ಮೊದಲ ವಾರಂತ್ಯದಲ್ಲಿ 'ಟ್ಯೂಬ್ ಲೈಟ್' ಮಾಡಿದ ಕಲೆಕ್ಷನ್ ಎಷ್ಟು?
ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಡಿಸೆಂಟ್ ಒಪನಿಂಗ್ ಮಾಡಿತ್ತು. ಮೊದಲ ದಿನ 20.75 ಕೋಟಿ ಗಳಿಸಿದ್ದ 'ಟ್ಯೂಬ್ ಲೈಟ್' ಚಿತ್ರ ವಾರಂತ್ಯದ ನಂತರ ನಿಧಾನವಾಗಿ ಕೆಲಕ್ಷನ್ ಹೆಚ್ಚಿಸಿಕೊಳ್ತಿದೆ.
ಈದ್ ಹಬ್ಬದ ಪ್ರಯುಕ್ತ ಮೂರು ದಿನ ಮುಂಚೆಯೇ ರಿಲೀಸ್ ಆಗಿದ್ದ 'ಟ್ಯೂಬ್ ಲೈಟ್' ಮೊದಲ ಮೂರು ದಿನಗಳಲ್ಲಿ ಸುಮಾರು 64.77 ಕೋಟಿ ಗಳಿಸಿದೆ ಎಂದು ಬಾಲಿವುಡ್ ಪತ್ರಿಕೆಗಳು ವರದಿ ಮಾಡಿವೆ. ಮೊದಲ ದಿನ 20.75 ಕೋಟಿ, ಎರಡನೇ ದಿನ 21.17, ಮೂರನೇ ದಿನ 22.45 ಕೋಟಿ ಬಾಚಿಕೊಂಡಿದೆ.

ಈ ಹಿಂದಿನ ಚಿತ್ರಗಳಿಗೆ ಹೋಲಿಸಿಕೊಂಡರೇ, 'ಟ್ಯೂಬ್ ಲೈಟ್' ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿದೆ. 2012ಲ್ಲಿ ಬಿಡುಗಡೆಯಾದ 'ಏಕ್ತಾ ಟೈಗರ್' ಸಿನಿಮಾ ಮೊದಲ 5 ದಿನಗಳಲ್ಲಿ 88.75 ಕೋಟಿ ಗಳಿಸಿತ್ತು. 2014ರಲ್ಲಿ ತೆರೆಕಂಡಿದ್ದ 'ಕಿಕ್' ಸಿನಿಮಾ ಮೊದಲ ವಾರಂತ್ಯಕ್ಕೆ 100.16 ಕೋಟಿ ಬಾಚಿಕೊಂಡಿತ್ತು. 2015 ರಲ್ಲಿ ರಿಲೀಸ್ ಆಗಿದ್ದ 'ಭಜರಂಗಿ ಭಾಯಿಜಾನ್' ಮೊದಲ ಮೂರು ದಿನದಲ್ಲಿ 102.60 ಕೋಟಿ ಲೂಟಿ ಮಾಡಿತ್ತು. ಇನ್ನು ಕಳೆದ ವರ್ಷ ಬಿಡುಗಡಯಾಗಿದ್ದ 'ಸುಲ್ತಾನ್' ಮೊದಲ ಮೂರು ದಿನದಲ್ಲಿ 105.16 ಕೋಟಿ ಗಳಿಕೆ ಕಂಡಿತ್ತು. ಈ ಎಲ್ಲ ಚಿತ್ರಗಳಿಗೆ ಹೋಲಿಸಿಕೊಂಡರೇ, 'ಟ್ಯೂಬ್ ಲೈಟ್' (64.77) ಚಿತ್ರಕ್ಕೆ ಭಾರಿ ಹಿನ್ನಡೆಯಾಗಿದೆ.
ಅಂದ್ಹಾಗೆ, 'ಟ್ಯೂಬ್ ಲೈಟ್' ಚಿತ್ರವನ್ನ ಕಬೀರ್ ಖಾನ್ ನಿರ್ದೇಶನ ಮಾಡಿದ್ದು, ಸೈನೋ-ಇಂಡೋ ಯುದ್ಧದ ಸುತ್ತಾ ಕಥೆ ಮಾಡಲಾಗಿದೆ. ಸಲ್ಮಾನ್ ಖಾನ್ ಮತ್ತು ಶೋಹಿಲ್ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚೈನೀಸ್ ನಟಿ ಝುಝು (zhu zhu) ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.
'ಟ್ಯೂಬ್ ಲೈಟ್' ಚಿತ್ರದ ವಿಮರ್ಶೆ ಓದಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ


Click it and Unblock the Notifications











