For Quick Alerts
  ALLOW NOTIFICATIONS  
  For Daily Alerts

  ನನ್ನ ಪತಿಯನ್ನು ಭಯೋತ್ಪಾದಕ ಎನ್ನಲಾಗಿತ್ತು: ಊರ್ಮಿಳಾ ಮತೋಡ್ಕರ್

  |

  ನಟಿ, ರಾಜಕಾರಣಿ ಊರ್ಮಿಳಾ ಮತೋಡ್ಕರ್, ತಾವು ಹಾಗೂ ತಮ್ಮ ಪತಿ ಮೊಹ್ಸಿನ್ ಅಕ್ಬರ್ ಅನುಭವಿಸಿದ ನೋವಿನ ದಿನಗಳ ಬಗ್ಗೆ ಮಾತನಾಡಿದ್ದಾರೆ.

  ಟ್ರೋಲ್‌ಗಳು ಹೇಗೆ ತಮ್ಮ ನೆಮ್ಮದಿಯನ್ನು, ಕುಟುಂಬದ ನೆಮ್ಮದಿಯನ್ನು ಹಾಳು ಮಾಡಿದ್ದವು ಎಂಬ ಬಗ್ಗೆ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿರುವ ಊರ್ಮಿಳಾ ಮತೋಡ್ಕರ್, 'ನನ್ನ ಪತಿಯನ್ನು ಭಯೋತ್ಪಾದಕ, ಪಾಕಿಸ್ತಾನಿ ಎಂದು ಕರೆಯಲಾಗಿತ್ತು' ಎಂದಿದ್ದಾರೆ.

  ನಟಿ-ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಇನ್ಸ್ಟಾಗ್ರಾಂ ಖಾತೆ ಹ್ಯಾಕ್

  'ಯಾವುದಕ್ಕೇ ಆದರು ಒಂದು ಮಿತಿ ಎಂಬುದಿರುತ್ತದೆ. ಟ್ರೋಲ್‌ಗಳು ನನ್ನ ವಿಕಿಪಿಡಿಯಾ ಪೇಜ್ ನ ಮಾಹಿತಿಯನ್ನು ಸಹ ಬದಲಾಯಿಸಿ ನನಗೆ ಕೆಟ್ಟ ಹೆಸರು ತರಲು ಯತ್ನಿಸಿದ್ದರು. ನನ್ನ ತಂದೆ-ತಾಯಿಯರ ಹೆಸರುಗಳನ್ನು ಬದಲಾಯಿಸಿದ್ದರು' ಎಂದಿದ್ದಾರೆ ಊರ್ಮಿಳಾ ಮತೋಡ್ಕರ್.

  'ಕೈ' ಬಿಟ್ಟು ಶಿವಸೇನಾ ಕೈ ಹಿಡಿದ ನಟಿ ಊರ್ಮಿಳಾ ಮತೋಡ್ಕರ್

  ತಂದೆ-ತಾಯಿ ಹೆಸರನ್ನೇ ಬದಲಾಯಿಸಿದ್ದ ಕಿಡಿಗೇಡಿಗಳು

  ತಂದೆ-ತಾಯಿ ಹೆಸರನ್ನೇ ಬದಲಾಯಿಸಿದ್ದ ಕಿಡಿಗೇಡಿಗಳು

  ಊರ್ಮಿಳಾ ಮತೋಡ್ಕರ್ ತಂದೆ ಹೆಸರು ಶ್ರೀಕಾಂತ್ ಮತೋಡ್ಕರ್ ಹಾಗೂ ತಾಯಿ ಹೆಸರು ಸುನಿತಾ ಮತೋಡ್ಕರ್, ಆದರೆ ಕೆಲವು ಕಿಡಿಗೇಡಿಗಳು ಊರ್ಮಿಳಾ ಮತೋಡ್ಕರ್ ಮುಸ್ಲಿಂ ಎಂದು ನಿರೂಪಿಸಲು ವಿಕಿ ಪೀಡಿಯಾ ಪೇಜ್‌ನಲ್ಲಿ ಊರ್ಮಿಳಾ ತಂದೆ ಹೆಸರು ಶಿವಿಂಧರ್ ಸಿಂಗ್, ತಾಯಿ ಹೆಸರು ರುಕ್ಸಾನಾ ಅಹ್ಮದ್ ಎಂದು ಬದಲಾಯಿಸಿದ್ದರು.

  'ನನ್ನ ಪತಿ ಮುಸ್ಲಿಂ ಆಗಿರುವ ಕಾರಣ ನಾನು ಟಾರ್ಗೆಟ್ ಆಗಿದ್ದೇನೆ'

  'ನನ್ನ ಪತಿ ಮುಸ್ಲಿಂ ಆಗಿರುವ ಕಾರಣ ನಾನು ಟಾರ್ಗೆಟ್ ಆಗಿದ್ದೇನೆ'

  ನನ್ನ ಪತಿ ಮುಸ್ಲಿಂ ಆಗಿರುವ ಕಾರಣಕ್ಕೆ ಅವರನ್ನು ಭಯೋತ್ಪಾದಕ, ಪಾಕಿಸ್ತಾನಿ ಎನ್ನಲಾಯಿತು. ನನ್ನ ಪತಿ ಕಾಶ್ಮೀರಿ ಮುಸ್ಲಿಂ. ಅವರು ಅವರ ಧರ್ಮ ಪಾಲಿಸುತ್ತಾರೆ, ನಾನು ನನ್ನ ಧರ್ಮ ಪಾಲಿಸುತ್ತೇನೆ. ನನ್ನ ಪತಿ ಮುಸ್ಲಿಂ ಆಗಿರುವ ಕಾರಣಕ್ಕೆ ಟ್ರೋಲಿಗರು ನನ್ನನ್ನು, ನನ್ನ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಊರ್ಮಿಳಾ ಮತೋಡ್ಕರ್.

  ಇನ್‌ಸ್ಟಾಗ್ರಾಂ ಖಾತೆ ಹ್ಯಾಂಗ್ ಆಗಿತ್ತು

  ಇನ್‌ಸ್ಟಾಗ್ರಾಂ ಖಾತೆ ಹ್ಯಾಂಗ್ ಆಗಿತ್ತು

  ಇತ್ತೀಚೆಗಷ್ಟೆ ಊರ್ಮಿಳಾ ಮತೋಡ್ಕರ್ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿತ್ತು. ಕೆಲವು ದಿನಗಳ ಬಳಿಕ ಹಾಗೂ ದೂರುಗಳ ಬಳಿಕ, ಊರ್ಮಿಳಾರ ಖಾತೆ ಅವರಿಗೆ ವಾಪಸ್ಸಾಯಿತು. ಕೆಲವು ದಿನಗಳ ಹಿಂದಷ್ಟೆ ಕಂಗನಾ ರಣೌತ್ ಜೊತೆ ಟ್ವಿಟ್ಟರ್‌ನಲ್ಲಿ ವಾಗ್ವಾದ ನಡೆಸಿ ಊರ್ಮಿಳಾ ಸುದ್ದಿಯಲ್ಲಿದ್ದರು. ಊರ್ಮಿಳಾರನ್ನು 'ಸಾಫ್ಟ್ ಪಾರ್ನ್' ನಟಿ ಎಂದಿದ್ದರು ಕಂಗನಾ.

  ಕುಂಬಳ ಕಾಯಿ ಹೊಡೆದ ಪ್ರಶಾಂತ್ ನೀಲ್ ಅಂಡ್ ಟೀಮ್ | Filmibeat Kannada
  ಊರ್ಮಿಳಾ ರಾಜಕೀಯ ಜರ್ನಿ

  ಊರ್ಮಿಳಾ ರಾಜಕೀಯ ಜರ್ನಿ

  ನಟಿಯಾಗಿದ್ದ ಊರ್ಮಿಳಾ ಮತೋಡ್ಕರ್ 2019 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ, ಲೋಕಸಭೆ ಚುನಾವಣೆಗೆ ಸಹ ಸ್ಪರ್ಧಿಸಿದರು. ಆದರೆ ಚುನಾವಣೆಯಲ್ಲಿ ಸೋತರು. ನಂತರ ಆಂತರಿಕ ಕಿತ್ತಾಟದ ಕಾರಣ ನೀಡಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಊರ್ಮಿಳಾ, ಇತ್ತೀಚೆಗಷ್ಟೆ ಶಿವಸೇನಾ ಪಕ್ಷ ಸೇರ್ಪಡೆಗೊಂಡಿದ್ದಾರೆ.

  English summary
  Urmila Matondkar said my husband was called terrorist and Pakistani. Trolls targeted me and my family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X