For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ರೇಸ್ ನಲ್ಲಿ ರಣಬೀರ್ ಬರ್ಫಿ ಚಿತ್ರ

  By Mahesh
  |

  ಹಿಂದಿ ಚಿತ್ರರಂಗಕ್ಕೆ ಬರ್ಫಿ ಚಿತ್ರದ ಮೂಲಕ ಕಾಲಿಟ್ಟ ಸಪೂರ ಸುಂದರಿ ಇಲಿಯಾನಾ ತಮ್ಮ ಮೊದಲ ಚಿತ್ರವೇ ಆಸ್ಕರ್ ರೇಸ್ ಗೆ ಆಯ್ಕೆಯಾಗಿರುವುದಕ್ಕೆ ಆತೀವ ಹರ್ಷ ವ್ಯಕ್ತಪಡಿಸಿದ್ದಾರೆ.

  ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ದೇವರು ನನ್ನ ಮೇಲೆ ತುಂಬಾ ಕೃಪೆ ಇಟ್ಟಿದ್ದಾನೆ. ಅನುರಾಗ್ ಬಸು ಅವರ ಕಲ್ಪನೆಗೆ ತಕ್ಕಂತೆ ಅಭಿನಯಿಸಲು ನಾನು ಶ್ರಮಿಸಿದ್ದೇನೆ. ನಮ್ಮ ತಂಡ ಬರ್ಫಿಗೆ ಆಸ್ಕರ್ ಸಿಗಲಿ ಎಂದು ಪ್ರಾರ್ಥಿಸುತ್ತದೆ ಎಂದು ಇಲಿಯಾನಾ ಹೇಳಿದ್ದಾರೆ.

  ಅನುರಾಗ್ ಬಸು ನಿರ್ದೇಶನದ ರಣಬೀರ್ ಕಪೂರ್, ಪ್ರಿಯಾಂಕಾ ಚೋಪ್ರಾ ಹಾಗೂ ಇಲಿಯಾನಾ ಡಿಕ್ರೂಜ್ ಅಭಿನಯದ 'ಬರ್ಫಿ' ಚಿತ್ರ ಆಸ್ಕರ್ ವಿದೇಶಿ ಭಾಷಾ ಚಿತ್ರ ವಿಭಾಗದ ರೇಸ್‌ನಲ್ಲಿ ಭಾರತದಿಂದ ಸ್ಪಧಿ
  ಸಲಿದೆ.

  ಕಿವುಡ, ಮೂಗ ಯುವಕ ಹಾಗೂ ಬುದ್ಧಿಮಾಂದ್ಯ ಯುವತಿಯ ಪ್ರೇಮದ ಜೊತೆ ತ್ಯಾಗ ಜೀವಿಯಾಗಿ ಇಲಿಯಾನಾ ಕಾಣಿಸಿಕೊಂಡಿದ್ದಾರೆ. ಈ ಕಥಾಹಂದರವಿರುವ ಬರ್ಫಿ ಚಿತ್ರ ಶನಿವಾರ ಅಧಿಕೃತವಾಗಿ ಆಯ್ಕೆಗೊಂಡಿದೆ. ಈಗ, ಕಹಾನಿ, ಪಾನ್ ಸಿಂಗ್ ತೋಮಾರ್, ಏಳಾಂ ಅರಿವು, ಗ್ಯಾಂಗ್ಸ್ ಆಫ್ ವಸ್ಸೆಪುರ್,ಹೀರೋಯಿನ್' ಸೇರಿದಂತೆ ಒಟ್ಟು 20 ಚಿತ್ರಗಳು ಸ್ಪರ್ಧೆಯಲ್ಲಿದ್ದವು.

  ಅಂತಿಮವಾಗಿ ಬರ್ಫಿಯನ್ನುನಾಮನಿರ್ದೇಶನ ಮಾಡಲಾಗಿದೆ ಎಂದು 16 ಜನರ ಆಯ್ಕೆ ಸಮಿತಿ ಹೊಂದಿದ್ದ ಫಿಲ್ಮ್ ಫೆಡರೇಷನ್ ಘೋಷಿಸಿದೆ. ಮುಂದಿನ ವರ್ಷ ಫೆಬ್ರವರಿ 24ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆಗೊಂಡಿದೆ,

  5000ಕ್ಕೂ ಅಧಿಕ ಅಕಾಡೆಮಿ ಸದಸ್ಯರ ಮನಸ್ಸಿಗೆ ಚಿತ್ರ ಓಕೆ ಏನಿಸಿದರೆ ಮಾತ್ರ ಚಿತ್ರ ಪ್ರಶಸ್ತಿಗಳಿಸಲು ಸಾಧ್ಯ. ರಾಜಮೌಳಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ತೆಲುಗಿನ 'ಈಗ' ಚಿತ್ರ ಕೂಡಾ ಆಸ್ಕರ್ ನಾಮಾಂಕಣಕ್ಕೆ ಕಳಿಸುವ ಚಿತ್ರಗಳ ಪಟ್ಟಿಯಲ್ಲಿತ್ತು.

  ಇದುವರೆವಿಗೂ ಭಾರತದಿಂದ 'ವಿದೇಶಿ ಭಾಷಾ ಅತ್ಯುತ್ತಮ ಚಿತ್ರ' ವಿಭಾಗದಲ್ಲಿ ಲಗಾನ್, ಮದರ್ ಇಂಡಿಯಾ ಹಾಗೂ ಸಲಾಂ ಬಾಂಬೆ ಅಧಿಕೃತವಾಗಿ ಸ್ಪರ್ಧಿಸಿತ್ತು.

  ರಣಬೀರ್ ಹರ್ಷ: " ನಾವೆಲ್ಲರೂ ತುಂಬಾ ಸಂತೋಷಗೊಂಡಿದ್ದೇವೆ. ನಮ್ಮ ತಂಡ ಪಟ್ಟ ಶ್ರಮಕ್ಕೆ ಸಂದ ಗೌರವ ಇದಾಗಿದೆ. ನಾಮಾಂಕಿತಗೊಂಡಿದ್ದಕ್ಕೆ ಖುಷಿಯಾದರೂ ಆಸ್ಕರ್ ಅಂಗಳದಲ್ಲಿ ಬರ್ಫಿ ಬಗ್ಗೆ ಪ್ರಚಾರ ನೀಡುವುದು ಹೇಗೆ? ಆಸ್ಕರ್ ಆಯ್ಕೆ ಸಮಿತಿ ಮನ ಗೆಲ್ಲುವುದು ಹೇಗೆ? ಎಂಬುದರ ಬಗ್ಗೆ ಅಮೀರ್ ಖಾನ್ ಅವರಿಂದ ಸಲಹೆ ಸೂಚನೆಗಳನ್ನು ಪಡೆಯಲು ನಮ್ಮ ತಂಡ ನಿರ್ಧರಿಸಿದೆ ಎಂದರು.

  ಬರ್ಫಿ ಬಾಕ್ಸಾಫೀಸ್ ಗಳಿಕೆ ಬಗ್ಗೆ ಪ್ರಶ್ನಿಸಿದಾಗ ರಣಬೀರ್ ಪ್ರತಿಕ್ರಿಯಿಸಿ, ಈವರೆಗೂ ಚಿತ್ರ 60 ಕೋಟಿ ರು ವಹಿವಾಟು ನಡೆಸಿದೆ. ವಿಮರ್ಶಕರು, ಸಾರ್ವಜನಿಕರು ಈ ಚಿತ್ರವನ್ನು ಮೆಚ್ಚಿರುವುದು ಹೆಚ್ಚಿನ ಖುಷಿ ಕೊಟ್ಟಿದೆ. ನಮ್ಮ ಗುರಿ 100 ಕೋಟಿ ಅಲ್ಲ 500 ಕೋಟಿ ರು ಎಂದು ನಗೆಯಾಡಿದ್ದಾರೆ.

  English summary
  Actress Ileana D'Cruz, thrilled over her debut Bollywood movie 'Barfi' selected as official entry to the Oscars. She said I m proud to be part of the team and that it was an honour and privilege and a matter of pride to get an official entry to the Oscars. Movie has Ranbhir Kapoor and Priyanka Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X