For Quick Alerts
  ALLOW NOTIFICATIONS  
  For Daily Alerts

  ಗರ್ಲ್‌ಫ್ರೆಂಡ್‌ ಜೊತೆಗಿನ ಚಿತ್ರ ಹಂಚಿಕೊಂಡ ಖ್ಯಾತ ಯುವ ನಟ

  |

  ಇತರರ ಜೀವನದ ಬಗ್ಗೆ ಸಿನಿಮಾಗಳನ್ನು ಮಾಡುವ ಸಿನಿಮಾ ಮಂದಿ ತಮ್ಮ ಖಾಸಗಿ ಜೀವನವನ್ನು ಸಾಕಷ್ಟು ಗೌಪ್ಯವಾಗಿಟ್ಟಿರುತ್ತಾರೆ.

  ಬಾಲಿವುಡ್‌ನಲ್ಲಿಯಂತೂ ಈ ಗೌಪ್ಯತೆ ತುಸು ಹೆಚ್ಚೇ. ಗರ್ಲ್‌ಫ್ರೆಂಡ್‌ಗಳ ಸಂದರ್ಶನಗಳಲ್ಲಿ ಮಾತು, ಚಿತ್ರ ಹಂಚಿಕೊಳ್ಳುವುದು ಬಹುತೇಕ ಕಡಿಮೆ. ಆದರೆ ಬಾಲಿವುಡ್‌ನ ಖ್ಯಾತ ಯುವ ನಟ ತಮ್ಮ ಗರ್ಲ್‌ಫ್ರೆಂಡ್‌ ಜೊತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಹೌದು, ನಟ ವರುಣ್ ಧವನ್ ತಮ್ಮ ಬಹುಕಾಲದ ಪ್ರೇಯಸಿ ನತಾಶಾ ಜೊತೆಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

  ಸಖತ್ ವೈರಲ್ ಆಗಿದೆ ಚಿತ್ರ

  ಸಖತ್ ವೈರಲ್ ಆಗಿದೆ ಚಿತ್ರ

  ಸ್ವಿಮ್ಮಿಂಗ್ ಪೂಲ್ ಪಕ್ಕ ವರುಣ್ ಧವನ್ ಹಾಗೂ ಪ್ರೇಯಸಿ ನತಾಶಾ ದಲಾಲ್ ನಿಂತಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ವರುಣ್ ಧವನ್ ಹಂಚಿಕೊಂಡಿದ್ದಾರೆ. ಈ ಚಿತ್ರ ಕೆಲವೇ ಸಮಯದಲ್ಲಿ ಸಖತ್ ವೈರಲ್ ಆಗಿದೆ.

  'ನೀನು ಪಕ್ಕ ಇದ್ದರೆ ಯಾವುದರ ಭಯವಿಲ್ಲ'

  'ನೀನು ಪಕ್ಕ ಇದ್ದರೆ ಯಾವುದರ ಭಯವಿಲ್ಲ'

  'ನೀನು ಪಕ್ಕ ನಿಂತ ನಂತರ ಇನ್ನು ಮುಂದೆ ನನಗೆ ಭಯವಿಲ್ಲ' ಎಂದು ಚಿತ್ರಕ್ಕೆ ಕ್ಯಾಪ್ಶನ್ ನೀಡಿದ್ದಾರೆ ವರುಣ್ ಧವನ್. ವರುಣ್ ಧವನ್ ಹಾಕಿರುವ ಚಿತ್ರಕ್ಕೆ ಕರಿಶ್ಮಾ ಕಪೂರ್, ಮನಿಶ್ ಮಲ್ಹೋತ್ರಾ, ಮಹಿರಾ ಖಾನ್ ಇನ್ನೂ ಸೆಲೆಬ್ರಿಟಿಗಳು ಲೈಕ್ ಒತ್ತಿದ್ದಾರೆ.

  ಒಂದೇ ಶಾಲೆಯಲ್ಲಿ ಓದಿರುವ ವರುಣ್-ನತಾಶಾ

  ಒಂದೇ ಶಾಲೆಯಲ್ಲಿ ಓದಿರುವ ವರುಣ್-ನತಾಶಾ

  ನತಾಶಾ ದಲಾಲ್ ಹಾಗೂ ವರುಣ್ ಧವನ್ ಒಂದೇ ಶಾಲೆಯಲ್ಲಿ ಕಲಿತವರು. ಬಹಳ ವರ್ಷಗಳಿಂದಲೂ ಗೆಳೆಯರು. ನತಾಶಾ ಒಂದು ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ ಕೆಲ ವರ್ಷದಿಂದ ಇಬ್ಬರ ನಡುವೆ ಪ್ರೀತಿ ಶುರುವಾಯಿತಂತೆ.

  ಪತ್ನಿ Revathi ಕಾಲೆಳೆದ Nikhil Kumaraswamy | Oneindia Kannada
  ಫ್ಯಾಷನ್ ಡಿಸೈನರ್ ಆಗಿರುವ ನತಾಶಾ

  ಫ್ಯಾಷನ್ ಡಿಸೈನರ್ ಆಗಿರುವ ನತಾಶಾ

  ನತಾಶಾ ದಲಾಲ್ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಕೊರೊನಾ ಲಾಕ್‌ಡೌನ್ ಬರದೇ ಇದ್ದಿದ್ದರೆ ಏಪ್ರಿಲ್‌ನಲ್ಲಿ ಈ ಜೋಡಿಯ ವಿವಾಹ ಆಗಿರುತ್ತಿತ್ತು. ಕೊರೊನಾ ಲಾಕ್‌ಡೌನ್ ಕಾರಣ ಮದುವೆ ಮುಂದಕ್ಕೆ ಹೋಗಿದೆ.

  English summary
  Actor Varun Dhawan shares his girlfriend Natasha Dalal photo on Instagram. Photo went viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X