For Quick Alerts
  ALLOW NOTIFICATIONS  
  For Daily Alerts

  ''ಕೆಜಿಎಫ್ 2' ಸಿನಿಮಾ ನಕಲು ಮಾಡಲು ಹೋದರೆ ಸೋಲು ಗ್ಯಾರೆಂಟಿ'

  |

  'ಕೆಜಿಎಫ್ 2' ಸಿನಿಮಾ ಹಲವು ಸಿನಿಮಾ ಕರ್ಮಿಗಳಿಗೆ, ನಿರ್ಮಾಪಕರಿಗೆ, ಮೂವಿ ಪ್ರಮೋಷನ್ ಮಾಡುವವರಿಗೆ ಒಂದು ರೀತಿ ಸ್ಪೂರ್ತಿ. ಮಾಡಿದರೆ 'ಕೆಜಿಎಫ್ 2' ಮಾದರಿ ಸಿನಿಮಾ ಮಾಡಬೇಕು ಎಂದು ಹಲವು ನಿರ್ದೇಶಕರು, ನಿರ್ಮಾಪಕರು ಅಂದುಕೊಂಡಿದ್ದಾರೆ.

  ಆದರೆ ಇಲ್ಲೊಬ್ಬ ಬಾಲಿವುಡ್‌ನ ಸ್ಟಾರ್ ನಿರ್ದೇಶಕ, 'ಕೆಜಿಎಫ್ 2' ರೀತಿಯ ಸಿನಿಮಾ ಮಾಡಲು ಹೋದರೆ ಸೋಲುವುದು ಖಂಡಿತ, 'ಕೆಜಿಎಫ್ 2' ಸಿನಿಮಾದ ಹಿಂದೆ ಹೋದರೆ ಚಿತ್ರರಂಗವೇ ಹಾಳಾಗುತ್ತದೆ ಎಂದಿದ್ದಾರೆ.

  'ಗ್ಯಾಂಗ್ಸ್ ಆಫ್ ವಾಸೆಪುರ್', 'ದೇವ್ ಡಿ', 'ನೋ ಸ್ಮೋಕಿಂಗ್', 'ಬಾಂಬೆ ಟಾಕೀಸ್' ಇನ್ನೂ ಹಲವು ಭಿನ್ನ ಮಾದರಿಯ ಸಿನಿಮಾಗಳನ್ನು ಮಾಡಿರುವ ಅನುರಾಗ್ ಕಶ್ಯಪ್ ತಮ್ಮ ಬಿಡುಬೀಸು ಮಾತುಗಳಿಗೂ ಸಹ ಬಹಳ ಪ್ರಖ್ಯಾತರು. ಸಂದರ್ಶನವೊಂದರಲ್ಲಿ ಬಾಲಿವುಡ್‌ ಬಗ್ಗೆ ಮಾತನಾಡುತ್ತಾ 'ಕೆಜಿಎಫ್ 2' ಸಿನಿಮಾದ ರೆಫರೆನ್ಸ್‌ ಅನ್ನು ಅವರು ತಂದಿದ್ದಾರೆ.

  ಈಗ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಅಲ್ಲಿ ಯಶಸ್ಸು ಎನ್ನುವುದು 5% ಅಥವಾ 10% ಅಷ್ಟೆ. 'ಕಾಂತಾರ', 'ಪುಷ್ಪ' ದಂಥಹಾ ಸಿನಿಮಾಗಳು ನಿಮ್ಮ ಭಾಗದ ಕತೆಗಳನ್ನು ಜನರಿಗೆ ಹೇಳಲು ಸ್ಪೂರ್ತಿ ನೀಡುತ್ತವೆ. ಅದೇ ನೀವು 'ಕೆಜಿಎಫ್ 2' ಸಿನಿಮಾ ನೋಡಿ ಅಂಥಹಾ ಸಿನಿಮಾ ಮಾಡುತ್ತೇನೆಂದು ಹೋದರೆ ಧಾರುಣ ಸೋಲು ಕಾಣುತ್ತೀರಿ. ಇಂಥಹಾ ಪ್ರಯತ್ನಗಳಿಂದಲೇ ಬಾಲಿವುಡ್ ಇಂದು ಸತತ ಸೋಲು ಕಾಣುತ್ತಿರುವುದು ಎಂದಿದ್ದಾರೆ ಅನುರಾಗ್ ಕಶ್ಯಪ್.

  ಇದೇ ಸಂದರ್ಶನದಲ್ಲಿ ಮರಾಠಿಯ ಸೂಪರ್-ಡೂಪರ್ ಹಿಟ್ ಸಿನಿಮಾ 'ಸೈರಾಟ್' ಬಗ್ಗೆಯೂ ಮಾತನಾಡಿದ್ದ ಅನುರಾಗ್ ಕಶ್ಯಪ್. 'ಸೈರಾಟ್' ಸಿನಿಮಾ ಬಂದು ಮರಾಠಿಯಲ್ಲಿ ಕಡಿಮೆ ಬಜೆಟ್‌ ಸಿನಿಮಾ ಮಾಡಿಯೂ ಕೋಟ್ಯಂತರ ಹಣ ಮಾಡಬಹುದು ಎಂದು ತೋರಿಸಿಕೊಟ್ಟಿತು. ಆ ಬಳಿಕ ಎಲ್ಲರೂ 'ಸೈರಾಟ್' ಮಾದರಿ ಸಿನಿಮಾ ಮಾಡಲು ಮುಂದಾದರು, ಒಳ್ಳೆಯ ಸಿನಿಮಾ ಮಾಡುತ್ತಿದ್ದವರು ಸಹ 'ಸೈರಾಟ್' ಹಿಂದೆ ಓಡಿದರು ಇದರಿಂದಾಗಿ ಮರಾಠಿ ಚಿತ್ರರಂಗವೇ ಹಾಳಾಗಿ ಹೋಯ್ತು ಎಂದಿದ್ದಾರೆ ಅನುರಾಗ್ ಕಶ್ಯಪ್.

  'ಕಾಂತಾರ', 'ಪುಷ್ಪ' ಅಂಥಹಾ ಸಿನಿಮಾಗಳು ರೂಟೆಡ್ ಕತೆ ಹೊಂದಿದ್ದು ಇಂಥಹಾ ಸಿನಿಮಾಗಳು ಇಂಥಹಾ ಮಾದರಿಯ ಇನ್ನಿತರೆ ಪ್ರದೇಶದ ಕತೆ ಹೇಳಲು ಸ್ಪೂರ್ತಿ ನೀಡುತ್ತವೆ, ಆದರೆ 'ಕೆಜಿಎಫ್ 2' ಪಕ್ಕಾ ಮಾಸ್ ಸಿನಿಮಾ, ಮಾಸ್ ಸಿನಿಮಾವನ್ನು ನಕಲು ಮಾಡುವುದು ಮೂರ್ಖತನ ಎಂಬುದು ಅನುರಾಗ್ ಕಶ್ಯಪ್ ಮಾತು.

  English summary
  Director Anurag Kashyap says trying to emulate KGF 2 movie is like going towards disaster. He also said movies like Kantara and Pushpa inspire to tell regional stories.
  Tuesday, December 13, 2022, 11:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X