»   » ಕಿಂಗ್ ಖಾನ್ ಪಂಚಿಂಗ್ ಡೈಲಾಗ್, ರಾಯೀಸ್ ಟೀಸರ್ ಸೂಪರ್

ಕಿಂಗ್ ಖಾನ್ ಪಂಚಿಂಗ್ ಡೈಲಾಗ್, ರಾಯೀಸ್ ಟೀಸರ್ ಸೂಪರ್

Posted By:
Subscribe to Filmibeat Kannada

ಸಲ್ಮಾನ್ ಖಾನ್ 'ರಂಜಾನ್' ಸ್ಪೆಷಲ್ ಅಂತ ಬಿಟೌನ್ ಮಂದಿಗೆ ತಮ್ಮ ಬಹುನಿರೀಕ್ಷಿತ ಚಿತ್ರ 'ಭಜರಂಗಿ ಭಾಯಿಜಾನ್' ತೆರೆಗೆ ತಂದು ಗಿಫ್ಟ್ ಮಾಡಿದ್ರೆ. ಕಿಂಗ್ ಖಾನ್ ಶಾರುಖ್ ಅವರು 'ಈದ್' ಗೆ ತಮ್ಮ ಹೊಸ ಚಿತ್ರ 'ರಾಯೀಸ್' ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ರೆಡ್ಡ್ ಚಿಲ್ಲೀಸ್ ಹಾಗೂ ಎಕ್ಸೆಲ್ ಎಂರ್ಟಟೈನ್ಮೆಂಟ್ ಅರ್ಪಿಸುವ, ಶಾರುಖ್ ಖಾನ್ ಡಿಫರೆಂಟಾಗಿ ಕಾಣಿಸಿಕೊಂಡಿರುವ 'ರಾಯೀಸ್' ಚಿತ್ರದ ಫಸ್ಟ್ ಲುಕ್ ಟೀಸರ್ ನೀವೆ ನೋಡಿ....

Watch Hindi movie 'Raees' official Teaser

ನಿನ್ನೆ ತಾನೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿರುವ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಹಾಗೂ ಪ್ರಿಯಾಂಕ ಚೋಪ್ರಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ಬಾಜಿರಾವ್ ಮಸ್ತಾನಿ' ಚಿತ್ರದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ 'ರಾಯೀಸ್' ಟೀಸರ್ ಬಿಡುಗಡೆಯಾಗಿದ್ದು, ಬಿಟೌನ್ ಮಂದಿಗೆ ಎಲ್ಲವೂ 'ಈದ್' ಸ್ಪೆಷಲ್ ಗಿಫ್ಟ್ ಆದಂತಿದೆ.

'ಅಮ್ಮಿಜಾನ್ ಕೆಹೆತೀಥಿ, ಕೋಯಿ ದಂಧಾ ಚೋಟಾ ನಹೀ ಹೋತಾ, ಓರ್ ದಂಧೆ ಸೇ ಬಡಾ ಕೋಯಿ ಧರ್ಮ ನಹೀ ಹೋತಾ, ಅಭಿ ಎ ಹೀ ಮೇರಾ ಕಲ್ಮಾ ಹೇ, ಓರ್ ಎ ಹೀ ಮೇರಾ ಕಸಮ್' ಅಂತ ಶಾರುಖ್ ಡೈಲಾಗ್ ಗಳು ಟೀಸರ್ ನಲ್ಲಿ ಸಖತ್ ಹೈಲೈಟ್ ಆಗುತ್ತವೆ.

ರಾಹುಲ್ ಡೋಲಾಕೀಯಾ ಆಕ್ಷನ್-ಕಟ್ ಹೇಳಿರುವ 'ರಾಯೀಸ್' ಚಿತ್ರದಲ್ಲಿ ಶಾರುಖ್ ಗೆ ಫೈಟ್ ಮಾಸ್ಟರ್ ಆಗಿರೋದು ನಮ್ಮ ಕನ್ನಡದ ಫೈಟ್ ಮಾಸ್ಟರ್ ರವಿವರ್ಮ. ಬಾಲಿವುಡ್ ಸ್ಟಾರ್ ಗಳಿಗೆ ನಮ್ಮ ಕನ್ನಡಿಗರು ಕೆಲಸ ಮಾಡುವುದು ನಮಗೆ ಹೆಮ್ಮೆಯ ಸಂಗತಿ ಅಲ್ವಾ.

ಎಕ್ಸೆಲ್ ಎಂರ್ಟಟೈನ್ಮೆಂಟ್ ಪ್ರೊಡಕ್ಷನ್ ಅಡಿಯಲ್ಲಿ ಬರುತ್ತಿರುವ 'ರಾಯೀಸ್' ಚಿತ್ರದಲ್ಲಿ 'ಕಿಂಗ್ ಖಾನ್' ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಪಾಕಿಸ್ತಾನಿ ನಟಿ ಮಹೀರಾ ಖಾನ್, ಶಾರುಖ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದ್ದು, ಚಿತ್ರ ಹೇಗಿದೆ ಅಂತ ತೆರೆ ಕಂಡ ಮೇಲೆ ನೋಡಬೇಕಿದೆ.

English summary
Hindi movie 'Raees' official Teaser is released, 'Raees' features Hindi actor Shah Rukh Khan, actress Mahira Khan in the lead role, The movie is directed by Rahul Dholakia.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada