»   » ಕಿಂಗ್ ಫಿಶರ್ ಕ್ಯಾಲೆಂಡರ್ ಗರ್ಲ್ಸ್ ಈಗ ಬಿಟೌನ್ ಸ್ಟಾರ್ ನಟಿಯರು

ಕಿಂಗ್ ಫಿಶರ್ ಕ್ಯಾಲೆಂಡರ್ ಗರ್ಲ್ಸ್ ಈಗ ಬಿಟೌನ್ ಸ್ಟಾರ್ ನಟಿಯರು

Posted By: ಸೋನು ಗೌಡ
Subscribe to Filmibeat Kannada

SBI ಸೇರಿದಂತೆ ಸುಮಾರು 17 ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಮದ್ಯದ ದೊರೆ ವಿಜಯ್ ಮಲ್ಯ ತಲೆಮರೆಸಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ.

ಇನ್ನು ವಿಜಯ್ ಮಲ್ಯ ಅವರ ಸ್ವಾಧೀನದಲ್ಲಿರುವ ಕಿಂಗ್ ಫಿಶರ್ ಎಂಬ ಕ್ಯಾಲೆಂಡರ್ ಗೆ ಎಲ್ಲಿಲ್ಲದ ಬೇಡಿಕೆ ಇದ್ದು ಅದಕ್ಕಾಗಿ ಅವರು ಪ್ರತೀ ವರ್ಷ ಸೂಪರ್ ಮಾಡೆಲ್ ಗಳ ಹುಡುಕಾಟ ನಡೆಸುತ್ತಾರೆ.[ಕಿಂಗ್ ಫಿಶರ್ ಕ್ಯಾಲೆಂಡರ್ - 2015 ಫಸ್ಟ್ ಲುಕ್ ಅನಾವರಣ]

ಅಂದಹಾಗೆ ಇವರ ಕಿಂಗ್ ಫಿಶರ್ ಕ್ಯಾಲೆಂಡರ್ ಮೂಲಕ ಮೈಮಾಟ ಪ್ರದರ್ಶನಕ್ಕಿಟ್ಟು ಮಾಡೆಲ್ ಲೋಕದಿಂದ ಬಾಲಿವುಡ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಸ್ಟಾರ್ ನಟಿಯಾಗಿ ಕೈ ತುಂಬಾ ಸಂಭಾವನೆ ಪಡೆಯುವ ನಟಿಯರು ಹಲವರು.[ಕಿಂಗ್ ಫಿಶರ್ ಕ್ಯಾಲೆಂಡರ್ 2014: ಮೀಂಚುಳ್ಳಿ ದೃಶ್ಯಗಳು]

ಇದೇ ಮದ್ಯದ ದೊರೆ ಮಲ್ಯ ಅವರಿಗೋಸ್ಕರ ಟಾಪ್ ಲೆಸ್ ಆಗಿ ಆ ಮೂಲಕವೇ ಫೇಮಸ್ ಆಗಿ ಬಾಲಿವುಡ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಇದೀಗ ಸ್ಟಾರ್ ನಟಿಯರಾಗಿರುವ ಟಾಪ್ 5 ಸ್ಟಾರ್ ನಟಿಯರ ವಿವರವನ್ನು ನಾವು ನಿಮಗೆ ಕೊಡ್ತೀವಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...[ಬಿಕಿನಿ ಬ್ಯೂಟಿ ಕೊಟ್ಟು, ಸಾಲದಿಂದ ಮುಕ್ತರಾಗಿ ಮಲ್ಯಗೆ ಸಲಹೆ]

ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ

ಸದ್ಯಕ್ಕೆ ಬಿಟೌನ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿರುವ ನಟಿ ದೀಪಿಕಾ ಪಡುಕೋಣೆ ಅವರು ಒಂದು ಕಾಲದಲ್ಲಿ (2006 ರಲ್ಲಿ) ಮಲ್ಯ ಅವರ ಕಿಂಗ್ ಫಿಶರ್ ಕ್ಯಾಲೆಂಡರ್ ನಲ್ಲಿ ಬಿಕಿನಿ ತೊಟ್ಟು ಸಮುದ್ರದ ದಂಡೆಯಲ್ಲಿ ತಮ್ಮ ಅದ್ಭುತ ದೇಹವನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಇತ್ತೀಚೆಗೆ ಬಾಲಿವುಡ್ ಕ್ಷೇತ್ರದಲ್ಲಿ ದೀಪಿಕಾ ಅವರು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದ್ದಾರೆ. ಒಟ್ಟಿನಲ್ಲಿ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದ್ದು, ಅವರು ಇತ್ತೀಚೆಗೆ ಕಾಣಿಸಿಕೊಂಡಿರುವ ಎಲ್ಲಾ ಸಿನಿಮಾಗಳು 100 ಕೋಟಿ ಕ್ಲಬ್ ಸೇರಿವೆ.[ಬಿಕಿನಿ 'ಬೇಬ್' ದೀಪಿಕಾ ಭಾವಭಂಗಿಗಳು]

