ್ಪಿತಾ ವಿವಾಹ 2015ಕ್ಕೆ ನಿಗಧಿಯಾಗಿತ್ತು. ಆದರೆ ತಂದೆ ಸಲೀಂ ಮತ್ತು ಸಲ್ಮಾ ಖಾನ್ ರ 50ನೇ ವಿವಾಹ ವಾರ್ಷಿಕೋತ್ಸವವಾಗಿರುವುದರಿಂದ ಈ ವರ್ಷವೇ ಅರ್ಪಿತಾ ಹಸೆಮಣೆ ಏರೋಕೆ ನಿರ್ಧರಿಸಿದ್ರು.

ಖಾನ್ ಕುಟುಂಬಕ್ಕಾಗಿ ಟಾಟ್ಯೂ

ತನ್ನ ಬಾಳಿಗೆ ಬೆಳಕಾಗಿ, ಎಲ್ಲಾ ಆಸೆಗಳನ್ನ ಈಡೇರಿಸಿರುವ ಖಾನ್ ಕುಟುಂಬಕ್ಕೆ ಪುಟ್ಟ ಕೊಡುಗೆಯಾಗಿ ಅರ್ಪಿತಾ ಎಲ್ಲರನ್ನ ಹೆಸರನ್ನ ಟಾಟ್ಯೂ ಹಾಕಿಸಿಕೊಂಡಿದ್ದಾರೆ.

English summary
Arpita Khan, who is well known as Salman Khan's sister is having her big-fat wedding today. Not many know that Arpitha is adopted sister of Salman Khan and a daughter of a homeless mother who died in a road accident.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada