For Quick Alerts
  ALLOW NOTIFICATIONS  
  For Daily Alerts

  'ತೇಜು'ಗೋಸ್ಕರ 31 ರ 'ಕ್ವೀನ್' ಕಂಗನಾ 80 ರ ಮುದುಕಿ ಆಗ್ಬಿಟ್ರು.!

  By Suneel
  |

  ಕಂಗನಾ ರನೌತ್ ಅಭಿನಯದ 'ಸಿಮ್ರಾನ್' ಚಿತ್ರದ ಟೀಸರ್ ಮೊನ್ನೆಯಷ್ಟೆ ಬಿಡುಗಡೆ ಆಗಿ ಬಾಲಿವುಡ್ ಅಂಗಳದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಕಾರಣ ಈ ಚಿತ್ರದ ಟೀಸರ್ ಕಂಗನಾಳ 'ಕ್ವೀನ್' ಚಿತ್ರಕ್ಕಿಂತ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವ ಭರವಸೆ ಮೂಡಿಸಿದೆ. ಹೀಗಿರುವಾಗಲೇ ಕಂಗನಾ ಮತ್ತೊಂದು ಕುತೂಹಲಕಾರಿ ಮಾಹಿತಿ ಹೊರಹಾಕಿದ್ದಾರೆ.[ಟೀಸರ್: 'ಕ್ವೀನ್' ಕಂಗನಾಳ ಹೊಸ ಅವತಾರ 'ಸಿಮ್ರಾನ್']

  ಬಾಲಿವುಡ್ ನಟಿ 'ಕ್ವೀನ್' ಕಂಗನಾಳ ಬಹು ದಿನದ ಕನಸೊಂದು ಈಡೇರುವ ಸಮಯ ಬಂದಿದ್ದು, ಸದ್ಯದಲ್ಲೇ ಆ ಕನಸು ನನಸಾಗಲಿದೆಯಂತೆ. ಮುಂದೆ ಓದಿರಿ

  ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ಕಂಗನಾ ರನೌತ್

  ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ಕಂಗನಾ ರನೌತ್

  'ಕ್ವೀನ್' ಕಂಗನಾ ಬಹುದಿನಗಳಿಂದ ನಿರ್ದೇಶಕಿ ಆಗಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಬೇಕು ಎಂದುಕೊಂಡಿದ್ದರಂತೆ. ಆ ಕನಸು ನನಸಾಗುವ ದಿನ ಹತ್ತಿರಕ್ಕೆ ಬಂದಿದ್ದು, ಸದ್ಯದಲ್ಲೇ ಚಿತ್ರ ನಿರ್ದೇಶನ ಮಾಡಲಿದ್ದಾರಂತೆ.

  ವಿಶೇಷ ಪಾತ್ರದಲ್ಲಿ ಕಂಗನಾ

  ವಿಶೇಷ ಪಾತ್ರದಲ್ಲಿ ಕಂಗನಾ

  ಕಂಗನಾ ರನೌತ್ ತಾವು ನಿರ್ದೇಶನ ಮಾಡಲಿರುವ ಚೊಚ್ಚಲ ಚಿತ್ರದಲ್ಲಿ ಅವರೇ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ಅದೂ 80 ವರ್ಷದ ಮುದುಕಿ ಪಾತ್ರದಲ್ಲಿ ಕಂಗನಾ ಬಣ್ಣಹಚ್ಚಲಿದ್ದಾರೆ.

  ಯಾವುದು ಆ ಸಿನಿಮಾ?

  ಯಾವುದು ಆ ಸಿನಿಮಾ?

  ಕಂಗನಾ ರನೌತ್ ನಿರ್ದೇಶನ ಜೊತೆಗೆ ಅಭಿನಯಿಸಲಿರುವ ಚಿತ್ರದ ಹೆಸರು 'ತೇಜು(Teju)'. ಈ ಚಿತ್ರ ಸಂಪೂರ್ಣವಾಗಿ ಪ್ರತಿಯೊಬ್ಬ ವಯಸ್ಸಾದವರ ಕುರಿತದ್ದಾಗಿದ್ದು, 31 ವರ್ಷದ ಕಂಗನಾ ರನೌತ್ 80 ವರ್ಷದ ಮುದುಕಿ ಪಾತ್ರದಲ್ಲಿ ನಟಿಸಲಿದ್ದಾರೆ.

  'ತೇಜು'ಗೆ ಕಂಗನಾ ಸ್ಟೋರಿ

  'ತೇಜು'ಗೆ ಕಂಗನಾ ಸ್ಟೋರಿ

  'ತೇಜು' ಚಿತ್ರಕ್ಕಾಗಿ ಕಂಗನಾ ರನೌತ್ ರವರೇ ಸ್ಟೋರಿ ಬರೆದಿದ್ದು, ತಮ್ಮ ಹೋಮ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಿದ್ದಾರೆ.

  ಚಿತ್ರೀಕರಣ ಯಾವಾಗ?

  ಚಿತ್ರೀಕರಣ ಯಾವಾಗ?

  ಈ ಚಿತ್ರವನ್ನು ಕಂಗನಾ ತಮ್ಮ ಅಭಿನಯದ 'ಮಣಿಕರ್ಣಿಕಾ - ದಿ ಕ್ವೀನ್ ಆಫ್ ಝಾನ್ಸಿ' ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ನಂತರ ಡಿಸೆಂಬರ್ ನಿಂದ 'ತೇಜು(Teju)' ಶೂಟಿಂಗ್ ಶುರುಮಾಡಲಿದ್ದಾರೆ. ಅದು ಹೆಚ್ಚಾಗಿ ಹಿಮಾಲಯ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.[ರಾಣಿ ಲಕ್ಷ್ಮೀಬಾಯಿ ಅವತಾರದಲ್ಲಿ 'ಕ್ವೀನ್' ಕಂಗನಾ: ಫೋಟೋ ವೈರಲ್]

  English summary
  Actress Kangana Ranaut has announced that she is turning director with her home production 'Teju' in which she will play as 80-year-old woman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X