»   » 'ಐ ಲವ್ ಯು' ಎಂದಿದಕ್ಕೆ ಕತ್ರಿನಾಳಿಂದ ರಣಬೀರ್‌ಗೆ ಕಪಾಳ ಮೋಕ್ಷ

'ಐ ಲವ್ ಯು' ಎಂದಿದಕ್ಕೆ ಕತ್ರಿನಾಳಿಂದ ರಣಬೀರ್‌ಗೆ ಕಪಾಳ ಮೋಕ್ಷ

Posted By:
Subscribe to Filmibeat Kannada

ಹಾಲುಗೆನ್ನೆಯ ನಟಿ ಕತ್ರಿನಾ ಕೈಫ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಹ್ಯಾಂಡ್ಸಮ್ ಹಂಕ್ ರಣಬೀರ್ ಕಪೂರ್ ಇಬ್ಬರಿಗೂ ಮಾಜಿ ಪ್ರಿಯತಮೆ ಎಂಬ ಸುದ್ದಿ ಸಾಕಷ್ಟು ಬಾರಿ ಹರಿದಾಡಿದೆ. ಅಂದಹಾಗೆ ಕತ್ರಿನಾ ಬಗ್ಗೆ ಲೇಟೆಸ್ಟ್ ಸುದ್ದಿ ಏನಂದ್ರೆ ರಣಬೀರ್ 'ಐ ಲವ್ ಯು' ಹೇಳಿದ್ದಕ್ಕೆ ಬಾರ್ಬಿ ಡಾಲ್ ಕಪಾಳ ಮೋಕ್ಷ ಮಾಡಿ ಈಗ ಸುದ್ದಿಯಾಗಿದ್ದಾರೆ. ಈ ಬಗ್ಗೆ ಸೀರಿಯಸ್ ಆಗಿ ಆಲೋಚನೆ ಮಾಡುವ ಮುನ್ನ ಮುಂದೆ ಓದಿರಿ.[ಹಳೆ ಬಾಯ್‌ಫ್ರೆಂಡ್ ಸಹಾಯ ಕೇಳಿದ ಕತ್ರಿನಾ ಕೈಫ್]

ಸದ್ಯದಲ್ಲಿ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಇಬ್ಬರೂ ತಮ್ಮ ಅಭಿನಯದ 'ಜಗ್ಗ ಜಾಸೂಸ್' ಸಿನಿಮಾ ಪ್ರಮೋಶನ್ ಓಡಾಟದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಚಿತ್ರದ ಪ್ರಮೋಶನ್ ವೇಳೆ ರಣಬೀರ್ ಕಾರಿನೊಳಗೆ ಕುಳಿತಿದ್ದ ವೇಳೆ ತಮ್ಮ ಅಭಿಮಾನಿಗಳತ್ತ ಕೈಬೀಸುತ್ತಾ.. ಫ್ಲೈಯಿಂಗ್ ಕಿಸ್ ಸಹ ಕೊಡುತ್ತಿದ್ದರು. ಅದೇ ವೇಳೆ ಅಭಿಮಾನಿ ಒಬ್ಬರಿಗೆ ಪ್ರೀತಿಯಿಂದ 'ಐ ಲವ್ ಯು' ಎಂದಿದ್ದರು. ಆ ಸಂದರ್ಭದಲ್ಲಿ ಪಕ್ಕದಲ್ಲಿ ಕುಳಿತಿದ್ದ ಕತ್ರಿನಾ, ರಣಬೀರ್ ಯಾರೋ ಒಬ್ಬರಿಗೆ 'ಐ ಲವ್ ಯು' ಎಂದ ತಕ್ಷಣ ಕೈಯಲ್ಲಿ ಹಿಡಿದಿದ್ದ ವಸ್ತುವಿನಲ್ಲೇ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

watch video Katrina Kaif slapped Ranbir Kapoor for saying I Love You

ರಣಬೀರ್ ಕಪೂರ್ ಈ ವರೆಗೂ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡವರಲ್ಲ. ಆದರೆ ಇದೇ ಮೊದಲ ಬಾರಿಗೆ, ಅದೂ ಸಹ ಕತ್ರಿನಾ ಕಪಾಳ ಮೋಕ್ಷ ಮಾಡಿದ ವಿಡಿಯೋವನ್ನು ಆಕೆಯ ಇನ್‌ಸ್ಟಗ್ರಾಂ ಖಾತೆಯಲ್ಲಿಯೇ ರಣಬೀರ್ ಅಪ್‌ ಲೋಡ್‌ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಆದರೆ ಕತ್ರಿನಾ ಹೀಗೆ ಹೊಡೆದಿದ್ದು ಅವರು ಒಳ್ಳೇ ಮೂಡ್‌ ನಲ್ಲಿದ್ದರಿಂದಲೇ. ಈ ವಿಡಿಯೋ ನೋಡಿದವರಿಗೆ ಮತ್ತೆ ಇಬ್ಬರು ಕಮಿಟ್ ಆಗಿರಬಹುದಾ ಅಥವಾ ಸಿಂಗಲ್ಲಾ.. ಎಂಬ ಪ್ರಶ್ನೆ ಕಾಡುವುದರಲ್ಲಿ ಡೌಟ್ ಇಲ್ಲ. ಆದ್ರೆ ಕತ್ರಿನಾ ಕೈಫ್ ರಣಬೀರ್ ಗೆ ಹೀಗೆ ಹೊಡೆದಿರುವುದು ಜೋಶ್ ನಿಂದ ಮಾತ್ರ. ಸೀರಿಯಸ್ ಆಗಿ ಅಲ್ಲ ಎಂಬುದು ನೆನಪಿರಲಿ.[ಪ್ಲೀಸ್.. ಸಲ್ಮಾನ್ ನನಗೆ ಬಿಟ್ಟುಬಿಡು: ಆಲಿಯಾ'ಗೆ ಕತ್ರಿನಾ ರಿಕ್ವೆಸ್ಟ್]

ಕತ್ರಿನಾ ಕೈಫ್ ರವರು ರಣಬೀರ್ ಕಪೂರ್ ಗೆ ಕಪಾಳ ಮೋಕ್ಷ ಮಾಡಿದ ವಿಡಿಯೋ ನೋಡಲು ಕ್ಲಿಕ್ ಮಾಡಿ.

English summary
Katrina Kaif slapped Ranbir Kapoor for saying I Love You to someone else recently when they are in the Promotion of 'Jagga Jasoos'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada