For Quick Alerts
  ALLOW NOTIFICATIONS  
  For Daily Alerts

  ಹಿರಿಯ ಬಾಲಿವುಡ್ ನಟ, ರಂಗ ಕಲಾವಿದ ರಂಜಿತ್ ಚೌಧರಿ ಇನ್ನಿಲ್ಲ

  |

  ಹಿರಿಯ ನಟ, ಸಾಹಿತಿ ರಂಜಿತ್ ಚೌಧರಿ (65) ಮುಂಬೈನಲ್ಲಿ ಬುಧವಾರ ನಿಧನರಾದರು. 70 ಮತ್ತು 80ರ ದಶಕದಲ್ಲಿ 'ಖಟ್ಟಾ ಮೀಠಾ' 'ಬಾತೋನ್ ಬಾತೋನ್ ಮೇ', 'ಖುಬ್ಸೂರತ್' ಮುಂತಾದ ಸಿನಿಮಾಗಳಿಂದ ಅವರು ಜನಪ್ರಿಯರಾಗಿದ್ದರು.

  ಖ್ಯಾತ ರಂಗಭೂಮಿ ಕಲಾವಿದೆ ಪರ್ಲ್ ಪದಮ್ಸಿ ಅವರ ಮಗನಾಗಿದ್ದ ರಂಜಿತ್ ಚೌಧರಿ, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಮೆರಿಕದಲ್ಲಿ ನೆಲೆಸಿದ್ದ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಲಾಕ್ ಡೌನ್ ಕಾರಣದಿಂದ ಮರಳಲು ಸಾಧ್ಯವಾಗಿರಲಿಲ್ಲ.

  'ಕಾಮಸೂತ್ರ: ಎ ಟೇಲ್ ಆಫ್ ಲವ್', 'ಬಾಲಿವುಡ್/ಹಾಲಿವುಡ್', 'ಫೈರ್', 'ಮಿಸ್ಸಿಸ್ಸಿಪಿ ಮಸಾಲ', 'ಬ್ಯಾಂಡಿತ್ ಕ್ವೀನ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಅವರು, ಅಮೆರಿಕದಲ್ಲಿ ನೆಲೆಸಿದ ಬಳಿಕ 'ದಿ ಆಫೀಸ್', 'ಪ್ರಿಸನ್ ಬ್ರೇಕ್' ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ರಂಗಭೂಮಿಯಲ್ಲಿಯೂ ಅವರು ಉತ್ತಮ ಹೆಸರು ಮಾಡಿದ್ದರು.

  ರಂಜಿತ್ ಅವರ ಮಲತಂದೆ ಅಲಿಖ್ಯೂ ಪದಮ್ಸಿ ಅವರ ಮಗಳು, ರಂಗ ಕಲಾವಿದೆ ರಾಯೆಲ್ ಪದಮ್ಸಿ, ರಂಜಿತ್ ಅವರ ನಿಧನದ ಮಾಹಿತಿ ನೀಡಿದ್ದಾರೆ.

  English summary
  Theatre and film actir Ranjit Chowdhry who was well known for Khatta meetha, Baton Baton Mein etc movies has deid in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X