For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾಳಂತೆ ನನ್ನಿಂದ ಇದು ಸಾಧ್ಯವೇ ಇಲ್ಲ ಎಂದಿದ್ದರು ಕರೀನಾ ಕಪೂರ್

  |

  ಕರೀನಾ ಕಪೂರ್ ಬಾಲಿವುಡ್ ಬದುಕು ಆರಂಭಿಸಿ ಸುಮಾರು 20 ವರ್ಷಗಳಾಗಿವೆ. ತಮ್ಮ ಅಭಿನಯ ಮತ್ತು ಸೌಂದರ್ಯದಿಂದ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಅನೇಕ ಪಾತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ ನಾಯಕ ನಟಿಯಾಗಿದ್ದರೂ ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಇರ್ಫಾನ್ ಖಾನ್ ಮತ್ತು ರಾಧಿಕಾ ಮದನ್ ಅಭಿನಯದ 'ಅಂಗ್ರೇಜಿ ಮೀಡಿಯಂ' ಒಂದು ಉದಾಹರಣೆ.

  ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ಕೊಟ್ಟ ಸಿಎಂ ಹಾಗು ಯಶ್ | Yediyurappa | Yash | Jayapradha

  ಆದರೆ ಎರಡು ದಶಕಗಳಿಂದ ಚಿತ್ರರಂಗದಲ್ಲಿದ್ದರೂ ಕರೀನಾ ಅಂತಾರಾಷ್ಟ್ರೀಯ ಸಿನಿಮಾಗಳ ಕೆಲಸದಲ್ಲಿ ತೊಡಗಿಸಿಕೊಂಡವರಲ್ಲ. ಹಿಂದಿ ಸಿನಿಮಾಗಳಾಚೆ ಕರೀನಾ ಗುರುತಿಸಿಕೊಂಡಿಲ್ಲ. ಹಾಲಿವುಡ್ ಸಿನಿಮಾಗಳತ್ತಲೂ ಅವರು ಹೋದವರಲ್ಲ. ಆದರೆ ಅವರ ನಂತರ ಬಂದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿಯೂ ಸದ್ದು ಮಾಡಿದರು. ಮುಂದೆ ಓದಿ...

  ಹಾಲಿವುಡ್‌ಗೆ ಏಕೆ ಹೋಗಿಲ್ಲ?

  ಹಾಲಿವುಡ್‌ಗೆ ಏಕೆ ಹೋಗಿಲ್ಲ?

  ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕರೀನಾ ಮತ್ತು ಪ್ರಿಯಾಂಕಾ ಒಟ್ಟಿಗೆ ಭಾಗವಹಿಸಿದ್ದರು. ಆಗ ಕರೀನಾ ಅವರಿಗೆ ಕರಣ್, ನೀವೇಕೆ ಹಾಲಿವುಡ್ ಸಿನಿಮಾಗಳನ್ನು ಮಾಡುತ್ತಿಲ್ಲ? ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಬಯಕೆ ಉಂಟಾಗಿಲ್ಲವೇ? ಎಂದು ಪ್ರಶ್ನಿಸಿದ್ದರು.

  ನನಗೆ ಮನೆ, ಕುಟುಂಬ ಬೇಕು

  ನನಗೆ ಮನೆ, ಕುಟುಂಬ ಬೇಕು

  ಅದಕ್ಕೆ ಕರೀನಾ, 'ಅಲ್ಲಿಗೆ ಹೋಗಲು ನನ್ನಿಂದ ಸಾಧ್ಯವಿಲ್ಲ. ನನ್ನ ಬೇರು ಇಲ್ಲಿಯೇ ಗಟ್ಟಿಯಾಗಿದೆ. ನನ್ನ ಕುಟುಂಬ, ನನ್ನ ಪ್ರೀತಿ ಪಾತ್ರರು ಎಲ್ಲರೂ ಇಲ್ಲಿದ್ದಾರೆ. ಈಗ ನನ್ನ ಮಗು ಕೂಡ ಇದೆ. ಇಲ್ಲಿ ನಾನು ಆಯ್ಕೆ ಮಾಡಿಕೊಂಡು ಮುಂದೆ ಸಾಗುವುದರ ಕುರಿತು ಮಾತ್ರ ಯೋಚಿಸುತ್ತೇನೆ' ಎಂದಿದ್ದರು.

  ಪ್ರಿಯಾಂಕಾಳದ ದಿಟ್ಟತನವಿದು

  ಪ್ರಿಯಾಂಕಾಳದ ದಿಟ್ಟತನವಿದು

  'ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ನಾನು ನೋಡಿರುವ ಪ್ರಿಯಾಂಕಾರ ನಿರ್ಭಿಡೆಯ ಮುಖವಿದು. ಅದಕ್ಕಾಗಿ ಆಕೆಯನ್ನು ನಿಜಕ್ಕೂ ಶ್ಲಾಘಿಸುತ್ತೇನೆ. ನನಗೆ ಆ ಛಾತಿ ಇದೆ ಎಂದು ಅನಿಸುತ್ತಿಲ್ಲ. ನಾನಿಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಖುಷಿಯಿಂದಿದ್ದೇನೆ. ಆದರೆ ನನಗೆ ಅಂತಹ ಮಹತ್ವಾಕಾಂಕ್ಷೆಯಿಲ್ಲ' ಎಂದು ಹೇಳಿದ್ದರು.

  ನನಗೆ ಮಹತ್ವಾಕಾಂಕ್ಷೆಗಳಿಲ್ಲ

  ನನಗೆ ಮಹತ್ವಾಕಾಂಕ್ಷೆಗಳಿಲ್ಲ

  'ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಬಹುದೊಡ್ಡ ಬೆಂಚ್ ಮಾರ್ಕ್ ಎಂದು ಪರಿಗಣಿಸಬೇಕಿಲ್ಲ. ಈ ಸಾಧನೆಗೆ ನಿದ್ದೆ, ಊಟಗಳಿಲ್ಲದೆ ಕೆಲಸ ಮಾಡಬೇಕು' ಪ್ರಿಯಾಂಕಾ ಹೇಳಿದ್ದರು. ಅದಕ್ಕೆ ಕರೀನಾ, ನಿಜ. ನನಗೆ ನಿದ್ದೆ ಮತ್ತು ಊಟ ಬೇಕು. ನನಗೆ ನನ್ನ ಕುಟುಂಬ ಕೂಡ ಬೇಕು. ನನಗೆ ಹಾಲಿವುಡ್‌ಗೆ ಹೋಗಲೇಬೇಕೆಂಬ ಪ್ರಿಯಾಂಕಾರಷ್ಟು ಮಹತ್ವಾಕಾಂಕ್ಷೆಯಿಲ್ಲ. ಆದರೆ ಇಲ್ಲಿ ಮಾಡಿರುವುದು ಕಡಿಮೆ ಸಾಧನೆಯೂ ಅಲ್ಲ' ಎಂದಿದ್ದರು.

  English summary
  Bollywood actress Kareena Kapoor in Coffee With Karan show said, she can't go to hollywood and work there as Priyanka Chopra did.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X