»   » 'ಡರ್ಟಿ' ಬ್ಯೂಟಿ ವಿದ್ಯಾಬಾಲನ್ 'ಬೇಗಂ ಜಾನ್' ಆದ ಟ್ರೈಲರ್

'ಡರ್ಟಿ' ಬ್ಯೂಟಿ ವಿದ್ಯಾಬಾಲನ್ 'ಬೇಗಂ ಜಾನ್' ಆದ ಟ್ರೈಲರ್

Posted By:
Subscribe to Filmibeat Kannada

'ಡರ್ಟಿ' ಬ್ಯೂಟಿ ವಿದ್ಯಾಬಾಲನ್ ಈ ಹಿಂದೆ ಟ್ವೀಟ್ ಮಾಡಿದ್ದ 'ಬೇಗಂ ಜಾನ್' ಚಿತ್ರದ ಪೋಸ್ಟರ್ ಸಿನಿ ರಸಿಕರಲ್ಲಿ ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿತ್ತು. ಕಾರಣ ಪೋಸ್ಟರ್ ನಲ್ಲಿದ್ದ 'ಮೈ ಬಾಡಿ, ಮೈ ಹೌಸ್, ಮೈ ಕಂಟ್ರಿ, ಮೈ ರೂಲ್ಸ್' ಎಂಬ ಬರಹಗಳು. ಸಿನಿಮಾದ ಫಸ್ಟ್ ಲುಕ್ಕೇ ಹೀಗಿದೆ, ಇನ್ನೂ ಟ್ರೈಲರ್ ಹೇಗಿರುತ್ತೋ ಎನ್ನುವ ಕ್ಯೂರಿಸಿಟಿ ಇಟ್ಟುಕೊಂಡಿದ್ದವರಿಗಾಗಿ ಈಗ ಟ್ರೈಲರ್ ರಿಲೀಸ್ ಆಗಿದೆ.[ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಡರ್ಟಿ' ಬ್ಯೂಟಿ]

ವೇಶ್ಯೆಯರಂತೆ ಬದುಕಿ, ರಾಣಿಯರಂತೆ ಹೋರಾಟ ಮಾಡಿರುವ ಮಹಿಳೆಯರ ಕುರಿತ 'ಬೇಗಂ ಜಾನ್' ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ಹೊರಬಿದ್ದಿದ್ದು, ಇಂಟರ್ ನೆಟ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಲ್ಲದೇ ಯೂಟ್ಯೂಬ್ ನಲ್ಲಿ 1.6 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ.

Watch Vidya Balan Starrer 'Begum Jaan' Trailer

ಅಂದಹಾಗೆ ವಿದ್ಯಾಬಾಲನ್ ಮುಖ್ಯ ಭೂಮಿಕೆಯಲ್ಲಿರುವ 'ಬೇಗಂ ಜಾನ್' ದೇಶ ವಿಭಜನೆ ಬಳಿಕ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿದ್ದ ಮಹಿಳೆಯರ ಕುರಿತ, ಸತ್ಯ ಘಟನೆ ಆಧಾರಿತ ಚಿತ್ರಕಥೆ ಹೊಂದಿದೆ. ವಿದ್ಯಾಬಾಲನ್ ಸಖತ್ ಬೋಲ್ಡ್ ಮತ್ತು ಜಬರ್ದಸ್ತ್ ಲುಕ್ ನಲ್ಲಿ 'ಬೇಗಂ ಜಾನ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ನಾಸಿರುದ್ದೀನ್ ಶಾ, ಗೌಹರ್ ಖಾನ್, ಇಳಾ ಅರುಣ್, ರಜಿತ್ ಕಪೂರ್, ಚುಂಕಿ ಪಾಂಡೆ, ಪೂನಂ ಸಿಂಗ್ ರಾಜ್ ಪುತ್, ಪಲ್ಲವಿ ಶಾರ್ದ, ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Watch Vidya Balan Starrer 'Begum Jaan' Trailer

'ಬೇಗಂ ಜಾನ್' ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶ್ರೀಜಿತ್ ಮುಖರ್ಜಿ ಡೈರೆಕ್ಷನ್ ಮಾಡಿದ್ದು, ಮುಕೇಶ್ ಬಟ್, ವಿಶೇಶ್ ಭಟ್ ಮತ್ತು ಪ್ಲೇ ಎಂಟರ್ ಟೈನ್ ಮೆಂಟ್ ಜಂಟಿಯಾಗಿ ನಿರ್ಮಾಣ ಮಾಡುದ್ದಾರೆ. 'ಬೇಗಂ ಜಾನ್' ಬೆಂಗಾಲಿ ಸಿನಿಮಾ 'ರಾಜ್ ಕಹಿನಿ'ಯ ಹಿಂದಿ ರಿಮೇಕ್ ಚಿತ್ರವಾಗಿ ಮೂಡಿಬಂದಿದೆ.

'ಬೇಗಂ ಜಾನ್' ಏಪ್ರಿಲ್ 14 ರಂದು ದೇಶದಾದ್ಯಂತ ಬಿಡುಗಡೆ ಆಗುತ್ತಿದೆ. ಅಂದಹಾಗೆ ವಿದ್ಯಾಬಾಲನ್ ಬಹುನಿರೀಕ್ಷಿತ ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ.

English summary
Actress Vidya Balan Starrer 'Begum Jaan' Trailer was released recently. Here you can watch 'Begum Jaan'movie trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada