For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಪ್ರಕರಣ: ಕೊಲೆ ಅನುಮಾನ ಇನ್ನೂ ಪರಿಹಾರವಾಗಿಲ್ಲ ಎಂದ ಸಿಬಿಐ

  |

  ಸುಶಾಂತ್ ಸಿಂಗ್ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಇದೇ ಮೊದಲ ಬಾರಿಗೆ ಕೊಲೆ ಪ್ರಕರಣದ ಬಗ್ಗೆ ಮಾಧ್ಯಮದೊಟ್ಟಿಗೆ ಮಾಹಿತಿ ಹಂಚಿಕೊಂಡಿದೆ.

  ಪೂರ್ಣ ತನಿಖೆಯ ಮಾಹಿತಿಯನ್ನು ಹಂಚಿಕೊಂಡಿಲ್ಲವಾದರು, ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಸಿಬಿಐ ಅಧಿಕಾರಿಗಳು. ಅದರಲ್ಲಿ ಪ್ರಮುಖವಾದುದೆಂದರೆ, 'ಸುಶಾಂತ್ ಸಾವಿನ ಕುರಿತಾಗಿ ಯಾವುದೇ ಕೋನದ ತನಿಖೆಯನ್ನು, ಕೊಲೆಯದ್ದೂ ಸೇರಿ ಕೈಬಿಟ್ಟಿಲ್ಲ' ಎಂದಿದೆ.

  'ಸುಶಾಂತ್ ಸಿಂಗ್ ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ' ಎಂದ ಸಾರಾ ಅಲಿ ಖಾನ್.!

  ಅಲ್ಲಿಗೆ, ಸುಶಾಂತ್ ಸಿಂಗ್‌ ರದ್ದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಸಿಬಿಐ ಅಧಿಕಾರಿಗಳು ಬಂದಿಲ್ಲ, ಬದಲಿಗೆ ಕೊಲೆ ಆಯಾಮದಲ್ಲಿಯೂ ಪ್ರಕರಣದ ತನಿಖೆ ಜಾರಿಯಲ್ಲಿದೆ.

  ಸುಶಾಂತ್ ಸಾವು ಸಂಭವಿಸಿ 106 ದಿನ

  ಸುಶಾಂತ್ ಸಾವು ಸಂಭವಿಸಿ 106 ದಿನ

  ಸುಶಾಂತ್ ಸಿಂಗ್ ಸಾವು ಸಂಭವಿಸಿ 106 ದಿನಗಳಾಗಿವೆ. ಮೊದಲಿಗೆ ತನಿಖೆ ಪ್ರಾರಂಭಿಸಿದ್ದ ಮುಂಬೈ ಪೊಲೀಸರು ಆತ್ಮಹತ್ಯೆ ಎಂಬ ನಿರ್ಣಯಕ್ಕೆ ಬಂದಿದ್ದರು. ಆದರೆ ಆತ್ಮಹತ್ಯೆಗೆ ಕಾರಣವಾಗಿರುವ ಅನುಮಾನದ ಮೇಲೆ ಕೆಲವರ ವಿಚಾರಣೆ ನಡೆಸಿದ್ದರು. ಆ ನಂತರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು.

  ಸುಶಾಂತ್ ಸಾವಿನ ನಂತರ ಡ್ರಗ್ಸ್ ಪ್ರಕರಣ ಬಯಲಾಗಿದೆ

  ಸುಶಾಂತ್ ಸಾವಿನ ನಂತರ ಡ್ರಗ್ಸ್ ಪ್ರಕರಣ ಬಯಲಾಗಿದೆ

  ಪ್ರಕರಣವನ್ನು ವಹಿಸಿಕೊಂಡ ಸಿಬಿಐ ತನಿಖೆ ನಡೆಸುತ್ತಲೇ ಇದೆ, ಆದರೆ ಈ ವರೆಗೆ ಮಹತ್ವದ ಬೆಳವಣಿಗೆ ಕಂಡು ಬಂದಿಲ್ಲ. ಆದರೆ ಸುಶಾಂತ್ ಸಾವು ಪ್ರಕರಣದ ತನಿಖೆ ಮೂಲಕ ಸಿನಿಲೋಕದ ಡ್ರಗ್ಸ್ ಪ್ರಕರಣ ಹೊರಬಂದಿದ್ದು, ಅದೀಗ ದೊಡ್ಡ ಪ್ರಕರಣವಾಗಿ ಬೆಳೆದು ನಿಂತಿದೆ.

  ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ ಸೇರಿದಂತೆ ನಾಲ್ಕು ನಟಿಯರಿಗೆ ಎನ್‌ಸಿಬಿ ನೋಟಿಸ್

  ನಾವು ವೃತ್ತಿಪರ ತನಿಖೆ ಮಾಡುತ್ತಿದ್ದೇವೆ: ಸಿಬಿಐ

  ನಾವು ವೃತ್ತಿಪರ ತನಿಖೆ ಮಾಡುತ್ತಿದ್ದೇವೆ: ಸಿಬಿಐ

  ಕೇಂದ್ರ ತನಿಖಾ ಸಂಸ್ಥೆಯು (ಸಿಬಿಐ) ಸುಶಾಂತ್ ಸಿಂಗ್ ರಜಪೂತ್, ಸಾವಿಗೆ ಸಂಬಂಧಿಸಿದಂತೆ ವೃತ್ತಿಪರ ತನಿಖೆಯನ್ನು ನಡೆಸುತ್ತಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ಇದುವರೆಗೂ ಯಾವೊಂದು ಆಯಾಮವನ್ನೂ ತಳ್ಳಿ ಹಾಕಿಲ್ಲ ಅಥವಾ ಕೈಬಿಟ್ಟಿಲ್ಲ, ತನಿಖೆಯು ಮುಂದುವರಿಯುತ್ತಿದೆ' ಎಂದು ಸಿಬಿಐ ಅಧಿಕಾರಿಗಳು ಇಂದಿನ (ಸೋಮವಾರ) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada
  ಸುಶಾಂತ್ ನ ಕತ್ತು ಹಿಸುಕಿ ಕೊಲ್ಲಲಾಗಿದೆ: ವಕೀಲ ವಿಕಾಸ್ ಸಿಂಗ್

  ಸುಶಾಂತ್ ನ ಕತ್ತು ಹಿಸುಕಿ ಕೊಲ್ಲಲಾಗಿದೆ: ವಕೀಲ ವಿಕಾಸ್ ಸಿಂಗ್

  ಕೆಲವು ದಿನಗಳ ಹಿಂದಷ್ಟೆ ಸುಶಾಂತ್ ಸಿಂಗ್ ಕುಟುಂಬದ ಪರ ವಕೀಲರು ಹಾಗೂ ಕುಟುಂಬ ಸದಸ್ಯರು ಸಿಬಿಐ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸುಶಾಂತ್ ಅನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ನನ್ನ ಪರಿಚಯದ ಏಮ್ಸ್ ವೈದ್ಯರು ಹೇಳಿದ್ದಾರೆ ಎಂದಿದ್ದಾರೆ ಸುಶಾಂತ್ ಕುಟುಂಬದ ವಕೀಲ ವಿಕಾಸ್ ಸಿಂಗ್.

  ಸುಶಾಂತ್ ಜೊತೆಗೆ ನಟಿಸುವುದಿಲ್ಲ ಎಂದಿದ್ದ ನಟಿ: 'ಟಿವಿ ನಟ' ಎಂದು ಮೂದಲಿಸಿದ್ದರು!

  English summary
  CBI told media that they conducting professional investigation in Sushant Singh's death case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X