ಕತ್ರಿನಾ ಕೈಫ್

ಬಾಲಿವುಡ್ ನ ಮುದ್ದು ಮುಖದ ಚೆಲುವೆ ಕತ್ರಿನಾ ಕೈಫ್ ಅವರು ಕೂಡ 2003 ರಲ್ಲಿ ಮಲ್ಯ ಅವರ ಕಿಂಗ್ ಫಿಶರ್ ಕ್ಯಾಲೆಂಡರ್ ನಲ್ಲಿ ತಮ್ಮ ಬಿಕಿನಿ ತೊಟ್ಟು ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇದೀಗ ಕ್ಯಾಟ್ ಅವರು ಬಿಟೌನ್ ನಲ್ಲಿ ಕೈ ತುಂಬಾ ಪ್ರಾಜೆಕ್ಟ್ ಹಿಡಿದು ಓಡಾಡುತ್ತಿರುವ ಅತ್ಯಂತ ಬ್ಯುಸಿ ನಟಿ. ರಣಬೀರ್ ಕಪೂರ್ ಜೊತೆ ಲವ್ ಬ್ರೇಕ್ ಅಪ್ ಆದರೂ ಯಾವುದಕ್ಕೂ ಕ್ಯಾರೆ ಅನ್ನದೇ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.[ಅಮಲೇರಿಸುವ ಕಿಂಗ್ ಫಿಶರ್ ಬಿಕಿನಿ ಬೆಡಗಿಯರು]

ನರ್ಗೀಸ್ ಫಕ್ರಿ

ರಣಬೀರ್ ಕಪೂರ್ ಅವರ ಜೊತೆ 'ರಾಕ್ ಸ್ಟಾರ್', ವರುಣ್ ಧವನ್ ಜೊತೆ 'ಮೈ ತೇರಾ ಹೀರೋ' ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಅವರು ಕೂಡ 2009 ರಲ್ಲಿ ಮಲ್ಯ ಅವರ ಕಿಂಗ್ ಫಿಶರ್ ಕ್ಯಾಲೆಂಡರ್ ಗೆ ಟಾಪ್ ಲೆಸ್ ಆಗಿ ಭಾರಿ ವಿವಾದಕ್ಕೀಡಾಗಿದ್ದರು.

ಯಾನಾ ಗುಪ್ತಾ

'ಬಾಪೂಜಿ ಝರಾ ಧೀರೆ ಚಲೋ' ಎಂಬ ಹಾಡಿಗೆ ಸಖತ್ ಸೊಂಟ ಬಳುಕಿಸಿ ಐಟಂ ಸಾಂಗ್ ಗಳಿಗೆ ಫೇಮಸ್ ಆಗಿರುವ ನಟಿ ಯಾನಾ ಗುಪ್ತಾ ಅವರು ಕೂಡ 2003 ರಲ್ಲಿ ಕ್ಯಾಲೆಂಡರ್ ಗರ್ಲ್ ಆಗುವ ಮೂಲಕ ಪಡ್ಡೆ ಹುಡುಗರ ಮೈ ಬೆಚ್ಚಗಾಗಿಸಿದ್ದರು.

ಇಶಾ ಗುಪ್ತಾ

ಬಿಟೌನ್ ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಅವರ ಜೊತೆ 'ಜನ್ನತ್ 2' ಚಿತ್ರದ ಮೂಲಕ ಬಿಟೌನ್ ಅಂಗಳಕ್ಕೆ ಬಲಗಾಲಿರಿಸಿ ಬಂದ ನಟಿ ಇಶಾ ಗುಪ್ತಾ ಅವರು ಕೂಡ ಅತ್ಯಂತ ಹಾಟ್ ಕ್ಯಾಲೆಂಡರ್ ಕಿಂಗ್ ಫಿಶರ್ ಗೆ 2010 ರಲ್ಲಿ ಬಿಕಿನಿ ಧರಿಸಿದ್ದರು.

ಮಲ್ಯಗೆ ನಿರ್ದೇಶಕ ವರ್ಮಾ ಟಾಂಗ್

ಇನ್ನು ಕೋಟಿಗಟ್ಟಲೆ ಸಾಲ ಮಾಡಿ ವಂಚಿಸಿರುವ ಮಲ್ಯ ಅವರಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಸಾವಿರಾರು ಕೋಟಿ ಸಾಲ ಮಾಡಿ ವಿದೇಶದಲ್ಲಿರುವ ವಿಜಯ್ ಮಲ್ಯ ಅವರು ಬ್ಯಾಂಕ್ ಸಾಲ ತೀರಿಸಲು ಪ್ರತೀ ಬ್ಯಾಂಕ್ ಗೆ ಸಾಲದ ಹಣದ ಬದಲು ಒಬ್ಬೊಬ್ಬ ಬಿಕಿನಿ ಸುಂದರಿಯರನ್ನು ನೀಡಲಿ ಎಂದು ಟ್ವೀಟ್ ಮಾಡಿ ಟಾಂಗ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ.[ನನ್ನನ್ನು ಹುಡುಕಲು ನಿಮ್ಮ ಬಳಿ ಆಗಲ್ಲ: ಮಲ್ಯ ಸವಾಲು]

English summary
Top 5 bollywood Actress who did photoshoot for Kingfisher calendar. Here is the list check it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada