»   » 3 ಭಾಷೆಗಳಿಗೆ ಡಬ್ ಆಗಲಿದೆ ಶ್ರೀದೇವಿ ಅಭಿನಯದ 'ಮಾಮ್'

3 ಭಾಷೆಗಳಿಗೆ ಡಬ್ ಆಗಲಿದೆ ಶ್ರೀದೇವಿ ಅಭಿನಯದ 'ಮಾಮ್'

Posted By:
Subscribe to Filmibeat Kannada

ಬಾಲಿವುಡ್ ನ ಹಿರಿಯ ನಟಿ ಶ್ರೀದೇವಿ ಅಭಿನಯದಲ್ಲಿ ಮೂಡಿಬರುತ್ತಿರುವ 'ಮಾಮ್' ಚಿತ್ರ, ಪೋಸ್ಟರ್ ಮತ್ತು ಟೀಸರ್ ನಿಂದ ಬಾಲಿವುಡ್ ಅಂಗಳದಲ್ಲಿ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಿಸಿದೆ. ಇನ್ನೂ ಸಹ ಚಿತ್ರೀಕರಣ ಹಂತದಲ್ಲಿರುವ 'ಮಾಮ್' ಬಗ್ಗೆ ಈಗ ಹೊಸ ಸುದ್ದಿಯೊಂದು ಕೇಳಿಬಂದಿದೆ.[ಬಾಲಿವುಡ್ ನಲ್ಲಿ 'ಮಾಮ್' ಆಗಿ ಶ್ರೀದೇವಿ ಫಸ್ಟ್ ಲುಕ್ ಹೇಗಿದೆ ನೋಡಿದ್ರಾ?]

ಹಿಂದಿ ಭಾಷೆಯಲ್ಲಿ ನಿರ್ಮಾಣ ಆಗುತ್ತಿರುವ 'ಮಾಮ್' ಚಿತ್ರವನ್ನು ಸ್ವತಃ ಶ್ರೀದೇವಿ ಅವರು ಇತರೆ ಮೂರು ಭಾಷೆಗಳಿಗೆ ಡಬ್ ಮಾಡಲಿದ್ದಾರಂತೆ. ಬಾಲಿವುಡ್ ಮಾತ್ರವಲ್ಲದೇ ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್, ಮಾಲಿವುಡ್ ನಲ್ಲಿಯೂ ಅಭಿನಯಿಸಿರುವ ಶ್ರೀದೇವಿ ಅವರು 'ಮಾಮ್' ಚಿತ್ರವನ್ನು ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗೆ ಡಬ್ ಮಾಡಲು ನಿರ್ಧರಿಸಿದ್ದಾರಂತೆ.

Sridevi starrer 'Mom' movie will dub in three languages

'ಮಾಮ್' ಶ್ರೀದೇವಿ ಅವರ 300ನೇ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ತಾಯಿ ಪಾತ್ರ ನಿರ್ವಹಿಸಿದ್ದಾರೆ. ಇವರಿಗೆ ಪಾಕಿಸ್ತಾನಿ ಚೈಲ್ಡ್ ಆಕ್ಟರ್ ಅದ್ನಾನ್ ಸಿದ್ದಿಕ್ಕಿ ಮತ್ತು ಸಜಲ್ ಅಲಿ ಮಕ್ಕಳ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ನವಾಜುದ್ದೀಣ್ ಸಿದ್ದಿಕ್ಕಿ, ಅಕ್ಷಯ್ ಖನ್ನಾ, ಅಭಿಮನ್ಯು ಸಿಂಗ್, ವಿಕಾಶ್ ವರ್ಮ ರವರು ಸೇರಿದಂತೆ ವಿಶೇಷ ತಾರಾಬಳಗ ಚಿತ್ರದಲ್ಲಿದೆ.[ಅಂತೂ ಇಂತೂ ಶ್ರೀದೇವಿ ಪುತ್ರಿ ಬಣ್ಣ ಹಚ್ಚುವುದು ಪಕ್ಕಾ ಆಯ್ತು.!]

ರವಿ ಉಡ್ಯಾವಾರ್ ನಿರ್ದೇಶನ ಇರುವ 'ಮಾಮ್' ಚಿತ್ರವನ್ನು ಬೋನಿ ಕಪೂರ್ ಸೇರಿದಂತೆ ಇತರೆ ಮೂವರು ನಿರ್ಮಾಪಕರು 'ಮ್ಯಾಡ್ ಫಿಲ್ಮ್ಸ್' ಮತ್ತು 'ಥರ್ಡ್ ಐ ಪಿಕ್ಚರ್ಸ್' ಪ್ರೊಡಕ್ಷನ್ ಕಂಪನಿ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎ.ಆರ್.ರೆಹಮಾನ್ ರವರ ಸಂಗೀತ ಸಂಯೋಜನೆ, ಅನಯ್ ಗೋಸ್ವಾಮಿ ಛಾಯಾಗ್ರಹಣ ಇದೆ.

'ಮಾಮ್' ಚಿತ್ರ ಜುಲೈ 7 ರಂದು ದೇಶದಾದ್ಯಂತ ತೆರೆಕಾಣಲಿದೆ.

English summary
Actress Sridevi Starrer 'Mom' movie will dub for three Languages. This Film is directing by Ravi Udyawar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada