Don't Miss!
- News
ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್ ಮತ್ತೆ ವಿವಾದ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
KGF 2: 'ಕೆಜಿಎಫ್' ನೋಡಿಲ್ಲವಂತೆ ಈ ಹಾಟ್ ನಟಿ: ದಕ್ಷಿಣದ ಈ ನಟ ಬಲು ಇಷ್ಟವಂತೆ
ಬಾಲಿವುಡ್‌ನಲ್ಲಿ ಕೆಲವು ನಟಿಯರಿದ್ದಾರೆ. ಅವರಿಗೆ ಸದಾ ಸುದ್ದಿಯಲ್ಲಿರುವುದು ಹೇಗೆಂಬ ಕಲೆ ಕರಗತ. ತಮ್ಮ ಉಡುಪಿನಿಂದ ಮಾತುಗಳಿಂದ, ಹೇಳಿಕೆಗಳಿಂದ, ನಖರೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅವರಿಗೂ ಅದೇ ಬೇಕಿರುತ್ತದೆ.
ಇಂಥಹಾ ನಟಿಯರ ಸಾಲಿಗೆ ಹೊಸದಾಗಿ ಸೇರ್ಪಡೆ ಆಗಿರುವವರು ನಟಿ ಉರ್ಫಿ ಜಾವೇದ್. ತಮ್ಮ ಅತಿ ಗ್ಲಾಮರಸ್, ಚಿತ್ರ ವಿಚಿತ್ರ ಉಡುಗೆಗಳಿಂದಾಗಿ ಬಾಲಿವುಡ್ ಸುದ್ದಿ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ ಈ ನಟಿ.
Poonam
Pandey:
ಕ್ಯಾಮೆರಾ
ಮುಂದೆ
ಲೈವ್‌ನಲ್ಲಿ
ಟೀ
ಶರ್ಟ್
ಬಿಚ್ಚಿದ
ಪೂನಂ
ಪಾಂಡೆ!
ಇದೀಗ ದೇಶದೆಲ್ಲೆಡೆ ಮನೊರಂಜನಾ ಕ್ಷೇತ್ರದಲ್ಲಿ 'ಕೆಜಿಎಫ್ 2' 'RRR' ಸಿನಿಮಾದ ಚರ್ಚೆ ನಡೆಯುತ್ತಿದ್ದು, ಈಗ ಅದನ್ನೇ ಉರ್ಫಿ ಜಾವೇದ್ ಬಳಸಿಕೊಂಡಿದ್ದಾರೆ.
ಮುಂಬೈನಲ್ಲಿ 'ಕೆಜಿಎಫ್ 2' ಮೇನಿಯಾ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ನಟಿ ಉರ್ಫಿ ಜಾವೇದ್, ''ನಾನು 'ಕೆಜಿಎಫ್: ಚಾಪ್ಟರ್ 1' ಸಿನಿಮಾ ನೋಡಿಯೇ ಇಲ್ಲ. ಆ ಬಗ್ಗೆ ನನಗೆ ಬಹಳ ಬೇಸರವಿದೆ. ಆದರೆ ಶೀಘ್ರದಲ್ಲಿಯೇ ನಾನು ಬಿಡುವು ಮಾಡಿಕೊಂಡು ಆ ಸಿನಿಮಾ ನೋಡಿಯೇ ನೋಡುತ್ತೇನೆ'' ಎಂದಿದ್ದಾರೆ.
Vibhuti
Thakur:
ಕರೆ
ಮಾಡಿ
ಮಂಚಕ್ಕೆ
ಕರೆದ
ಅನಾಮಿಕರು:
ನಟಿ
ಮಾಡಿದ್ದೇನು?
ಇತ್ತೀಚೆಗೆ ದಕ್ಷಿಣ ಭಾರತ ಸಿನಿಮಾಗಳು ದೇಶದೆಲ್ಲೆಡೆ ದೊಡ್ಡ ಹವಾ ಸೃಷ್ಟಿಸುತ್ತಿವೆ ಅಲ್ಲವೆ? ಎಂಬ ಪ್ರಶ್ನೆಗೆ ಉತ್ತರಿಸಿರುವ ಉರ್ಫಿ ಜಾವೇದ್, ''ಹೌದು, ಈಗಿನಿಂದ ಏನಲ್ಲ ಬಹಳ ವರ್ಷಗಳಿಂದಲೂ ದಕ್ಷಿಣ ಭಾರತ ಸಿನಿಮಾಗಳು ಚರ್ಚೆಯಲ್ಲಿವೆ. ಒಬ್ಬರಿಗಿಂತಲೂ ಒಬ್ಬರು ಹ್ಯಾಂಡ್ಸಮ್ ಹೀರೋಗಳು ಅಲ್ಲಿದ್ದಾರೆ'' ಎಂದಿದ್ದಾರೆ.
ದಕ್ಷಿಣ ಭಾರತದ ಯಾವ ನಟ ನಿಮಗಿಷ್ಟ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಉರ್ಫಿ ಜಾವೇದ್, 'ರಾಮ್ ಚರಣ್ ನನಗೆ ಬಹಳ ಇಷ್ಟ. ಬಹಳ ಹ್ಯಾಂಡ್ಸಮ್ ಆಗಿದ್ದಾರೆ'' ಎಂದಿದ್ದಾರೆ.
ಉರ್ಫಿ ಜಾವೇದ್ ತಮ್ಮ ಚಿತ್ರ ವಿಚಿತ್ರ ಉಡುಗೆಗಳಿಂದ ಬಹಳ ಖ್ಯಾತರು. 2016 ರಿಂದಲೂ ಟಿವಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಉರ್ಫಿ ಜಾವೇದ್ ಬಿಗ್‌ಬಾಸ್ ಒಟಿಟಿಯ ಮೊದಲ ಸೀಸನ್‌ನಲ್ಲೂ ಪಾಲ್ಗೊಂಡಿದ್ದರು. ಜೊತೆಗೆ ಆಲ್ಟ್ ಬಾಲಾಜಿಯ ಪಂಚ್ ಬೀಟ್‌ನಲ್ಲೂ ನಟಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಉರ್ಫಿ ಜಾವೇದ್ ಅವರ ವಿಡಿಯೋ ಒಂದು ಬಿಡುಗಡೆ ಆಗಿತ್ತು. ವಿಡಿಯೋದಲ್ಲಿ ಉರ್ಫಿ ಜಾವೇದ್ ವ್ಯಕ್ತಿಯೊಬ್ಬನ ಜೊತೆ 'ಕೆಟ್ಟ ಸ್ಥಿತಿ'ಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಆಡಿಷನ್‌ಗೆ ಎಂದು ಅವರನ್ನು ಕರೆಸಿದ ತಂಡವೊಂದು ಅರೆ ನಗ್ನ ವಿದೇಶಿ ನಟನೊಟ್ಟಿಗೆ ಉರ್ಫಿಯನ್ನು ರೊಮ್ಯಾಂಟಿಕ್ ಸೀನ್ ಮಾಡುವಂತೆ ಹೇಳಿದ್ದರು. ನಟಿ ಆ ನಟನೊಡನೆ ಆಡಿಷನ್ ನೀಡುವ ಸಮಯಕ್ಕೆ ಸರಿಯಾಗಿ ಪೊಲೀಸರು ದಾಳಿ ನಡೆಸುತ್ತಾರೆ. ನೀವು ವಯಸ್ಕರ ಸಿನಿಮಾ ಮಾಡುತ್ತಿದ್ದೀರೆಂದು ಆರೋಪಿಸುತ್ತಾರೆ. ಇದರಿಂದ ಉರ್ಫಿ ಗಾಬರಿಗೊಳಗಾಗಿ, ತಮ್ಮನ್ನು ಆಡಿಷನ್‌ಗೆ ಕರೆದವರ ಮೇಲೆ ಕೂಗಾಡುತ್ತಾರೆ. ಆದರೆ ಅದು ಪ್ರ್ಯಾಂಕ್ ವಿಡಿಯೋ ಆಗಿದ್ದು, ಏಪ್ರಿಲ್ ಫೂಲ್ ವಿಶೇಷವಾಗಿ ಈ ವಿಡಿಯೋ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.