»   » ವೀಣಾ ಮಲಿಕ್ ಬಿ ಗ್ರೇಡ್ ಚಿತ್ರದ ಹಾಟ್ ಚಿತ್ರಗಳು

ವೀಣಾ ಮಲಿಕ್ ಬಿ ಗ್ರೇಡ್ ಚಿತ್ರದ ಹಾಟ್ ಚಿತ್ರಗಳು

Posted By:
Subscribe to Filmibeat Kannada

ಬೆಂಗಳೂರು ಗಾಂಧಿನಗರಕ್ಕೆ ಬಂದು ಸೊಂಟ ಕುಣಿಸಿ ಹೋಗಿದ್ದ ಪಾಕಿಸ್ತಾನಿ ತಾರೆ ವೀಣಾ ಮಲಿಕ್ ಬಿ ಗ್ರೇಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಇತ್ತೀಚೆಗೆ ಆ ಚಿತ್ರಕ್ಕೆ ಸಂಬಂಧಪಟ್ಟ ಫೋಟೋ ಶೂಟ್ ನಡೆಯಿತು. ಈ ಬಾರಿ ವೀಣಾ ಮಲಿಕ್ ತಮ್ಮ ಅಷ್ಟೌಶ್ವರ್ಯಗಳನ್ನು ಕ್ಯಾಮೆರಾ ಮುಂದೆ ತೆರೆದಿಟ್ಟಿದ್ದಾರೆ.

ಕ್ಯಾಟ್ ವುಮೆನ್ ಗೆಟಪ್ ನಲ್ಲಿ ಪೋಸು ಕೊಟ್ಟಿರುವ ವೀಣಾ, ತಮ್ಮ ಮೈಮೇಲೆ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ಪ್ರಿಂಟ್ ಹಾಕಿಕೊಂಡು ಅಂಗಸೌಷ್ಟವನ್ನು ತೆರೆದಿಟ್ಟಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಈ ಫೋಟೋಗಳನ್ನು ಬಳಸಿಕೊಳ್ಳಲಾಗುತ್ತದೆ. ಅಂದಹಾಗೆ ಈ ಚಿತ್ರದ ಹೆಸರು 'ಸೂಪರ್ ಮಾಡೆಲ್'. ರವಿ ಅಹ್ಲಾವತ್ ನಿರ್ಮಿಸುತ್ತಿರುವ ಚಿತ್ರಕ್ಕೆ ನವೀನ್ ಬಾತ್ರಾ ಆಕ್ಷನ್ ಕಟ್ ಹೇಳುತ್ತಿದ್ದಾರೆ.


ಈ ಚಿತ್ರದ ಬಗ್ಗೆ ಮಾತನಾಡಿರುವ ವೀಣಾ ಮಲಿಕ್, "ಇಂದು ನಾನು ನಿಜವಾಗಿಯೂ ಸೂಪರ್ ಮಾಡೆಲ್ ಎಂಬಂತೆ ಭಾಸವಾಗುತ್ತಿದೆ. ಸೂಪರ್ ಮಾಡೆಲ್ ಒಬ್ಬಳ ಹಾಟ್ ದೃಶ್ಯಗಳ ಸನ್ನಿವೇಶಗಳನ್ನು ಚಿತ್ರೀಕರಿಸಲಾಯಿತು. ಕಿಚ್ಚು ಹಚ್ಚಲು ಒಂದು ಸಣ್ಣ ಕಿಡಿ ಇದು ಅಷ್ಟೇ. ಹೌದು ನಾನೀಗ ಏಕೈಕ ಸೂಪರ್ ಮಾಡೆಲ್" ಎಂದು ಬೀಗಿದ್ದಾರೆ.

ಮಿಡ್ಲ್ ಕ್ಲಾಸ್ ಕುಟುಂಬದಿಂದ ಬಂದ ಯುವತಿಯೊಬ್ಬಳು ಸೂಪರ್ ಮಾಡೆಲ್ ಮಟ್ಟಕ್ಕೆ ಏರುವ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ವೀಣಾ ಮಲಿಕ್ ಅಭಿನಯಿಸುತ್ತಿರುವ ಮೂರನೇ ಚಿತ್ರ ಇದಾಗಿದೆ. ಚಿತ್ರದ ನಾಯಕ ನಟ ಅಶ್ಮಿತ್ ಪಟೇಲ್. ವೀಣಾ ಈ ಚಿತ್ರದ ಮೂಲಕ ಸೆಕ್ಸಿ ತಾರೆಯಾಗಿ ವೀಣಾ ಹೊರಹೊಮ್ಮಲಿದ್ದಾರೆ. (ಏಜೆನ್ಸೀಸ್)

English summary
Pakistan actress Veena Malik raunchy photoshoot of her upcoming film Supermodel. She is wearing provocative clothes and has given some really hot poses.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada