»   » ಬಾಲಿವುಡ್ ನಲ್ಲಿ ಕಂಗನಾ ರನೌತ್ ಹೊಸ ಕಿರಿಕ್!

ಬಾಲಿವುಡ್ ನಲ್ಲಿ ಕಂಗನಾ ರನೌತ್ ಹೊಸ ಕಿರಿಕ್!

Posted By:
Subscribe to Filmibeat Kannada

ಬಾಲಿವುಡ್ ನಟಿ ಕಂಗನಾ ತಮ್ಮ ಅದ್ಭುತ ಅಭಿನಯದ ಮೂಲಕ ಎಷ್ಟು ಸುದ್ದಿಯಾಗಿರುತ್ತಾರೋ ವಿವಾದಗಳಲ್ಲೂ ಅಷ್ಟೇ ಸುದ್ದಿಯಲ್ಲಿರುತ್ತಾರೆ. ಕಿರಿಕ್ ಹಿಂದೆ ಕಂಗನಾ ಹೋಗ್ತಾಳ ಅಥವಾ ಕಂಗನಾ ಹಿಂದೆನೇ ಕಿರಿಕ್ ಬರುತ್ತಾ ಗೊತ್ತಿಲ್ಲ. ಆದ್ರೆ, ಒಂದಲ್ಲ ಗಲಾಟೆಯಲ್ಲಿ ಬಿಟೌನ್ ಕ್ವೀನ್ ಹೆಸರು ಮಾತ್ರ ಇದ್ದೇ ಇರುತ್ತೆ.

ನಟ ಹೃತಿಕ್ ರೋಷನ್ ಜತೆಗಿನ ಪ್ರೀತಿ ವಿಚಾರದಲ್ಲಿ ಬಹಿರಂಗವಾಗಿಯೇ ಗಲಾಟೆ ಮಾಡಿಕೊಂಡು ದೇಶದ ಗಮನ ಸೆಳೆದಿದ್ದರು. ಇನ್ನು ಇತ್ತೀಚೇಗಷ್ಟೇ ಚಿತ್ರರಂಗದಲ್ಲಿ ತಾರತಮ್ಯ ಇದೆ ಎಂಬ ವಿಷಯ ಪ್ರಸ್ತಾಪಿಸಿ, ಅದಕ್ಕೆ ನಿರ್ಮಾಪಕ ಕರಣ್ ಜೋಹರ್ ಕಾರಣ ಎಂಬ ಹೇಳಿಕೆ ನೀಡಿ ಬಾಲಿವುಡ್ ಮಂದಿಗೆ ಆಹಾರವಾಗಿದ್ದರು.['ತೇಜು'ಗೋಸ್ಕರ 31 ರ 'ಕ್ವೀನ್' ಕಂಗನಾ 80 ರ ಮುದುಕಿ ಆಗ್ಬಿಟ್ರು.!]

ಈಗ, ತಮ್ಮ ಚಿತ್ರದ ಬರಹಗಾರನ ಜೊತೆಯೇ ಜಗಳ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಕಂಗನಾಳ ಹೊಸ ಕಿರಿಕ್ ಏನು? ಆ ಬರಹಗಾರ ಯಾರು? ಮುಂದೆ ಓದಿ.....

ಕಂಗನಾ ಕಿರಿಕ್ ಗೆ ಕಾರಣ 'ಸಿಮ್ರಾನ್'

ಕಂಗನಾ ಸುತ್ತಾ ವಿವಾದ ಸುತ್ತಿಕೊಳ್ಳಲು ಕಾರಣ ಸ್ವತಃ ಕಂಗನಾ ಅಭಿನಯದ 'ಸಿಮ್ರಾನ್' ಚಿತ್ರ. ಇತ್ತಿಚೇಗಷ್ಟೇ 'ಸಿಮ್ರಾನ್' ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಕಂಗನಾ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದ್ರೆ, ಅಷ್ಟರಲ್ಲೇ ಹೊಸ ಕಿರಿಕ್ ಮಾಡಿಕೊಂಡಿದ್ದಾರೆ.[ಟೀಸರ್: 'ಕ್ವೀನ್' ಕಂಗನಾಳ ಹೊಸ ಅವತಾರ 'ಸಿಮ್ರಾನ್']

ಕಥೆ ವಿಚಾರಕ್ಕೆ ಜಗಳ

ಅಸಲಿಗೆ, ‘ಸಿಮ್ರಾನ್' ಚಿತ್ರಕ್ಕೆ ಕಥೆ ಬರೆದಿರುವುದು ಅಪೂರ್ವ ಅಸ್ರಾನಿ. ಆದರೆ ಮೊನ್ನೆ ಹೊಸದಾಗಿ ಬಂದ ಪೋಸ್ಟರ್​ನಲ್ಲಿ ಹೆಚ್ಚುವರಿ ಕಥೆ ಮತ್ತು ಸಂಭಾಷಣೆ ಬರೆದಿರುವುದು ಕಂಗನಾ ಎಂದು ಕ್ರೆಡಿಟ್ ನೀಡಲಾಗಿತ್ತು. ಇದರಿಂದ ಅಪೂರ್ವ ಅಸ್ರಾನಿ ಬೇಸರಗೊಂಡಿದ್ದಾರೆ. ನಾನು ಕಥೆ ಬರೆದಿರುವುದು ಎಂದು ಮುನಿಸಿಕೊಂಡಿದ್ದಾರೆ.[vರಾಣಿ ಲಕ್ಷ್ಮೀಬಾಯಿ ಅವತಾರದಲ್ಲಿ 'ಕ್ವೀನ್' ಕಂಗನಾ: ಫೋಟೋ ವೈರಲ್]

ಕಂಗನಾ ಕಥೆ ಅಭಿವೃದ್ದಿ ಮಾಡಿದ್ದಂತೆ!

ಇನ್ನು 'ಸಿಮ್ರಾನ್' ಚಿತ್ರದ ಕಥೆ ಬಗ್ಗೆ ಮಾತನಾಡುವ ಕಂಗನಾ ‘ನಿರ್ದೇಶಕರು ಮೊದಲು ನನಗೆ ಬಂದು ಕಥೆ ಹೇಳಿದಾಗ ಅದು ಕೇವಲ ಒನ್​ಲೈನ್ ಮಾತ್ರ ಆಗಿತ್ತು. ಹೆಚ್ಚು ವಿವರಗಳಿರಲಿಲ್ಲ. ಡಾರ್ಕ್ ಥ್ರಿಲ್ಲರ್ ಪ್ರಕಾರಕ್ಕೆ ಸೇರುವ ಆ ಒಂದೆಳೆಯನ್ನು ನಾನು ಕಾಮಿಡಿ ಪ್ರಕಾರಕ್ಕೆ ಬದಲಾಯಿಸಿದೆ' ಎನ್ನುತ್ತಾರೆ.

ಕಂಗನಾ ಸುಳ್ಳು ಹೇಳುತ್ತಿದ್ದಾರಂತೆ

ಇನ್ನು ಮತ್ತೊಂದೆಡೆ 'ಸಿಮ್ರಾನ್' ಕಥೆ ವಿಚಾರಕ್ಕೆ ಸಂಬಂಧಿಸಿದಂತೆ ‘ಕಂಗನಾ ಸುಳ್ಳು ಹೇಳುತ್ತಿದ್ದಾರೆ. ನಾನು ಬರೆದ ಕಥೆಯನ್ನು ತಮ್ಮದು ಎಂದು ವಾದ ಮಂಡಿಸುತ್ತಿದ್ದಾರೆ. ಇದರಿಂದ ನನ್ನ ಬಹುದಿನಗಳ ಕೆಲಸಕ್ಕೆ ಅಗೌರವ ತೋರಿಸಿದ್ದಾರೆ. ಅವರ ಅಭಿಮಾನಿಗಳ ಟೀಕೆಗೆ ಸಿದ್ಧನಾಗಿಯೇ ನಾನು ಇದನ್ನು ಬಹಿರಂಗ ಪಡಿಸುತ್ತಿದ್ದೇನೆ' ಎಂದು ಅಪೂರ್ವ ಅಸ್ರಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಜವಾಗಲೂ ಕಥೆ ಯಾರದ್ದು?

ಪೋಸ್ಟರ್ ಹಾಗೂ ಟೀಸರ್ ನಲ್ಲಿ ಇಬ್ಬರು ಹೆಸರು ಇದೆ. ಆದ್ರೆ, ಈ ಇಬ್ಬರಲ್ಲಿ 'ಸಿಮ್ರಾನ್' ಕಥೆ ಯಾರದ್ದು ಎಂದು ಅನುಮಾನ ಮೂಡಿಸಿದೆ. ಇವರಿಬ್ಬರಲ್ಲಿ ಯಾರು ಸುಳ್ಳು, ಯಾರು ನಿಜ ಹೇಳುತ್ತಿದ್ದಾರೆ ಎಂಬುದು ಗೊತ್ತಾಗಬೇಕಿದೆ.

English summary
The all-out war between writer-editor Apurva Asrani and Kangana Ranaut-Hansal Mehta over the writing credits of Mehta’s new film Simran

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada