ಬಾಲಿವುಡ್‌ಗೆ ಕಾಲಿಟ್ಟ ತಮಿಳು ನಟ ವಿಜಯ್ ಮತ್ತು ವಿಜಯ್ ಸೇತುಪತಿ

ತಮಿಳು ನಟ ವಿಜಯ್ ನಟಿಸುತ್ತಿರುವ 'ಮಾಸ್ಟರ್' ಸಿನಿಮಾದ ಬಿಡುಗಡೆ ಬಗ್ಗೆ ಕುತೂಹಲ ಹೆಚ್ಚಿದೆ. ಕ್ರಿಸ್‌ಮಸ್ ಆಯ್ತು ಈಗ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ತೆರೆಗೆ ಬರಬಹುದು ಎಂದು ಹೇಳಲಾಗುತ್ತಿದೆ. ಆದ್ರೆ, ಬಿಡುಗಡೆಯ ಬಗ್ಗೆ ಚಿತ್ರತಂಡ ಇನ್ನು ಖಚಿತ ಪಡಿಸಿಲ್ಲ.

ಇದೀಗ, ಬಾಲಿವುಡ್‌ನಿಂದ ಹೊಸ ಸುದ್ದಿ ಹೊರಬಿದ್ದಿದೆ. ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೆ ನಟಿಸುತ್ತಿರುವ ಮಾಸ್ಟರ್ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

'ಮಾಸ್ಟರ್' ಚಿತ್ರವನ್ನು ಹಿಂದಿ ಹಾಗೂ ತಮಿಳಿನಲ್ಲಿ ಒಂದೇ ದಿನ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ. ಹಿಂದಿಯಲ್ಲಿ ಚಿತ್ರಕ್ಕೆ 'ವಿಜಯ್ ದಿ ಮಾಸ್ಟರ್' ಎಂದು ಹೆಸರಿಡಲಾಗಿದೆ.

vijay-master-movie-has-been-dubbed-in-hindi

ಅಂದ್ಹಾಗೆ, ಮಾಸ್ಟರ್ ಸಿನಿಮಾ ತಮಿಳಿನಲ್ಲಿ ಸೆನ್ಸಾರ್ ಮುಗಿಸಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಹಿಂದಿಯಲ್ಲಿ ಮುಂದಿನ ವಾರ ಸೆನ್ಸಾರ್ ಆಗಲಿದೆ.

ಬಾಲಿವುಡ್ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿರುವ ಪ್ರಕಾರ, ಮಾಸ್ಟರ್ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗುತ್ತಿದೆ. ಹಾಗೂ ಜನವರಿ ತಿಂಗಳಲ್ಲಿ ರಿಲೀಸ್ ಆಗಲಿದೆ. ಆದ್ರೆ, ನಿಖರವಾದ ದಿನಾಂಕ ಪಕ್ಕಾ ಆಗಿಲ್ಲ.

ಲೋಕೇಶ್ ಕನಕರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮಾಳವಿಕಾ ಮೋಹನ್ ನಾಯಕಿಯಾಗಿ ನಟಿಸಿದ್ದಾರೆ. ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದರಿಂದ ಮಾಸ್ಟರ್ ಬಗ್ಗೆ ನಿರೀಕ್ಷೆ ಹೆಚ್ಚಿದೆ.

More from Filmibeat

English summary
Much awaited Tamil film Master starring Vijay and Vijay Sethupathi has been dubbed in Hindi. Hindi title 'Vijay The Master'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X