For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ಶೋದಲ್ಲಿ ಸುಶಾಂತ್ ಬಗ್ಗೆ ಇಮ್ರಾನ್ ಹಶ್ಮಿ ಆಡಿದ್ದ ಮಾತುಗಳಿವು...

  |

  ಸಮಕಾಲೀನ ಪ್ರತಿಭಾವಂತ ನಟರ ಪೈಕಿ ಬಾಲಿವುಡ್‌ನಲ್ಲಿ ಅತ್ಯಂತ ಭವಿಷ್ಯವುಳ್ಳ ನಟನೆಂದರೆ ಸುಶಾಂತ್ ಸಿಂಗ್ ರಜಪೂತ್. ಇದು ಸುಶಾಂತ್ ವಿರುದ್ಧ ಸದಾ ಟೀಕೆ, ವ್ಯಂಗ್ಯ ಮಾಡುತ್ತಿದ್ದ ಆರೋಪಕ್ಕೆ ತುತ್ತಾಗಿರುವ ನಿರ್ಮಾಪಕ ಕರಣ್ ಜೋಹರ್ ಎದುರು ನಟ ಇಮ್ರಾನ್ ಹಶ್ಮಿ ಆಡಿದ್ದ ಮಾತು.

  Recommended Video

  Sushant Singh's case should be handed over to CBI says Roopa Ganguly | Sushanth Singh

  ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಇಮ್ರಾನ್ ಹಶ್ಮಿ ಈಗಿನ ಸಮಕಾಲೀನ ನಟರ ಹೋಲಿಕೆಯನ್ನು ಸುಶಾಂತ್ ಸಿಂಗ್ ಅವರನ್ನು ಟಾಪ್‌ನಲ್ಲಿ ಇರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸುಶಾಂತ್ ಸಾವಿನ ಬಳಿಕ ಇಂತಹ ಅನೇಕ ವಿಡಿಯೋಗಳು ಹರಿದಾಡುತ್ತಿವೆ.

  ಸುಶಾಂತ್ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿ: ನಟಿ, ಸಂಸದೆ ರೂಪಾ ಗಂಗೂಲಿ ಒತ್ತಾಯಸುಶಾಂತ್ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿ: ನಟಿ, ಸಂಸದೆ ರೂಪಾ ಗಂಗೂಲಿ ಒತ್ತಾಯ

  ಅನೇಕ ಶೋಗಳಲ್ಲಿ ಕರಣ್ ಜೋಹರ್, ಸುಶಾಂತ್ ಹೆಸರನ್ನು ಆಯ್ಕೆಯಲ್ಲಿ ಪ್ರಸ್ತಾಪಿಸಿದ್ದರು. ಕೆಲವು ಕಲಾವಿದರು ಸುಶಾಂತ್ ಹೆಸರನ್ನು ಕೊನೆಯಲ್ಲಿ ಹೇಳಿದ್ದರೆ, ಇನ್ನು ಕೆಲವರು ಸುಶಾಂತ್ ಬಗ್ಗೆ ಗೊತ್ತಿಲ್ಲ ಎಂದಿದ್ದರು. ಈ ವಿಡಿಯೋಗಳೂ ವೈರಲ್ ಆಗುತ್ತಿವೆ. ಮುಂದೆ ಓದಿ...

  ಸುಶಾಂತ್ ಹೆಸರು ಹೇಳಿದ್ದ ಇಮ್ರಾನ್

  ಸುಶಾಂತ್ ಹೆಸರು ಹೇಳಿದ್ದ ಇಮ್ರಾನ್

  ಕಾಫಿ ವಿತ್ ಕರಣ್ ಕಾರ್ಯಕ್ರಮದ ವಿಡಿಯೋದ ತುಣುಕಿನಲ್ಲಿ ನಿರೂಪಕ ಕರಣ್ ಜೋಹರ್, ನಟರ ಪ್ರತಿಭೆಗೆ ಅನುಗುಣವಾಗಿ ಕೆಲವು ನಟರ ಹೆಸರನ್ನು ಅನುಕ್ರಮವಾಗಿ ಹೇಳುವಂತೆ ಇಮ್ರಾನ್ ಹಶ್ಮಿಗೆ ತಿಳಿಸುತ್ತಾರೆ.ಈ ಆಯ್ಕೆಗಳಲ್ಲಿ ಸುಶಾಂತ್ ಸಿಂಗ್, ಅರ್ಜುನ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್, ಆಯುಷ್ಮಾನ್ ಖುರಾನಾ ಮತ್ತು ಆದಿತ್ಯ ರಾಯ್ ಕಪೂರ್ ಹೆಸರನ್ನು ಉಲ್ಲೇಖಿಸಿದ್ದರು. ಅದಕ್ಕೆ ಇಮ್ರಾನ್ ತಕ್ಷಣವೇ 'ಸುಶಾಂತ್, ವರುಣ್ ಮತ್ತು ಸಿದ್ಧಾರ್ಥ್' ಎಂದಷ್ಟೇ ಹೇಳಿ ಉಳಿದ ಹೆಸರುಗಳನ್ನು ಬಿಟ್ಟಿದ್ದರು.

  ಸುಶಾಂತ್ ಅಭಿಮಾನಿಗಳ ಮೆಚ್ಚುಗೆ

  ಸುಶಾಂತ್ ಅಭಿಮಾನಿಗಳ ಮೆಚ್ಚುಗೆ

  ಈ ವಿಡಿಯೋವನ್ನು ಸುಶಾಂತ್ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರರಂಗ ಕೆಲವು ವ್ಯಕ್ತಿಗಳ ಸ್ವಜನಪಕ್ಷಪಾತದಲ್ಲಿ ನಲುಗುತ್ತಿದೆ. ಆದರೆ ನಿಜವಾದ ಕಲಾವಿದರು ನೈಜ ಪ್ರತಿಭೆಗಳನ್ನೇ ಗುರುತಿಸುತ್ತಾರೆ. ಇಮ್ರಾನ್ ಹಶ್ಮಿ ಪರಿಶುದ್ಧ ಹೃದಯದ ವ್ಯಕ್ತಿ. ಹಾಗಾಗಿ ವಾಸ್ತವವನ್ನೇ ಹೇಳಿದ್ದರು ಎಂದು ಅನೇಕರು ಹೇಳಿದ್ದರು.

   ರಿಯಾ ಚಕ್ರಬೊರ್ತಿ ಕುರಿತು ತಮಗೆ ಗೊತ್ತೇ ಇಲ್ಲ ಎಂದ ಸುಶಾಂತ್ ಸಿಂಗ್ ರಜಪೂತ್ ತಂದೆ ರಿಯಾ ಚಕ್ರಬೊರ್ತಿ ಕುರಿತು ತಮಗೆ ಗೊತ್ತೇ ಇಲ್ಲ ಎಂದ ಸುಶಾಂತ್ ಸಿಂಗ್ ರಜಪೂತ್ ತಂದೆ

  ಕೃತಿ ಸನೊನ್ ಕೂಡ ಹೇಳಿದ್ದರು...

  ಕೃತಿ ಸನೊನ್ ಕೂಡ ಹೇಳಿದ್ದರು...

  ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಈ ಪ್ರಶ್ನೆಗಳನ್ನು ಇತರೆ ಅನೇಕ ಸೆಲೆಬ್ರಿಟಿಗಳಿಗೆ ಕೇಳಿದ್ದರು. ಇವುಗಳಲ್ಲಿ ಸುಶಾಂತ್ ಸಿಂಗ್ ಹೆಸರು ಸಾಮಾನ್ಯವಾಗಿ ಇರುತ್ತಿತ್ತು. ಆಲಿಯಾ ಭಟ್ ಮತ್ತು ಸೋನಮ್ ಕಪೂರ್, ಸುಶಾಂತ್ ಹೆಸರನ್ನು ಪರಿಗಣಿಸಿರಲಿಲ್ಲ. ಆದರೆ ಸುಶಾಂತ್ ಅವರಿಗೆ ಆಪ್ತರಾಗಿದ್ದ ಕೃತಿ ಸನೊನ್, ಸುಶಾಂತ್ ಹೆಸರನ್ನು ಮೊದಲಿಗೆ ಪರಿಗಣಿಸಿದ್ದ ವಿಡಿಯೋ ಕೂಡ ಹರಿದಾಡುತ್ತಿದೆ.

  ಸುಶಾಂತ್ ಎಂದರೆ ಇಷ್ಟ ಎಂದಿದ್ದ ದೀಪಿಕಾ

  ಸುಶಾಂತ್ ಎಂದರೆ ಇಷ್ಟ ಎಂದಿದ್ದ ದೀಪಿಕಾ

  ದೀಪಿಕಾ ಪಡುಕೋಣೆ ಕೂಡ ಸಂದರ್ಶನವೊಂದರಲ್ಲಿ ಇತ್ತೀಚಿನ ನಟರಲ್ಲಿ ಯಾರು ಇಷ್ಟವಾಗುತ್ತಾರೆ ಎಂಬ ಪ್ರಶ್ನೆಗೆ, 'ನನಗೆ ಸುಶಾಂತ್ ಬಹಳ ಇಷ್ಟವಾಗುತ್ತಾರೆ' ಎಂದಿದ್ದರು. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಇಮ್ರಾನ್ ಹಶ್ಮಿ ಮಾತನಾಡುವ ವಿಡಿಯೋವನ್ನು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ. ಮೂರು ಮಿಲಿಯನ್‌ಗೂ ವೀವ್ಸ್ ಸಿಕ್ಕಿದೆ.

  ಸುಶಾಂತ್ ಸಿಂಗ್ ಸಾವಿನ ಕುರಿತು ಮತ್ತೊಂದು ಮರಣೋತ್ತರ ಪರೀಕ್ಷೆ: ವರದಿಯಲ್ಲಿ ಏನಿದೆ?ಸುಶಾಂತ್ ಸಿಂಗ್ ಸಾವಿನ ಕುರಿತು ಮತ್ತೊಂದು ಮರಣೋತ್ತರ ಪರೀಕ್ಷೆ: ವರದಿಯಲ್ಲಿ ಏನಿದೆ?

  English summary
  Emraan Hashmi in Kofee with Karan show praised Sushant Singh Rajput who has brightest future in bollywood.
  Saturday, June 27, 2020, 17:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X