For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರೋಷನ್ ಹಾಕಿದ ಚಾಲೆಂಜ್ ಗೆದ್ದ ರಣವೀರ

  By ಜೇಮ್ಸ್ ಮಾರ್ಟಿನ್
  |

  ಸದ್ಯಕ್ಕೆ ಬಾಲಿವುಡ್ ನಲ್ಲಿ ಸಕತ್ ಬಿಂದಾಸ್ ಆಗಿ ಚಿತ್ರದಿಂದ ಚಿತ್ರಕ್ಕೆ ಸ್ಟೈಲ್, ಮ್ಯಾನರೀಸಂ ಬದಲಾಯಿಸುತ್ತಾ ಹೆಂಗಳೆಯರ ಹೃದಯ ಗೆದ್ದ ಚೋರ ರಣವೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾನೆ. ಇಂಡಸ್ಟ್ರಿಯ ಸೀನಿಯರ್ ನಟ ಹೃತಿಕ್ ರೋಷನ್ ನೀಡಿದ ವಿಚಿತ್ರವಾದ ಚಾಲೆಂಜ್ ಸ್ವೀಕರಿಸಿ ವಿಶಿಷ್ಟವಾಗಿ ಪಂಥ ಗೆದ್ದಿದ್ದಾನೆ ರಣವೀರ್ ಸಿಂಗ್.

  ಸಂಚಾರ ದಟ್ಟಣೆ ಇರುವ ನಗರದ ಒಂದು ಸಾರ್ವಜನಿಕ ಸ್ಥಳದಲ್ಲಿ ಡ್ಯಾನ್ಸ್ ಮಾಡಬೇಕು ಎಂದು #bangbangdare ಟ್ಯಾಗ್ ಮೂಲಕ ರಣವೀರ್ ಗೆ ಹೃತಿಕ್ ರಣವೀಳ್ಯ ನೀಡಿದ್ದ. ಇದನ್ನು ಸ್ವೀಕರಿಸಿದ ರಣವೀರ್ 'ಕ್ರಿಶ್' ಚಿತ್ರದಲ್ಲಿ ಹೃತಿಕ್ ಹಾಕಿಕೊಂಡಿದ್ದ ಮಾಸ್ಕ್ ಡ್ರೆಸ್ ಹಾಕಿಕೊಂದು ಮುಂಬೈನ ಲಿಂಕಿಂಗ್ ರೋಡ್ ನಲ್ಲಿ ಪೀಕ್ ಅವರ್ಸ್ ನಲ್ಲಿ ರಸ್ತೆ ಮಧ್ಯೆ ನಿಂತು ಕುಣಿದಾಡಿದ್ದಾನೆ.[ರಣ್ವೀರ್ ಜೊತೆ ಡೇಟಿಂಗ್: ದೀಪಿಕಾ ಹೇಳಿದ್ದೇನು?]

  ಈ ರೀತಿ ಕ್ರೇಜಿ ಡ್ಯಾನ್ಸ್ ಮಾಡಲು ರಣವೀರ್ ಸಿಂಗ್ ಗೆ ಮಾತ್ರ ಸಾಧ್ಯ ಎಂದು ಬಾಲಿವುಡ್ ಮಂದಿ ಹೊಗಳಿದ್ದಾರೆ. ಸುಮಾರು ಒಂದೂವರೆ ನಿಮಿಷದ ಈ ವಿಡಿಯೋದಲ್ಲಿ ಕೊನೆಗೆ ಟ್ರಾಫಿಕ್ ಪೊಲೀಸ್ ಹತ್ತಿರಕ್ಕೆ ಬಂದು'ಸಾಕು ಸಾಕು ಡ್ಯಾನ್ಸ್ ನಿಲ್ಲಿಸು' ಎನ್ನುತ್ತಾರೆ.

  ರಾಮಲೀಲಾದ ತುಂಟ ರಣವೀರ್ ತನ್ನ ಡ್ಯಾನ್ಸ್ ಹಾಗೂ ಹೃತಿಕ್ ಚಾಲೆಂಜ್ ಬಗ್ಗೆ ಹೆಮ್ಮೆಯಿಂದ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾನೆ. ಸೋನಮ್ ಕಪೂರ್, ಆಲಿಯಾ ಭಟ್, ಹೂಮಾ ಖುರೇಷಿ, ಸಚಿನ್ ತೆಂಡೂಲ್ಕರ್ ಆಪ್ತ ಗೆಳೆಯ ಅತುಲ್ ಅವರು ರಣವೀರ್ ಗೆ ಥಮ್ಸ್ ಅಪ್ ಹೇಳಿದ್ದಾರೆ.

  ರಣವೀರ್ ಸಿಂಗ್ ಕಿಲ್ ದಿಲ್ ನಾಯಕ

  ರಣವೀರ್ ಸಿಂಗ್ ಕಿಲ್ ದಿಲ್ ನಾಯಕ

  ರಣವೀರ್ ಸಿಂಗ್ ಅವರು ಸದ್ಯಕ್ಕೆ ಪರಿಣಿತಿ ಛೋಪ್ರಾ ಜೊತೆಯಲ್ಲಿ ಕಿಲ್ ದಿಲ್ ಚಿತ್ರದಲ್ಲಿ ನಿರತರಾಗಿದ್ದಾರೆ. ನವೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

  ರಣವೀರನ ಸಾಹಸ ಮೆಚ್ಚಿದ ಹೃತಿಕ್ ರೋಷನ್

  ರಣವೀರನ ಸಾಹಸ ಮೆಚ್ಚಿದ ಹೃತಿಕ್ ರೋಷನ್ ಟ್ವೀಟ್ ಮಾಡಿ, ನನ್ನ ಹೃದಯ ಕದ್ದು ಬಿಟ್ಟೆ ಎಂದಿದ್ದಾನೆ.

  ರಣವೀರ್ ಟ್ರಾಫಿಕ್ ಡ್ಯಾನ್ಸ್

  ರಣವೀರ್ ಟ್ರಾಫಿಕ್ ಡ್ಯಾನ್ಸ್ ವಿಡಿಯೋ ಇಲ್ಲಿದೆ ನೋಡಿ

  ರಣವೀರ್ ಬಗ್ಗೆ ತಾರೆಗಳ ಪ್ರತಿಕ್ರಿಯೆ

  ರಣವೀರ್ ಬಗ್ಗೆ ತಾರೆಗಳ ಪ್ರತಿಕ್ರಿಯೆ

  * ರಣವೀರ್ ಡ್ಯಾನ್ಸ್ ಬಗ್ಗೆ ನಟಿ ಅಲಿಯಾ ಭಟ್ Love it ಅಂದ್ರೆ,

  * ಸಚಿನ್ ತೆಂಡೂಲ್ಕರ್ ಅವರ ಆಪ್ತ ಗೆಳೆಯ ಜನಪ್ರಿಯ ಛಾಯಾಗ್ರಾಹಕ ಅತುಲ್ ಕಸ್ಬೇಕರ್ : Too Much Fun ಎಂದಿದ್ದಾರೆ.

  * ನಟಿ ಹ್ಯೂಮಾ ಖುರೇಷಿ: I died laughing INSANE! ಎಂದು ಪ್ರತಿಕ್ರಿಯಿಸಿದ್ದಾರೆ.

  ಬಹು ನಿರೀಕ್ಷಿತ ಬ್ಯಾಂಗ್ ಬ್ಯಾಂಗ್ ಚಿತ್ರ

  ಬಹು ನಿರೀಕ್ಷಿತ ಬ್ಯಾಂಗ್ ಬ್ಯಾಂಗ್ ಚಿತ್ರ

  ಫಾಕ್ಸ್ ಸ್ಟಾರ್ ಸ್ಟುಡಿಯೋ ನಿರ್ಮಾಣದ ಬಹು ನಿರೀಕ್ಷಿತ ಬ್ಯಾಂಗ್ ಬ್ಯಾಂಗ್ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿದ್ದು, ಸಿದ್ದಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಟಾಮ್ ಕ್ರೂಸ್ ನಟನೆಯ Knight and Day ಹಾಲಿವುಡ್ ಚಿತ್ರದ ರಿಮೇಕ್ ಇದಾಗಿದೆ.

  ಬ್ಯಾಂಗ್ ಬ್ಯಾಂಗ್ ಚಿತ್ರದ ಥೇಟರ್ ಟ್ರೇಲರ್ ನೋಡಿ

  ಬ್ಯಾಂಗ್ ಬ್ಯಾಂಗ್ ಚಿತ್ರದ ಥೇಟರ್ ಟ್ರೇಲರ್ ನೋಡಿ ಅಕ್ಟೋಬರ್ 24ಕ್ಕೆ ಚಿತ್ರಮಂದಿರಗಳಲ್ಲಿ ತಪ್ಪದೇ ವೀಕ್ಷಿಸಿ

  English summary
  Watch Video : Ranveer Singh is the only Bollywood actor who can think whacky. When Hrithik Roshan dared him in the #bangbangdare to dance in full public view in a busy street, Ranveer decided to add his style punch

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X