»   » ಲೆಕ್ಕಾಚಾರ ಉಲ್ಟಾ ಮಾಡಿದ 'ಟ್ಯೂಬ್ ಲೈಟ್' ಮೊದಲ ದಿನ ಗಳಿಸಿದ್ದೆಷ್ಟು?

ಲೆಕ್ಕಾಚಾರ ಉಲ್ಟಾ ಮಾಡಿದ 'ಟ್ಯೂಬ್ ಲೈಟ್' ಮೊದಲ ದಿನ ಗಳಿಸಿದ್ದೆಷ್ಟು?

Posted By:
Subscribe to Filmibeat Kannada

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರ ನಿನ್ನೆ (ಜೂನ್ 24) ದೇಶಾದ್ಯಂತ ತೆರೆ ಕಂಡಿದೆ. ಬಿಡುಗಡೆಗೂ ಮುಂಚೆ 'ಟ್ಯೂಬ್ ಲೈಟ್' ಚಿತ್ರದ ಗಳಿಕೆ ಬಗ್ಗೆ ಭಾರಿ ನಿರೀಕ್ಷೆ ಮಾಡಲಾಗಿತ್ತು. ಆದ್ರೆ, ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ ಸಂಪೂರ್ಣವಾಗಿ ಉಲ್ಟಾ ಆಗಿದೆ.

ಈದ್ ಹಬ್ಬದ ಪ್ರಯುಕ್ತ ಮೂರು ದಿನ ಮುಂಚೆಯೇ ರಿಲೀಸ್ ಆಗಿರುವ 'ಟ್ಯೂಬ್ ಲೈಟ್' ಮೊದಲ ದಿನ ಕೇವಲ 20.75 ಕೋಟಿ ಮಾತ್ರ ಗಳಿಸಿದೆ. ಈ ಮೂಲಕ ಕಳೆದ ಆರು ವರ್ಷಗಳಲ್ಲಿ ಸಲ್ಮಾನ್ ಖಾನ್ ಚಿತ್ರ ಮೊದಲ ದಿನ ಗಳಿಸಿರುವ ಅತಿ ಕಡಿಮೆ ಮೊತ್ತ
ಇದಾಗಿದೆ.

Tubelight 1st Day Box office Collection 20.75 crore

2012ನೇ ವರ್ಷದ ಈದ್ ಹಬ್ಬದಲ್ಲಿ 'ಏಕ್ತಾ ಟೈಗರ್' ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರ ಮೊದಲ ದಿನ 32.93 ಕೋಟಿ ಗಳಿಸಿತ್ತು. 2014ರಲ್ಲಿ 'ಕಿಕ್' ಸಿನಿಮಾ ತೆರೆಕಂಡಿತ್ತು. ಈ ಚಿತ್ರ ಮೊದಲ ದಿನ 26.40 ಕೋಟಿ ಬಾಚಿಕೊಂಡಿತ್ತು. 2015ನೇ ವರ್ಷದಲ್ಲಿ 'ಭಜರಂಗಿ ಭಾಯಿಜಾನ್' ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರ ಮೊದಲ ದಿನ 27.25 ಕೋಟಿ ಲೂಟಿ ಮಾಡಿತ್ತು. ಇನ್ನು ಕಳೆದ ವರ್ಷ 'ಸುಲ್ತಾನ್' ಸಿನಿಮಾ ಬಿಡುಗಡೆಯಾಗಿ, ಮೊದಲ ದಿನ 36.54 ಕೋಟಿ ಗಳಿಕೆ ಕಂಡಿತ್ತು. ಈ ಎಲ್ಲ ಚಿತ್ರಗಳಿಗೆ ಹೋಲಿಸಿಕೊಂಡರೇ, 'ಟ್ಯೂಬ್ ಲೈಟ್' (20.75) ಚಿತ್ರಕ್ಕೆ ಭಾರಿ ಹಿನ್ನಡೆಯಾಗಿದೆ.

ಅಂದ್ಹಾಗೆ, 'ಟ್ಯೂಬ್ ಲೈಟ್' ಚಿತ್ರವನ್ನ ಕಬೀರ್ ಖಾನ್ ನಿರ್ದೇಶನ ಮಾಡಿದ್ದು, ಸೈನೋ-ಇಂಡೋ ಯುದ್ಧದ ಸುತ್ತಾ ಕಥೆ ಮಾಡಲಾಗಿದೆ. ಸಲ್ಮಾನ್ ಖಾನ್ ಮತ್ತು ಶೋಹಿಲ್ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚೈನೀಸ್ ನಟಿ ಝುಝು (zhu zhu) ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.

ಒಟ್ನಲ್ಲಿ, 'ಟ್ಯೂಬ್ ಲೈಟ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಇನ್ನು ಎರಡು ದಿನಗಳು ವೀಕೆಂಡ್ ಆಗಿದ್ದು, ಸೋಮವಾರ ಈದ್ ಹಬ್ಬದ ಆಚರಣೆ ಇದೆ. ಹೀಗಾಗಿ ಈ ಮೂರು ದಿನಗಳಲ್ಲಿ 'ಟ್ಯೂಬ್ ಲೈಟ್' ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆ ಮಾಡಲಾಗಿದೆ.

'ಟ್ಯೂಬ್ ಲೈಟ್' ಚಿತ್ರದ ವಿಮರ್ಶೆ ಓದಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ 

ಸಲ್ಮಾನ್ 'ಟ್ಯೂಬ್ ಲೈಟ್' ಪ್ರಭಾವ ಹೆಚ್ಚು, ಪ್ರಕಾಶ ಕಡಿಮೆ

English summary
Salman Khan and Sohail Khan starrer 'Tubelight' had a decent opening at the box office but the collections are below expectations as the film collected, Rs. 20.75 crore on its day one.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada