»   » ಸಲಿಂಗ ಕಾಮಿಗಳ ಪರ ಕೈಎತ್ತಿದ ವೀಣಾ ಮಲಿಕ್

ಸಲಿಂಗ ಕಾಮಿಗಳ ಪರ ಕೈಎತ್ತಿದ ವೀಣಾ ಮಲಿಕ್

Posted By:
Subscribe to Filmibeat Kannada

ಸಲಿಂಗ ಕಾಮ. ಭಾರತದ ಪಾಲಿಗೆ ಇದು ನಿಷಿದ್ಧ ಪದ. ಪಾಶ್ಚಿಮಾತ್ಯರ ಪಾಲಿಗೆ ಇದು ಮುಕ್ತ ಹೃದಯದಿಂದ ಅಪ್ಪಿಕೊಳ್ಳಬೇಕಾದ ಚಟುವಟಿಕೆ. ಭಾರತೀಯ ಸಮಾಜದಲ್ಲಿ ಸಲಿಂಗ ಕಾಮವನ್ನು ಒಪ್ಪುವುದಿರಲಿ, ಪಾಲಿಸುವುದಿರಲಿ, ಮುಕ್ತ ಕಂಠದಿಂದ ಮಾತನಾಡಲು ಕೂಡ ಅಸಹ್ಯ ಪಟ್ಟುಕೊಳ್ಳುತ್ತಾರೆ.

ಆದರೆ, ಸದ್ಯ ಕನ್ನಡದ 'ದಿ ಡರ್ಟಿ ಪಿಕ್ಚರ್ - ಸಿಲ್ಕ್ ಸಖತ್ ಮಗಾ'ನಲ್ಲಿ ಅಭಿನಯಿಸುತ್ತಿರುವ ಮತ್ತು ಪಾಕಿಸ್ತಾನದ ಮೂಲದವರಾದರೂ ಭಾರತೀಯ ಚಿತ್ರರಂಗದಲ್ಲಿ ಭಾರೀ ಅಲೆ ಎಬ್ಬಿಸಿರುವ ಹೊಸ ಅಲೆಯ ಅಭಿನೇತ್ರಿ ವೀಣಾ ಮಲಿಕ್ ಅವರು ಸಲಿಂಗ ಕಾಮದ ಬಗ್ಗೆ ನಿರ್ಭಿಡೆಯಿಂದ ಮಾತನಾಡಲು ಪ್ರಾರಂಭಿಸಿದ್ದಾರೆ.

ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಅಶ್ಮಿತ್ ಪಟೇಲ್ ಜೊತೆ ಬಹಿರಂಗವಾಗಿ ಕಾಮನೆಗಳಲ್ಲಿ ತೊಡಗಿ ಎಲ್ಲರ ಕಣ್ಣಿಗೆ ಕೆಸರಾಗಿದ್ದ ವೀಣಾ ಮಲಿಕ್‌ಗೆ, ತಾವು ತೊಡುವ ಬಟ್ಟೆಗಳ ಮೇಲೆ ಅಲರ್ಜಿ ಎಷ್ಟಿದೆಯೋ, ಸಲಿಂಗ ಕಾಮದ ಬಗ್ಗೆ ಅಷ್ಟೇ ಆಸಕ್ತಿ ತೋರಿಸುತ್ತಿದ್ದಾರೆ. ಸಲಿಂಗ ಕಾಮ ಮಾತ್ರವಲ್ಲ ಸಲಿಂಗ ಕಾಮಿಗಳ ಮದುವೆಗೂ ಕಾನೂನು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಗಂಡು ಅಥವಾ ಹೆಣ್ಣಿನ ನಡುವೆ ನಡೆಯುವ ಸಲಿಂಗ ಕಾಮ ಅಥವಾ ದ್ವಿಲಿಂಗಿಗಳು ಅಥವಾ ಬಹುಲಿಂಗಿಗಳ ಸಂವೇದನೆಯನ್ನು ನಾನು ಬಲ್ಲೆ ಮತ್ತು ಅವರನ್ನು ಬಹಿರಂಗವಾಗಿ ಬೆಂಬಲಿಸುತ್ತೇನೆ. ಇದರಲ್ಲಿ ಮುಜುಗರ ಪಡುವಂತಹುದು ಏನೂ ಇಲ್ಲ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅಂಥವರು ಸಲಿಂಗ ಕಾಮವನ್ನು ಬೆಂಬಲಿಸುತ್ತಿರಬೇಕಾದರೆ ನಾವು ಕೂಡ ಸಲಿಂಗ ಕಾಮವನ್ನು ಬೆಂಬಲಿಸಲು ಹಿಂಜರಿಕೆಯೇಕೆ ಎಂದು ವೀಣಾ ಮಲಿಕ್ ಪ್ರಶ್ನೆ ಬಿಸಾಕಿದ್ದಾರೆ.

ಹಾಲಿವುಡ್ ನಟಿಯಾದ ಕಿಮ್ ಕಾರ್ಡೇಶಿಯನ್, ಪಾಪ್ ಹಾಡುಗಾರ್ತಿ ಲೇಡಿ ಗಾಗಾ ಅವರೆಲ್ಲ ಸಲಿಂಗ ಕಾಮದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ, ನಮಗೇನು ಎಂದು ಬಾಲಿವುಡ್ ನಟಿಯರ ಲೇವೆಲ್ಲಿನಲ್ಲಿ ವೀಣಾ ಮಲಿಕ್ ಮಾತನಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ತಮಗೆ ಬೇಕಾದ ಹಾಗೆ ಬದುಕುವ ಎಲ್ಲ ಹಕ್ಕೂ ಇದೆ ಎಂದು ಸಮಾಜ ಸೇವಕಿಯ ಪೋಸಿನಲ್ಲಿ ವೀಣಾ ಮಲಿಕ್ ಸಲಿಂಗಿಗಳ ಪರವಾಗಿ ವಾದಿಸುತ್ತಿದ್ದಾರೆ.

ನಮ್ಮ ಸಮಾಜದಲ್ಲಿ ಸಲಿಂಗ ಕಾಮದ ಬಗ್ಗೆ ಜನ ಕೂಡ ಮುಕ್ತವಾಗಿ ಹರಟುವಂತಾಗಬೇಕು, ಸಲಿಂಗ ಕಾಮವನ್ನು ಪಾಲಿಸಲು ಮುಂದಾಗುವವರನ್ನು ಸಮಾಜದಲ್ಲಿ ಬಿಟ್ಟುಕೊಡಬೇಕಾಗಿದೆ, ನಾಗರಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವವರು ಸಲಿಂಗ ಕಾಮಿಗಳ ಹಕ್ಕಿಗಾಗಿ ಬಹುದೊಡ್ಡ ಹೆಜ್ಜೆ ಇಡಬೇಕಾಗಿದೆ. ನಮ್ಮ ನಡವಳಿಕೆ ಬದಲಾಗಬೇಕಾಗಿದೆ ಎಂದು ವೀಣಾ ಮಲಿಕ್ ನುಡಿದಿದ್ದಾರೆ.

English summary
Gay or lesbian marriage or live-in relationship is generally considered a taboo subject of civil society but Bollywood starlet Veena malik took initiative for supporting same sex marriage. She is standing up for the equality of every citizen.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada